ಬಾಗಲಕೋಟೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡನೆ ಮಾಡಿರುವ ರಾಜ್ಯ ಬಜೆಟ್​ನಲ್ಲಿ ಮುಸ್ಲಿಮರನ್ನು ಓಲೈಕೆ ಮಾಡಲಾಗಿದೆ. ಮುಸ್ಲಿಂ ಸ್ಮಶಾನಕ್ಕಾಗಿ 10 ಕೋಟಿ ರೂ. ಹಾಗೂ ಮುಸ್ಲಿಂರಿಗಾಗಿ ವಸತಿ ಶಾಲೆಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ವಕ್ಫ್ ಬೋರ್ಡ್‌ನಲ್ಲಿ ಸಾವಿರಾರು ಕೋಟಿ ಇದೆ. ಹೀಗಿದ್ದರೂ ಹಣ ಬಿಡುಗಡೆ ಮಾಡುವ ಅಗತ್ಯತೆ ಏನಿತ್ತು? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ವಕ್ಫ್ ಬೋರ್ಡ್ ಇರುವುದೇ ಮುಸ್ಲಿಮರ ಮಸೀದಿ, ದರ್ಗಾ, ಸ್ಮಶಾನ ಅಭಿವೃದ್ಧಿ ಮಾಡಲು. ಈಗಾಗಲೇ ಉರ್ದು ಶಾಲೆಗಳು ಬೇಕಾದಷ್ಟಿವೆ. ಹೀಗಿದ್ದರೂ ಮತ್ತೆ ಹೆಚ್ಚುವರಿ 10 ಕೋಟಿ ರೂ. ಯಾಕೆ? ಇದು ಖಂಡನೀಯ. ಚುನಾವಣೆಯ ಸಮಯದಲ್ಲಿ ಮುಸ್ಲಿಮರನ್ನು ಓಲೈಸುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದರು.
ಕರಾವಳಿ ಭಾಗದಲ್ಲಿ ನಮ್ಮ ಸಂಸ್ಕ್ರತಿ, ಸಂಪ್ರದಾಯ ಇದೆ. ಭೂತಕೋಲ, ದೇವರು-ದೈವ ಪದ್ದತಿ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ವೈಶಿಷ್ಟ್ಯ ಪೂರ್ಣವಾಗಿರುವ ಸಂಸ್ಕ್ರತಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಇಡೀ ರಾಜ್ಯದಲ್ಲಿ ಬಯಲಾಟ, ನಾಟಕಕಾರರಿಗೆ, ಕಲಾಕಾರರಿಗೆ ಪ್ರೋತ್ಸಾಹ ಕೊಡುವ ಪ್ರಕ್ರಿಯೆ ಬಜೆಟ್‌ನಲ್ಲಿ ಯಾವುದೂ ಇಲ್ಲ. ಕೆಲವು ಕೊರತೆಗಳ ಮಧ್ಯದಲ್ಲಿ ಸಂಪೂರ್ಣ ಬಜೆಟ್ ಸ್ವಾಗತಾರ್ಹ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 13 =
Remember me
