ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಯುವಕನನ್ನು ಅಪಹರಿಸಿ, ಮನಬಂದಂತೆ ಥಳಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನವಾಗಿರುವ ನಟ ದರ್ಶನ್​ರನ್ನು ನ್ಯಾಯಾಲಯ ಮತ್ತೆ ಎರಡು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ. ಗೆಳತಿ ಪವಿತ್ರಾ ಗೌಡರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಲ್ಲ ಆರೋಪಿಗಳು ಜೈಲುಪಾಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ದರ್ಶನ್​ ಬಗ್ಗೆ ಒಂದೊಂದೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಎಂಎಲ್​ಸಿ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಹೀಗಿದೆ ದೂರಿನ ಸಾರಾಂಶ
ದರ್ಶನ್​ ವಿರುದ್ಧ ಬಿಗ್​ಬಾಸ್ ಸೀಸನ್​ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರು ತಮ್ಮ ಫೇಸ್​ಬುಕ್​ ಪೇಜ್​ ಮೂಲಕ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಆರು ಅಡಿ ದೈತ್ಯಾಕಾರನ ಕರ್ಮ ಕಾಂಡ ಎಂಬ ಶೀರ್ಷಿಕೆಯಲ್ಲಿ ನಿತ್ಯವೂ ದರ್ಶನ್​ ಕುರಿತಾದ ಒಂದೊಂದು ಕರಾಳ ಕತೆಯನ್ನು ಬಹಿರಂಗಪಡಿಸುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯ ಎಂಬುದು ಸಂಬರಗಿಗೆ ಮಾತ್ರ ತಿಳಿದಿದೆ.
ಈಗಾಗಲೇ ಮೂರು ಕರ್ಮಕಾಂಡಗಳನ್ನು ಬಿಚ್ಚಿಟ್ಟಿರುವ ಪ್ರಶಾಂತ್​ ಸಂಬರಗಿ, ಇದೀಗ ನಾಲ್ಕನೇ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ. ದರ್ಶನ ಕರ್ಮ ಕಾಂಡ ಭಾಗ 4 ಎಂಬ ಶೀರ್ಷಿಕೆಯೊಂದಿಗೆ ಸೈಕೋ ಮುಲಾಮ್ ರಾಜ, ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎಂದು ಬರವಣಿಗೆ ಆರಂಭಿಸಿರುವ ಪ್ರಶಾಂತ್​ ಸಂಬರಗಿ, ಡಿ ಬಾಸ್ ಐಇಡಿ (Intermittent Explosive Disorder) ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಕನ್ನಡದಲ್ಲಿ ಈ ಮಾನಸಿಕ ಕಾಯಿಲೆಯನ್ನು ಮರುಕಳಿಸುವ ಸ್ಫೋಟಕ ಅಸ್ವಸ್ಥತೆ ಎಂದು ಕರೆಯುತ್ತಾರೆ. ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಪ್ರವೃತಿ ಈ ಕಾಯಿಲೆಯ ಲಕ್ಷಣವಾಗಿದೆ. ಇನ್ನು ಈ ಸ್ಥಿತಿನಲ್ಲಿ ಮಾದಕ ಸೇವನೆ ಮಾಡಿದಾಗ ಇವನ ಕೈಗೆ ಸಿಕ್ಕಿಹಾಕಿಕೊಂಡರೆ, ಶತಕೋಟಿ ದೇವರುಗಳು ಬಡಪಾಯಿಗಳನ್ನು ಉಳಿಸುವುದಕ್ಕೆ ಆಗುವುದಿಲ್ಲ.

ಇದನ್ನೂ ಓದಿ:ಕೊಲೆಗೆ ಸಂಚು ರೂಪಿಸಿದ್ದವರ ಬಂಧನ, ತಲ್ವಾರ್, ಚಾಕು ಹಾಗೂ ವಾಹನಗಳ ವಶ
ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿಯ ಎಲ್ಲ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ, ಇವನ ಬಲಗೈನಲ್ಲಿ ಬ್ಯಾಂಡೇಜ್ ಇರತ್ತದೆ. ಯಾಕೆ ಅಂದರೆ ಇವನು ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ತನ್ನ ವಿಶ್ವ ರೂಪ ತೋರಿಸಿರುತ್ತಾನೆ. ಇವನ ಈ ವಿಚಿತ್ರ ನಡವಳಿಕೆ, ರೌಡಿಸಂ ಕೃತ್ಯಗಳು, ಅನೇಕರ ಮೇಲೆ ಹಲ್ಲೆಗಳನ್ನು ಎಷ್ಟೋ ಜನರು ನೋಡಿದ್ದಾರೆ. ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದ ರೀತಿ ಬೆಳೆಯುತ್ತಿದೆ.
ಇನ್ನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಏನು ಗೊತ್ತಾ? ಹೇಳುತ್ತೇನೆ ಕೇಳಿ, ಮಾಡೋದೆಲ್ಲ ಮಾಡಿ, ಮರುದಿನ ಬೆಳಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡಿಕೊಂಡು, ಅವನೇ ಖುದ್ದಾಗಿ ಹಲ್ಲೆ ಮಾಡಿದ ಸಂತ್ರಸ್ತನಿಗೆ ಮುಲಾಮು ಹಚ್ಚುತ್ತಾನಂತೆ ಈ ಮುಲಾಮು ರಾಜ. ಆದರೆ, ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ. ದಾಸ ಓರ್ವ ಸೈಕೋ. ಆತನಿಗೆ ಚಿಕಿತ್ಸೆ ಬೇಕಾಗಿದೆ. ಇವಾಗ ನೀವೇ ಹೇಳಿ ಇವನ್ನನ್ನಾ ಬಿಡಬೇಕಾ? ಒಂದು ಆಯಾಮದಲ್ಲಿ ನೋಡಿದ್ರೆ ಪಾಪ ಅನಿಸುತ್ತದೆ. ದಾಸನಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಪ್ರಶಾಂತ್​ ಸಂಬರಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಗಾಯಕಿ ಶ್ರೇಯಾ ಘೋಷಾಲ್ ಪತಿ ಯಾರು ಗೊತ್ತಾ? ದೊಡ್ಡ ಸಂಸ್ಥೆಯೊಂದರ ಮುಖ್ಯಸ್ಥ..
ಕರ್ಮಕಾಂಡ ಭಾಗ-1ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ಸಂಗೀತ ನಿರ್ದೇಶಕ ಮತ್ತು ಟಿವಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರುವ ನನ್ನ ಸ್ನೇಹಿತನಿಗೆ 2 ವರುಷದ ಹಿಂದೆ ಹಾರ್ಟ್ ಅಟ್ಯಾಕ್ ಆಗಿತ್ತು. ಅದಕ್ಕೆ ಕಾರಣ ರೌಡಿ ಬಾಸ್. ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆಯ ಕರೆ ಮತ್ತು ಮಾನಸಿಕ ಹಿಂಸೆ ಎಂದು ಪ್ರಶಾಂತ್​ ಸಂಬರಗಿ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಮೂರು ದಿನಗಳ ಹಿಂದೆ ಬರೆದುಕೊಂಡಿದ್ದರು. ಇದಕ್ಕೆ ಆರು ಅಡಿ ದೈತ್ಯಾಕಾರನ ಕರ್ಮ ಕಾಂಡ ಭಾಗ-1 ಎಂದು ಶೀರ್ಷಿಕೆ ನೀಡಿದ್ದರು.
ಕರ್ಮಕಾಂಡ ಭಾಗ-2ಆರು ಅಡಿ ದೈತ್ಯಾಕಾರನ ಮತ್ತೊಂದು ಕರ್ಮ ಕಾಂಡ ಭಾಗ-2 ಎಂಬ ಶೀರ್ಷಿಕೆ ಮೂಲಕ ಪ್ರಶಾಂತ್​ ಸಂಬರಗಿ, ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಹಿಂಸೆ ಮತ್ತು ಕೊಲೆ ಮಾಡುವ ಮುನ್ನ ಅಮಾಯಕ ರೇಣುಕಾಸ್ವಾಮಿ ತಾನು ಲಿಂಗಾಯತ ಮತ್ತು ಸಸ್ಯಾಹಾರಿ ಎಂದು ಗೋಗರಿದರು ಕೇಳದೆ, ಬಲವಂತವಾಗಿ ಚಿಕನ್ ತುಂಡನ್ನು ಬಾಯಿಗೆ ತುರಿಕಿದನು ಈ ರೌಡಿ ಬಾಸ್. ಅದೇ ರೀತಿ 3 ವರ್ಷಗಳ ಹಿಂದೆ ಒಬ್ಬಳು ಖ್ಯಾತ ಕನ್ನಡ ಚಲನಚಿತ್ರ ನಟಿ, ಇವನೊಡನೆ ಚಿತ್ರೀಕರಣ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೆ, ಈ ದೈತ್ಯಾಕಾರನ ಸೂಚನೆಯಂತೆ ಮಧ್ಯಾಹ್ನದ ಊಟದಲ್ಲಿ ನಾನ್‌ವೆಜ್ ಮಾಂಸವನ್ನು ಬೆರೆಸಿ ನೀಡಲಾಗಿತ್ತು. ನಟಿ ಅದನ್ನು ತಿನ್ನುವಾಗ ಈ ದುರಾತ್ಮ ದುರ್ಯೋಧನಂತೆ ಗಹಗಹಿಸಿ ನಕ್ಕನಂತೆ. ತು.. ಇವನೊಬ್ಬ ಮೃಗ ಎಂದು ಪ್ರಶಾಂತ್​ ಸಂಬರಗಿ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ಕರ್ಮಕಾಂಡ ಭಾಗ-3ಮುಂದುವರಿದ ದಚ್ಚುವಿನ ಕರ್ಮಕಾಂಡ ಭಾಗ-3 ಎಂಬ ಶೀರ್ಷಿಕೆ ಮೂಲಕ ಸಂಬರಗಿ ಈಗಾಗಲೇ ಮತ್ತೊಂದು ಆರೋಪ ಮಾಡಿದ್ದಾರೆ. ಈ ಘಟನೆ ನಡೆದಿದ್ದು 2019ರಲ್ಲಿ, ಈ 6 ಅಡಿ ದೈತ್ಯಾಕಾರದ ಮೃಗ, ಸ್ನೇಹ ಮತ್ತು ಮಾನವೀಯತೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದನು. ಅವತ್ತು ಒಂದು ಕಾಲದ ಇವನ ಕುಚಿಕು, ಸ್ಯಾಂಡಲ್‌ವುಡ್ ಸ್ಟಾರ್​ ಹೀರೋ ಗೆಳೆಯನ ಹೆಂಡತಿಗೆ ರಾತ್ರಿಯಲ್ಲಿ ಬೆದರಿಕೆ ಮತ್ತು ಎಚ್ಚರಿಕೆ ಧ್ವನಿ ಸಂದೇಶವನ್ನು ಕಳಿಸಿಬಿಟ್ಟು, ಅದರಲ್ಲಿ ಹೇಳ್ತಾನೆ ನಿಮ್ಮ ಸ್ಟಾರ್ ಪತಿ ಯಾವುದೇ ಕಾರಣಕ್ಕೂ ನನ್ನ ಅಭಿಮಾನಿ ಬಳಗವನ್ನು ಸಂಪರ್ಕಿಸದಂತೆ ನೋಡಿಕೋ, ಇಲ್ಲ ಅಂದ್ರೆ ಪರಿಸ್ಥಿತಿ ನೆಟ್ಟಗಿರಲ್ಲ. ನಶೆಯಲ್ಲಿ ಇವನ ದೊಡ್ಡ ಮೋರಿ ಬಾಯಿಗೆ ಹೆಣ್ಣು, ಗಂಡು ಬೆಲೆನೇ ಇರಲ್ಲ, ಏನೇನು ಕೆಟ್ಟ ಮಾತು ಹೇಳಿರ್ತಾನೋ? ತು ಇವನ ಜಾಯಮಾನನೇ ಇಷ್ಟು. ಕೀಳು ಮನಸ್ಥಿತಿಯ ಕ್ರಿಮಿ ಎಂದು ಸಂಬರಗಿಗೆ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಕೊಲೆಗೆ ಸಂಚು ರೂಪಿಸಿದ್ದವರ ಬಂಧನ, ತಲ್ವಾರ್, ಚಾಕು ಹಾಗೂ ವಾಹನಗಳ ವಶ
ಏನಿದು ಪ್ರಕರಣ?ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
