ಬೆಂಗಳೂರು:ಸ್ಯಾಂಡಲ್​​ವುಡ್​ ಡ್ರಗ್ಸ್​ ಲಿಂಕ್​ ಬಗ್ಗೆ ಪ್ರತಿದಿನವೂ ಒಂದೊಂದು ಮಾಹಿತಿ ಕೊಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು.
ನಿಮ್ಮ ಬಳಿ ಇರುವ ಎಲ್ಲ ಮಾಹಿತಿಗಳನ್ನೂ ಕೊಡಿ ಎಂದು ಸಿಸಿಬಿ ಅಧಿಕಾರಿಗಳು ನಿನ್ನೆ ನೋಟಿಸ್​ ನೀಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದ ಪ್ರಶಾಂತ್​ ಅವರು, ತಮ್ಮ ಬಳಿ ಇದ್ದ ಕೆಲವು ವಿಡಿಯೋ, ಮಹತ್ವದ ಮಾಹಿತಿಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ:ಯಾರ ಸೆಲ್​ ಪಕ್ಕ ರಿಯಾಳನ್ನು ಇರಿಸಲಾಗಿದೆ ಗೊತ್ತೆ?; ಅಲ್ಲಿ ಫ್ಯಾನ್​ ಇಲ್ಲ, ಹಾಸಿಗೆಯೂ ಇಲ್ಲ!
ಪ್ರಶಾಂತ್​ ಸಂಬರಗಿ ಅವರು ನೀಡಿದ ವಿಡಿಯೋಗಳು ಈಗಾಗಲೇ ಸಿಸಿಬಿ ಅಧಿಕಾರಿಗಳ ಬಳಿ ಇದ್ದಿದ್ದರಿಂದ, ಇವೆಲ್ಲವೂ ನಮ್ಮ ಬಳಿ ಇರುವಂಥವೇ ಆಗಿದೆ. ಬೇರೆ ವಿಡಿಯೋ, ದಾಖಲೆಗಳಿದ್ದರೆ ಕೊಡಿ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.
ಯಾವ ಆಧಾರದ ಮೇಲೆ ಮಾಧ್ಯಮಗಳ ಎದುರು ಸಾಕ್ಷಿ ಇದೆ ಎಂದು ಹೇಳಿದ್ದೀರಿ? ಮತ್ತೆ ನೋಟಿಸ್​ ಕೊಡುತ್ತೇವೆ. ಶುಕ್ರವಾರ ಪೂರಕ ದಾಖಲೆ ತರಬೇಕು ಎಂದು ಎಸಿಪಿ ಗೌತಮ್ ಹೇಳಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + one =
Remember me
