ಮೈಸೂರು:ರಾಷ್ಟ್ರ ರಾಜಧಾನಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಅನೇಕರು ಮೂಗು ತೂರಿಸಿ, ಛೀಮಾರಿ ಹಾಕಿಸಿಕೊಂಡಿದ್ದಾಗಿದೆ. ಇದೀಗ ಬಾಲಿವುಡ್​ ನಟಿ ತಾಪ್ಸಿ ಪನ್ನು ಕೂಡ ಹೋರಾಟದ ಬಗ್ಗೆ ಮಾತನಾಡಿದ್ದು, ಆಕೆಗೆ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಟ್ವೀಟ್​ನಲ್ಲೇ ತಿರುಗೇಟು ಕೊಟ್ಟಿದ್ದಾರೆ.
ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಬಾಲಿವುಡ್​ ನಟಿ ತಾಪ್ಸಿ ಪನ್ನು ಟ್ವಿಟ್ಟರ್​ನಲ್ಲಿ ಒಂದು ಹೇಳಿಕೆ ನೀಡಿದ್ದರು. “ಒಂದು ಟ್ವೀಟ್ ನಿಮ್ಮ ಒಗ್ಗಟ್ಟನ್ನು ಮುರಿಯುತ್ತದೆ ಅಂದರೆ, ಒಂದು ಜೋಕ್ಸ್ ನಿಮ್ಮ ನಂಬಿಕೆಯನ್ನು ಹಾಳು ಮಾಡುತ್ತದೆ ಅಂದರೆ, ಒಂದು ಪ್ರದರ್ಶನ ಧರ್ಮದ ಮೇಲಿನ ನಿಮ್ಮ ನಂಬಿಕೆಯನ್ನು ಕೆರಳಿಸುವುದಾದರೆ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಿ, ಅದನ್ನು ಬಿಟ್ಟು ಉಳಿದವರಿಗೆ ಬುದ್ದಿ ಹೇಳಲು ಬರಬೇಡಿ” ಎಂದು ಬರೆದು, ವಿವಾದ ಸೃಷ್ಟಿಸಿಕೊಂಡಿದ್ದರು.
ತಾಪ್ಸಿ ಟ್ವೀಟ್​ಗೆ ಪ್ರತಾಪ್​ ಸಿಂಹ ಖಡಕ್​ ಆಗಿ ಪ್ರತಿಕ್ರಿಯಿಸಿದ್ದಾರೆ. “ಓ ತಾಪ್ಸಿ, ಓರ್ವ ರಶ್ದಿ ಭಾರತೀಯ ಮುಸ್ಲಿಮರನ್ನು ಕೆರಳಿಸಿತು. ಒಂದು ವ್ಯಂಗ್ಯ ಚಿತ್ರ ಪ್ರಪಂಚದಾದ್ಯಂತ ಮುಸ್ಲಿಮರನ್ನು ಕೆರಳಿಸಿತು. ಒಂದು ಪುಸ್ತಕ (ದಿ ಡಾ ವಿನ್ಸಿ ಕೋಡ್) ವಿಶ್ವದೆಲ್ಲೆಡೆ ಕ್ರಿಶ್ಚಿಯನರಲ್ಲಿ ಸಂಚಲನ ಮೂಡಿಸಿತ್ತು.. ಅಂತೆಯೇ ಕೇವಲ ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ದಯವಿಟ್ಟು ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್​ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಉಳಿದ ವಿಚಾರಗಳು ನಿಮ್ಮ ಜ್ಞಾನದ ಗಡಿಯಿಂದ ಹೊರಗಿದೆ” ಎಂದು ಟ್ವೀಟ್​ ಮಾಡಿದ್ದಾರೆ. ಪ್ರತಾಪ್​ ಅವರ ಈ ಟ್ವೀಟ್​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಂದ ಹಾಗೆ ತಾಪ್ಸಿ ಅವರ ಟ್ವೀಟ್​ ಬಗ್ಗೆ ಕೇವಲ ಪ್ರತಾಪ್​ ಸಿಂಹ ಮಾತ್ರವಲ್ಲದೆ ಲಕ್ಷಾಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಇದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ, ಇಲ್ಲಿಂದಲೇ ಹಣ ಸಂಪಾದಿಸಿ ಈಗ ಇದೇ ನೆಲಕ್ಕೆ ದ್ರೋಹ ಬಗೆಯುತ್ತಿದ್ದೀರಿ, ಇತ್ಯಾದಿ ಕಾಮೆಂಟ್​ಗಳನ್ನು ಜನರು ಹಾಕಲಾರಂಭಿಸಿದ್ದಾರೆ. (ಏಜೆನ್ಸೀಸ್​)
Oh Taapsee, One Rushdie rattled entire Indian Muslims, One cartoon rattled Muslims world over, One book “The da Vinci Code” stirred Christians all over, You broke the marriage coz of one Thappad. Pls limit urself2 scripted film dialogues, rest of d things r beyond your knowledge.https://t.co/IsQHCM9ql9
— Pratap Simha (@mepratap)February 5, 2021

ದೇಶದ ಒಗ್ಗಟ್ಟು ಕಾಪಾಡಿಕೊಳ್ಳೋಣ ಎಂದಿದ್ದ ಸಚಿನ್​​ ತೆಂಡೂಲ್ಕರ್​ ಕಟೌಟ್​ಗೆ ಕಪ್ಪು ಮಸಿ ಎರಚಿದ ಕಾಂಗ್ರೆಸ್​ ನಾಯಕರು

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
