ಕಲಬುರಗಿ:ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ಹಿಂದೂಗಳು ಮನೆಮನೆಯಲ್ಲಿ ತಲ್ವಾರ್​ ಇಟ್ಟುಕೊಳ್ಳಬೇಕು ಎಂದಿದ್ದಾರೆ.
ಕಳೆದ ರಾತ್ರಿ ನಡೆದ ಹಿಂದೂ ಸಂತ ಸಮಾವೇಶದಲ್ಲಿ ಶ್ರಿರಾಮ ಸೇನೆ ಸಂಸ್ಥಾಪಕ ಹೇಳಿಕೆ ನೀಡಿದ್ದು ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಎಲ್ಲರಿಗೂ ಕಾಣುವ ಹಾಗೆ ಇಡಬೇಕು. ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೆವು. ಈಗ ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದರೆ ಇನ್ನು ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು
ಪೊಲೀಸರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಗೆ ಪೂಜೆ ಮಾಡೋದಿಲ್ಲ. ಅವರು ಬಂದೂಕುಗಳಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿ ಒಂದು ತಲವಾರ್ ಇಡೋದು ಅಪರಾಧವಲ್ಲ.ಪೊಲೀಸರು ಬಂದು ಕೇಸ್ ಹಾಕ್ತೀವಿ ಅಂತ ಹೆದರಿಸಿದರೆ ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಎಂದು ಹೇಳಿ’ ಎಂದಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ತಲವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ. ತಲವಾರ್ ಇಡೋದು ಯಾರನ್ನಾದ್ರು ಹೊಡೆಯಲು ಅಲ್ಲ. ಅದು ಧರ್ಮದ ರಕ್ಷಣೆ, ದೇಶದ ರಕ್ಷಣೆಗಾಗಿ ನಾವು ಶಸ್ತ್ರಗಳನ್ನು ಮನೆಯಲ್ಲಿ ಇಡಬೇಕು’ ಎಂದಿದ್ದಾರೆ.
Sign in to your account
Please enter an answer in digits:nineteen − twelve =
Remember me
