ಮಂಗಳೂರು:ನಗರದ ಬೆಂದೂರ್‌ವೆಲ್ ಅಪಾರ್ಟ್‌ಮೆಂಟ್‌ನ ಫ್ಲಾೃಟ್‌ವೊಂದರಲ್ಲಿ ಗ್ರಾಹಕರಿಗೆ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು/ಮಹಿಳೆಯರನ್ನು ಒದಗಿಸುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ದಾಳಿ ನಡೆಸಿ ಮೂವರು ಪಿಂಪ್‌ಗಳನ್ನು ಬಂಧಿಸಿ, ನಾಲ್ಕು ಮಂದಿ ನೊಂದ ಯುವತಿಯರನ್ನು ರಕ್ಷಿಸಿದ್ದಾರೆ.
ಬಂಟ್ವಾಳ ವಿಟ್ಲ ಪಡ್ನೂರು ನಿವಾಸಿ ಕೆ.ಪಿ. ಹಮೀದ್(54), ಮಂಗಳೂರು ಆಕಾಶಭವನ ನಿವಾಸಿ ಅನುಪಮ ಶೆಟ್ಟಿ(46) ಮತ್ತು ಸುಬ್ರಹ್ಮಣ್ಯ ಕುಲ್ಕುಂದ ನಿವಾಸಿ ನಿಶ್ಮಿತ(23) ಬಂಧಿತರು.
ಬೆಂದೂರ್‌ವೆಲ್ 3ನೇ ಕ್ರಾಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯ ಫ್ಲಾಟ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಯುವತಿಯರನ್ನು ತರಿಸಿಕೊಂಡು ಅನೈತಿಕ ಚಟುವಟಿಕೆ ದಂಧೆಯನ್ನು ನಡೆಸುತ್ತಿದ್ದ ದಲ್ಲಾಳಿ(ಪಿಂಪ್) ಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ 5 ಮೊಬೈಲ್ ಫೋನ್, 50,000 ರು. ನಗದು, ಮಾರುತಿ 800 ಕಾರನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ನೊಂದ ನಾಲ್ಕು ಮಂದಿ ಯುವತಿ/ಮಹಿಳೆಯರನ್ನು ರಕ್ಷಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 19 =
Remember me
