ಮೈಸೂರು:ನಟ ಕಿಚ್ಚ ಸುದೀಪ್ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಡುತ್ತಿದೆ ಎಂದಿರುವ ಕೊಡಗು-ಮೈಸೂರು ಸಂಸದ ಪ್ರತಾಪ್​ಸಿಂಹ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ ಭಸ್ಮಾಸುರ ಎಂದು ಹೇಳಿದ್ದಾರೆ. ನಂಜನಗೂಡಿನಲ್ಲಿ ಇಂದು ಬಹಿರಂಗ ಸಮಾವೇಶದಲ್ಲಿ ಅವರು ಈ ಮಾತನ್ನಾಡಿದರು.
ಹಳೇ ಮೈಸೂರು ಕಾಂಗ್ರೆಸ್-ಜೆಡಿಎಸ್ ಎಂಬ ಜಾತಿ ವ್ಯವಸ್ಥೆ ಪಕ್ಷಗಳ ಭದ್ರಕೋಟೆಯಲ್ಲ. ಇದು ಅಭಿವೃದ್ಧಿ ಪರವಾದ ಬಿಜೆಪಿಯ ಭದ್ರಕೋಟೆ ಆಗಬೇಕು ಎಂದ ಪ್ರತಾಪ್​ಸಿಂಹ, ನಟ ಸುದೀಪ್ ಕಾಂಗ್ರೆಸ್ ಕಚೇರಿಗೇ ಕಿಚ್ಚು ಹಚ್ಚಿದ್ದಾರೆ ಎಂದರು.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!
ರಾಮನಗರದಲ್ಲಿ ಶಿವ ಬೆಟ್ಟವನ್ನು ಏಸು ಬೆಟ್ಟ ಮಾಡಿದ ಡಿ.ಕೆ. ಶಿವಕುಮಾರ್ ಒಂದು ಕಡೆ, ಹನುಮಂತನ ಜನ್ಮದಿನ ಪ್ರಶ್ನಿಸುವ ಸಿದ್ದರಾಮಯ್ಯ ಒಂದು ಕಡೆ. ಟಿಪ್ಪು ಜನ್ಮದಿನ‌ ಸಿದ್ದರಾಮಯ್ಯಗೆ ಗೊತ್ತು. ಆದರೆ, ಹನುಮಂತನ‌ ಜನ್ಮದಿನ ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದ ಪ್ರತಾಪ್​ಸಿಂಹ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಸಾಮಾಬಿನ್ ಲ್ಯಾಡೆನ್​, ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಸರಕಾರದಂತೆ ಇಲ್ಲೂ ತಾಲಿಬಾನ್ ಸರಕಾರ ರಚನೆ ಆಗುತ್ತದೆ ಎಂದರು.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಲಿಂಗಾಯತ ಸಿಎಂಗಳು ಭ್ರಷ್ಟರು ಎನ್ನುವ ಸಿದ್ದರಾಮಯ್ಯಗೆ ಲಿಂಗಾಯತರು ಪಾಠ ಕಲಿಸಬೇಕು ತಾನೇ? ಬಸವ ಅನುಯಾಯಿಗಳು ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಬೇಕು. ಅನ್ನದಾಸೋಹ, ಅಕ್ಷರ ದಾಸೋಹ ಮಾಡುವ ಬಸವ ಅನುಯಾಯಿಗಳ ಸಿಎಂಗಳನ್ನು ಸಿದ್ದರಾಮಯ್ಯ ಭ್ರಷ್ಟರು ಅನ್ನುತ್ತಾರೆ ಇದನ್ನು ಲಿಂಗಾಯತರು ಸಹಿಸಿ ಕೊಳ್ಳುತ್ತೀರಾ? ಎಂದೂ ಹೇಳಿದರು.
ಇದನ್ನೂ ಓದಿ:ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
ಸಿದ್ದರಾಮಯ್ಯ ಅವರು ದೇವೇಗೌಡರಿಗೆ ಧೋಖಾ ಬಗೆದರು. ಇವತ್ತು ಲಿಂಗಾಯತರಿಗೆ ಸಿದ್ದರಾಮಯ್ಯ ಕ್ಷಮೆ ಕೇಳುವುದು ನೋಡಿದರೆ ಬೆಕ್ಕು ಸನ್ಯಾಸ ಸ್ವೀಕರಿಸಿದಂತೆ ಕಾಣುತ್ತದೆ. ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಸಿದ್ದರಾಮಯ್ಯ ಸ್ವಜಾತಿಗೆ ಮಾತ್ರ ಪ್ರೀತಿ ತೋರಿಸುತ್ತಾರೆ, ಅವರು ಕಾಂಗ್ರೆಸ್​ಗೇ ಭಸ್ಮಾಸುರ ಆಗಿದ್ದಾರೆ. 2013ರಲ್ಲಿ ಜಿ.ಪರಮೇಶ್ವರ್ ಅವರನ್ನು ಸೋಲಿಸಲು ಎಚ್.ವಿಶ್ವನಾಥ್ ಅವರನ್ನು ಸಿದ್ದರಾಮಯ್ಯ ಎರಡು ಬಾರಿ ಸ್ಪೆಷಲ್​ನಲ್ಲಿ ಹೆಲಿಕಾಪ್ಟರ್ ಕಳಿಸಿದ್ದರು ಎಂದ ಪ್ರತಾಪ್​ಸಿಂಹ, ಜಾತಿವಾದಿ ಸಿದ್ದರಾಮಯ್ಯ ಅವರನ್ನು ಬುಡಸಮೇತ ಕಿತ್ತು ಹಾಕಬೇಕು ಎಂದರು.
ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
