ಮೈಸೂರು:ಕಾಂಗ್ರೆಸ್ ಸಹವಾಸ ಮಾಡಿ ಕೆಟ್ಟೆ ಎಂಬ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್​ ಸಿಂಹ ಕುಮಾರಸ್ವಾಮಿ ಅವರಿಗೆ ತಡವಾಗಿ ಈ ಬಗ್ಗೆ ಅರಿವಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಎಚ್​ಡಿಕೆ ಬಿಜೆಪಿ ಜತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು. ಅವರ 20 ತಿಂಗಳ ಆಡಳಿತ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಗ್ರಾಮ ವಾಸ್ತವ್ಯ, ಜನರ ಜತೆ ಬೆರೆಯುವ ನಡೆ ಅವರಿಗೆ ಹೆಸರು ತಂದುಕೊಟ್ಟಿತ್ತು ಎಂದು ಎಚ್​ಡಿಕೆ ಪರ ಬ್ಯಾಟ್​ ಬೀಸಿದರು.
ಇದನ್ನೂ ಓದಿ:ಜನವರಿಯಿಂದ ಸಿಎಎ ಪ್ರಕ್ರಿಯೆ ಆರಂಭ ಸಾಧ್ಯತೆ: ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯ
ಎಲ್ಲರನ್ನೂ ಬ್ರದರ್ ಎನ್ನುವ ಅವರ ಮಾತು ಸಾಕಷ್ಟು ಟ್ರೆಂಡ್ ಆಗಿತ್ತು. ಚಿಕ್ಕ ವಯಸ್ಸಿನಲ್ಲೇ ಸಿಎಂ ಆಗಿದ್ದ ಕುಮಾರಸ್ವಾಮಿ ಬಗ್ಗೆ ನಾನು ಲೇಖನ ಬರೆದಿದ್ದೆ. ಆದರೆ ಅವರ ಇಂದಿನ ಪರಿಸ್ಥಿತಿ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿ ಜತೆ ಸರ್ಕಾರ ಮಾಡಿದ್ದಾಗ ಉತ್ತಮ ಆಡಳಿತ ನಡೆಸಿದ್ದ ಬಗ್ಗೆ ಗೌರವ ಇದೆ ಎಂದು ಪ್ರತಾಪ್​ ಸಿಂಹ​ ತಿಳಿಸಿದರು.(ದಿಗ್ವಿಜಯ ನ್ಯೂಸ್​)
ಹಳೇ ದೋಸ್ತಿ ಹೊಸ ಕುಸ್ತಿ: ತಾರಕಕ್ಕೇರಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಜಟಾಪಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
