ದಾವಣಗೆರೆ:ನಮ್ಮವರೇ ಅಲ್ಲ, ಕಾಂಗ್ರೆಸ್, ಜೆಡಿಎಸ್​​ನವರು ತಪ್ಪು ಮಾಡಿದ್ರೂ ಬಿಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಪ್ರಲ್ಹಾದ್ ಜೋಶಿ ಅವರು ಶಾಸಕ ವಿರೂಪಾಕ್ಷಪ್ಪ ಲೋಕಾಯುಕ್ತ ದಾಳಿ ಪ್ರಕರಣ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ವಿರೂಪಾಕ್ಷಪ್ಪ ಲೋಕಾಯುಕ್ತ  ದಾಳಿ ಪ್ರಕರಣ ಕುರಿತಾಗಿ ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಲೋಕಾಯುಕ್ತಕ್ಕೆ ಬಲ‌ ತುಂಬುವ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದ ಶಾಸಕರೇ ತಪ್ಪು ಮಾಡಿರುವುದು. ನಾವು ಮನಸ್ಸು ಮಾಡಿದ್ರೆ ಪ್ರಕರಣ ಮುಚ್ಚಿ ಹಾಕಬಹುದಿತ್ತು. ಆದರೆ, ನಾವು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ನಮ್ಮವರನ್ನೇ ಬಿಟ್ಟಿಲ್ಲ ಉಳಿದವರನ್ನು ಬಿಡ್ತಿವಾ ಎಂದಿದ್ದಾರೆ.
ಇದನ್ನೂ ಓದಿ:ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ತರಗತಿಯಲ್ಲೇ ಪ್ರಾಣ ಬಿಟ್ಟ ಶಿಕ್ಷಕ
ನಮ್ಮವರೇ ಅಲ್ಲ, ಕಾಂಗ್ರೆಸ್, ಜೆಡಿಎಸ್​​ನವರು ತಪ್ಪು ಮಾಡಿದ್ರೂ ಬಿಡಲ್ಲ. ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಬೀಗ ಹಾಕಿದ್ದು ಕಾಂಗ್ರೆಸ್ ಆಗಿದೆ. ಲೋಕಾಯುಕ್ತ ಬೇಡವೆಂದು ಸುಪ್ರೀಂಗೆ ಮೇಲ್ಮನವಿ ಹೋಗಿ ಅಂದಿದ್ದರು. ನಾವು ಲೋಕಾಯುಕ್ತ ವಿರುದ್ಧ ಸುಪ್ರೀಂಗೆ ಹೋಗಲಿಲ್ಲ. ಸುಪ್ರೀಂಗೆ ಹೋಗುವ ಬದಲು ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೈಲಾಸ’ದಲ್ಲಿ ಉಚಿತ ಇ-ಪೌರತ್ವಕ್ಕಾಗಿ ಜನರನ್ನು ಆಹ್ವಾನಿಸಿದ ನಿತ್ಯಾನಂದ!
ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಅಲ್ಲ ಹಗರಣಗಳೇ ನಡೆದಿವೆ. ಅವರ ಅವಧಿಯಲ್ಲಿ ನೆಹರು ಜೀಪ್ ಹಗರಣದಿಂದ ಕಾಮನ್ ವೆಲ್ತ್ ವರೆಗೂ ಹಗರಣ ನಡೆದಿದೆ. ಕಾಂಗ್ರೆಸ್ ನವರ ವಿರುದ್ಧ 59 ಪ್ರಕರಣ ದಾಖಲಾಗಿವೆ. ತಪ್ಪು ಯಾರೂ ಮಾಡಿದ್ರೂ ತಪ್ಪೇ ಆಗಿದೆ. ಲೋಕಾಯುಕ್ತ ವರದಿ ಬಂದ ತಕ್ಷಣ ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈ ಗೊಳ್ಳುತ್ತೇವೆ ಎಂದು ನುಡಿದಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಹುಲ್ ಗಾಂಧಿಗೆ ಪ್ರಬುದ್ದತೆ ಇಲ್ಲ. ಜಗತ್ತಿನಲ್ಲಿ ನಮ್ಮದು ಅತ್ಯಂತ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
