ಮೈಸೂರು:ಬಿಜೆಪಿಯವರು ಸಾಲಮಾಡಿ ಹೋದರು ಅಂತ ನೀವು ಬೈಯುವುದು, ಕಾಂಗ್ರೆಸ್ ಲೂಟಿ ಮಾಡಿದರು ಅಂತ ಬಿಜೆಪಿಯವರು ಬೊಬ್ಬೆ ಹೊಡೆಯುವುದು ಬೇಡ ಎನ್ನುವ ಮೂಲಕ ನೂತನ ಕಾಂಗ್ರೆಸ್​ ಸರ್ಕಾರಕ್ಕೆ ಸಂಸದ ಪ್ರತಾಪ್​ ಸಿಂಹ ಸಲಹೆಯೊಂದನ್ನು ನೀಡಿದ್ದಾರೆ.
ನಿನ್ನೆ (ಮೇ 20) ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟ ನಡಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರ ಸಾಕಷ್ಟು ಸಾಲ ಮಾಡಿ ಹೋಗಿದೆ ಎಂದು ಹೇಳಿದರು.
ಇದನ್ನೂ ಓದಿ:ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಟ್ಟವರಿಗೆ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ತಿರುಗೇಟು!
ಈ ಹೇಳಿಕೆಗೆ ಸಂಸದ ಪ್ರತಾಪ್​ ಸಿಂಹ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಒಟ್ಟಾರೆ ಸಾಲದ ಜೊತೆ 3 ವರ್ಷ 10 ತಿಂಗಳ ಬಿಜೆಪಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಸಾಲದ ಹೊರೆಯನ್ನೂ ಈಗಲೇ ಬಹಿರಂಗಪಡಿಸಿ, ಮುಂದೆ ನೀವು ಮಾಡಲಿರುವ ಸಾಲದ ಅಂದಾಜೂ 2028ರಲ್ಲಿ ಸಿಗುತ್ತದೆ ಎಂದಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಒಟ್ಟಾರೆ ಸಾಲದ ಜೊತೆ 3 ವರ್ಷ 10 ತಿಂಗಳ ಬಿಜೆಪಿ ಸರ್ಕಾರದಲ್ಲಿ ಬಿಎಸ್ವೈ ಮತ್ತು ಬೊಮ್ಮಾಯಿ ಅವರು ಮಾಡಿರುವ ಸಾಲದ ಹೊರೆಯನ್ನೂ ಬಹಿರಂಗಪಡಿಸಿ, ಮುಂದೆ ನೀವು ಮಾಡಲಿರುವ ಸಾಲದ ಅಂದಾಜೂ 2028 ರಲ್ಲಿ ಸಿಗುತ್ತದೆ.@siddaramaiah
— Prathap Simha (@mepratap)May 20, 2023

ಇದರೊಂದಿಗೆ ಕಾಂಗ್ರೆಸ್​ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿರುವ ಕಾಂಗ್ರೆಸ್​ಗೆ ಪ್ರತಾಪ್​ ಸಿಂಹ ಸರಣಿ ಪ್ರಶ್ನೆಗಳನ್ನು ಸಹ ಕೇಳಿದ್ದಾರೆ. ರಾಜ್ಯದ ಈ ವರ್ಷದ ಬಜೆಟ್ ಗಾತ್ರವೆಷ್ಟು? ಈ ದಿನದವರೆಗಿನ ನಮ್ಮ ಒಟ್ಟು ಸಾಲ ಎಷ್ಟಿದೆ? ವಾರ್ಷಿಕ ಬಡ್ಡಿ ಮತ್ತು ಅಸಲು ಮರುಪಾವತಿಗೆ ಎಷ್ಟು ಬೇಕು? ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೆ ಎಷ್ಟು ಸಾವಿರ ಕೋಟಿ ಬೇಕು? ಸರ್ಕಾರಿ ಯೋಜನೆಗಳ ಮುಂದುವರಿಕೆಗೆ ಎಷ್ಟು ಬೇಕು?
ಇದನ್ನೂ ಓದಿ:ಅತ್ತೆ-ಮಾವ ಸುಪರ್ದಿಗೆ ಬಾಲಕ: ತಂದೆ ವಶಕ್ಕೆ ನೀಡಿದ್ದ ಕೌಟುಂಬಿಕ ಕೋರ್ಟ್, ಆದೇಶ ರದ್ದು ಮಾಡಿದ ಹೈಕೋರ್ಟ್
2028ರಲ್ಲಿ ಮತ್ತೆ ಚುನಾವಣೆ ಬಂದಾಗ ರಾಜ್ಯದ ಅರ್ಥವ್ಯವಸ್ಥೆಯ ಆರೋಗ್ಯ ಹೇಗಿರುತ್ತೆ ಎಂಬುದರ ಅಂದಾಜು ಸಿಗಲಿ ಎಂಬ ಕಾರಣಕ್ಕೆ ಈ ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.
2028ರಲ್ಲಿ ಮತ್ತೆ ಚುನಾವಣೆ ಬಂದಾಗ ರಾಜ್ಯದ ಅರ್ಥವ್ಯವಸ್ಥೆಯ ಅರೋಗ್ಯ ಹೇಗಿರುತ್ತೆ ಎಂಬುದರ ಅಂದಾಜು ಸಿಗಲಿ ಎಂಬ ಕಾರಣಕ್ಕೆ ಈ ಪ್ರಶ್ನೆಗಳು ಅಷ್ಟೇ.
— Prathap Simha (@mepratap)May 20, 2023

ನಿರುದ್ಯೋಗಿಗಳಿಗೆ ಯುವನಿಧಿ: ಆದೇಶ ಮಾಡೇಬಿಟ್ಟ ಸರ್ಕಾರ; ಈ ಗ್ಯಾರಂಟಿಗೆ ಷರತ್ತುಗಳೇನು?

ಮಹಿಳೆಯರಿಗೆ ಸಿಹಿಸುದ್ದಿ: ಮಾಸಿಕ 2000 ರೂಪಾಯಿ; ಆದೇಶ ಮಾಡಿಯೇ ಬಿಡ್ತು ನೂತನ ಸರ್ಕಾರ

‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
