ಧಾರವಾಡ:ಪಂಚೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೆಯಬಾರದೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಜೋಶಿ, ಕಾಂಗ್ರೆಸ್ ಪಕ್ಷದ ಲೋ ಲೆವೆಲ್ ಲಾಂಗ್ವೇಜ್ ಇದು. ಆದರೆ, ನಾನು ಭಾರತ ಸರ್ಕಾರದ ಮಂತ್ರಿಯಾಗಿ ಆ ಲೆವೆಲ್​ಗೆ ಇಳಿದು ಮಾತಾಡಲ್ಲ. ಸಿದ್ದರಾಮಯ್ಯನವರೂ ಸಹ ಲುಂಗಿ ಲೀಡರ್ ಅನ್ನೋದನ್ನ ಕಾಂಗ್ರೆಸ್ ಪಕ್ಷ ಮರೆಯಬಾರದು. ನಾವೂ ಸಹ ಅದೇ ಭಾಷೆಯಲ್ಲಿ ಉತ್ತರ ಕೊಡಬಹುದು. ಆದರೆ ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಯ ‘ಫಟಿಂಗ ಪಂಚೆ‘ಯ ವಿರುದ್ಧ ಮಾತನಾಡಿದ್ದೇ ತಡ ರೇಣುಕಾಚಾರ್ಯರಿಗೆ 24 ಗಂಟೆಯೊಳಗೆ ನೋಟಿಸ್ ಜಾರಿಯಾಗಿದೆ.ಆದರೆ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದು ಬಹಿರಂಗವಾಗಿಲ್ಲ, ನೋಟಿಸ್ ತೋರಿಸಿದರೆ 10 ಲಕ್ಷ ಬಹುಮಾನ ಘೋಷಿಸಿದ್ದಾರೆ ಯತ್ನಾಳ್.ಪಂಚೆ ಪಡೆಯ ಮಾತುಗಳು ಪಕ್ಷ ವಿರೋಧಿ ಎಸಿಕೊಳ್ಳುವುದಿಲ್ಲವೇ?ಚುನಾವಣೆ ಮುಗಿದ ನಂತರವೂ BSY…
ಇದನ್ನೂ ಓದಿ:ಬುಲ್ಧಾನ ಬಸ್​ ದುರಂತ; ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೆವು ಎಂದ ಪ್ರತ್ಯಕ್ಷದರ್ಶಿ
ಕಾಂಗ್ರೆಸ್ ಪಕ್ಷ ಬಳಸಿರುವ ಪಂಚೆ ಭಾಷೆಗೆ ನನ್ನ ಬಳಿ ಉತ್ತರ ಇಲ್ಲ ಅಂತೇನಿಲ್ಲ, ನನ್ನ ಬಾಯಲ್ಲಿ ಉತ್ತರ ಇದೆ, ಆದರೆ ಆ ರೀತಿಯ ಅಸಭ್ಯ ಭಾಷೆ ಬಳಸೋದು ಯಾವ ಕಾಲಕ್ಕೂ ಸರಿ ಅಲ್ಲ. ನೇರವಾಗಿ ರಾಜಕಾರಣದಲ್ಲಿ ಡೇ ಟು ಡೇ ಬೇಸಿಸ್​ನಲ್ಲಿ ಸಂಬಂಧವಿಟ್ಟುಕೊಳ್ಳದ, ಸಂಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಭಾಷೆ ಬಳಸಿದ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ಕೊಡ್ತಾರೆ. ಕಾಂಗ್ರೆಸ್ ಪಕ್ಷ ಇದನ್ನು ಇಲ್ಲಿಗೇ ನಿಲ್ಲಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 9 =
Remember me
