ಧಾರವಾಡ:ಇಂದು ಧಾರವಾಡದ ಮುರುಘಾಮಠ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ನಿನ್ನೆ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ 20 ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಇದನ್ನು ಅಳೆದು ತೂಗಿ ಆಯ್ಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಸುಖಬೀರ್ ಸಿಂಗ್ ಸಂಧು-ಜ್ಞಾನೇಶ್ ಕುಮಾರ್ ನೇಮಕ
“ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅರ್ಥದಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಹತ್ತು ವರ್ಷದಲ್ಲಿ ದೇಶದಲ್ಲಿನ ಅಭೂತಪೂರ್ವ ಬದಲಾವಣೆಯಾಗಿದೆ. ಆರ್ಥಿಕ, ಭದ್ರತೆ, ಮೂಲಭೂತ ಸೌಲಭ್ಯ ಸೇರಿ ಎಲ್ಲ ಕ್ಷೇತ್ರದಲ್ಲಿ ಸುಧಾರಣೆ ಕಂಡುಬಂದಿದೆ. ದೆಹಲಿಯಲ್ಲಿ ದೊಡ್ಡ ಜವಾಬ್ದಾರಿ ನನಗೆ ಕೊಟ್ಟಿದ್ದರು. ಅಭಿವೃದ್ಧಿ ಕೆಲಸದ ಜತೆ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಮೂರುವರೆ ಲಕ್ಷ ಹೆಚ್ಚಿನ ಅಂತರದಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ” ಎಂದರು.
“ನಾಲ್ಕು ಸಲ ಆಯ್ಕೆ ಮಾಡಿದ ಮತದಾರ ಪ್ರಭುಗಳಿಗೆ ನಾನು ಮತ್ತೊಮ್ಮೆ ವಂದಿಸುವೆ. ಇನ್ನೊಮ್ಮೆ ಆಶೀರ್ವಾದ ಮಾಡುವಂತೆ ಕೇಳುವೆ ಎಂದ ಕೇಂದ್ರ ಸಚಿವರು, ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸ್ಪಂದಿಸಿ, ಯಾರೂ ರೆಬೆಲ್ ಆಗುವುದಿಲ್ಲ, ಎಲ್ಲರೊಂದಿಗೆ ಮಾತನಾಡುವೆ, 3-4 ಸಲ ಟಿಕೆಟ್ ಪಡೆದವರಿದ್ದಾರೆ. ಅದರಲ್ಲಿ ಕೆಲವರನ್ನು ಮುಂದುವರೆಸಿದ್ದಾರೆ” ಎಂದರು.
ಇದನ್ನೂ ಓದಿ:Chanakya Niti: ಈ 5 ವಿಷಯಗಳನ್ನು ಹೆಂಡತಿಗೆ ಹೇಳಬಾರದು…ಒಂದು ವೇಳೆ ಹೇಳಿದರೆ ನಿಮ್ಮ ಸಂಬಂಧ ಮುರಿದು ಬೀಳಬಹುದು!
“ಆಯಾ ರಾಜಕೀಯ ನೋಡಿ ನಿರ್ಣಯ ಮಾಡಿದ್ದಾರೆ. ಎಲ್ಲರೂ ಪಕ್ಷಕ್ಕೆ ಅನಿವಾರ್ಯ, ಎಲ್ಲರೊಂದಿಗೆ ಮಾತನಾಡಿ ಸರಿಪಡಿಸಲಾಗುವುದು.ಬೆಳಗಾವಿ ಲಿಸ್ಟ್​ನಲ್ಲಿ ಜಗದೀಶ ಶೆಟ್ಟರ್​ ಅವರ ಹೆಸರಿದೆ. ಎಲ್ಲಿಯೆ ಟಿಕೆಟ್ ಸಿಕ್ಕರೂ ಸಂತೋಷ ಪಡುವೆ, ಅವರು ನಮ್ಮ ಪಕ್ಷದ ಹಿರಿಯ ನಾಯಕರು. ನರೇಂದ್ರ ಮೋದಿ ನೇತೃತ್ವದಲ್ಲಿ ಯಾರೂ ಬಿಜೆಪಿ ಬಿಡುವುದಿಲ್ಲ” ಎಂದರು.
“ನಾಲ್ಕು ಅವಧಿ ಮುಗಿಸಿ ಐದಕ್ಕೆ ಪದಾಪರ್ಪಣೆ ಮಾಡುತ್ತಿರುವೆ. ವಿಕಸಿತ ಭಾರತದಲ್ಲಿ ಧಾರವಾಡ ವಿಕಸಿತವಾಗುತ್ತಿದೆ. ಜನ ಮತ್ತೆ ಆಶೀರ್ವಾದ ಮಾಡ್ತಾರೆ, ಇದೊಂದು ದಾಖಲೆಯಾಗುತ್ತದೆ” ಎಂದರು.
ಕಾಫಿನಾಡಲ್ಲಿ ವರ್ಷದ ಮೊದಲ ಭರ್ಜರಿ ಮಳೆ! 1 ಗಂಟೆಗೆ ಒಂದೂವರೆ ಇಂಚಿನಷ್ಟು ವರುಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
