ಹುಬ್ಬಳ್ಳಿ:ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿರುವ ಹಿನ್ನೆಲೆ ಇಂದು ನವದೆಹಲಿಯಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿರುವ ಕಾಂಗ್ರೆಸ್​, ನಿರುದ್ಯೋಗ ಮತ್ತು ಜಾತಿ ಗಣತಿಗೆ ಹೆಚ್ಚು ಆದ್ಯತೆ ನೀಡಿದೆ. ಇನ್ನು ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾರ್ಮಿಕ ಸಚಿವ ಸಂತೋಷ್ ಲಾಡ್​ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಅಶ್ವಿನಿ ಪುನೀತ್‌ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರತಿಕ್ರಿಯೆ ನೀಡಿದ ನಟ ದರ್ಶನ್
“ಗ್ಯಾರಂಟಿ ಕೊಟ್ಟ ಮೇಲೆ ಕಾಂಗ್ರೆಸ್ ಪ್ರಚಾರ ಏಕೆ ಮಾಡ್ತಿದೆ ಅನ್ನೋದು ತಿಳಿಯುತ್ತಿಲ್ಲ. ಸಂತೋಷ್​ ಲಾಡ್​ ಮನಸ್ಸಿಗೆ ಬಂದಂತೆ ಮಾತಾಡ್ತಾರೆ. ಬಹುಶಃ ಮೇಲಿನಿಂದ ನಿರ್ದೇಶನ ಇರೋ ಕಾರಣಕ್ಕೆ ಹಾಗೆ ಮಾತಾಡ್ತಿರಬೇಕು. ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಇಡೋದ್ರಲ್ಲಿ ತಪ್ಪೇನಿದೆ. ಇವರು ಉದ್ರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದರೆ ನಡೆಯುತ್ತಾ?” ಎಂದು ವ್ಯಂಗ್ಯವಾಡಿದರು.
“ಕೊಡಲಾರದ ಅನ್ಯ ಭಾಗ್ಯದ ಬಗ್ಗೆ ಪ್ರಚಾರ ಮಾಡ್ತಾರೆ. ಇಲ್ಲಿಯವರೆಗೆ ಒಂದು ಕಾಳು ಅಕ್ಕಿಯನ್ನು ಕೊಡಲಾಗಿಲ್ಲ. ಕೇಂದ್ರದ ಅಕ್ಕಿಯನ್ನು ನಾವೇ ಕೊಟ್ಟಿದ್ದೇವೆ ಅಂತ ಹೇಳ್ತಾರೆ. ಮುದ್ರಾಂಕ ಶುಲ್ಕ, ವಾಹನ ತೆರಿಗೆ ಸೇರಿ ಎಲ್ಲ ಶುಲ್ಕ ಏರಿಕೆಯಾಗಿದೆ. ಉಚಿತ ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ಕಷ್ಟ ನೀಡುತ್ತಿದ್ದಾರೆ. ಗ್ಯಾರಂಟಿ ಕೊಟ್ಟ ಮೇಲೆ ಪ್ರಚಾರ ಏಕೆ ಮಾಡ್ತೀರಾ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ರಂಗವಲ್ಲಿ        ಮತಜಾಗೃತಿ ಮೂಡಿಸಿದ ಕಲಾಕೃತಿಗಳು
“ನಾವು ಕೊಟ್ಟಿದ್ದರ ಬಗ್ಗೆ ಮಾತ್ರ ಹೇಳುತ್ತಿದ್ದೇವೆ. ಕಾಂಗ್ರೆಸ್​ನವರು ಕೊಡದೆ ಇರೋದರ ಬಗ್ಗೆ ಹೇಳ್ತಿದ್ದಾರೆ. ನಾಲ್ಕು ಕೋಟಿ ಮನೆ ನಿರ್ಮಾಣ ಸುಳ್ಳು ಎಂದು ಹೇಳುವರಿಗೆ ಈಗಾಗಲೇ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆ ನಿರ್ಮಾಣವಾಗಿದೆ ಎಂಬುದರ ಬಗ್ಗೆ ಗಮನಯಿರಲಿ. ಲಾಡ್ ಹಳ್ಳಿಗೆ ಹೋಗಿಲ್ಲ, ಹಾಗಾಗಿ ಅವರಿಗೆ ಗೊತ್ತಿಲ್ಲ” ಎಂದರು.
ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್​ ನೋಡಿದ್ರೆ ಕುಸಿದು ಬಿಳೋದು ಪಕ್ಕಾ

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
