ಬೆಂಗಳೂರು:ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರತಾಪಚಂದ್ರಶೆಟ್ಟಿ ಅವರು ಗುರುವಾರ ಸಂಜೆ ಸದನದಲ್ಲಿಯೇ ರಾಜೀನಾಮೆ ಪ್ರಕಟಿಸಿದರು. ‘‘ಸಂಖ್ಯಾಬಲದ ಆಧಾರದ ಮೇಲೆ ಮುಂದಿನ ಬಜೆಟ್ ಅಧಿವೇಶನದವರೆಗೂ ಈ ಸ್ಥಾನದಲ್ಲಿ ಮುಂದುವರಿಯಲು ಅವಕಾಶವಿದ್ದರೂ, ಬೇರೆಯವರ ಇಚ್ಛೆ ಬೇರೆಯೇ ಇರುವುದರಿಂದ ನಾನು ಸ್ಥಾನ ತ್ಯಾಗ ಮಾಡುತ್ತಿದ್ದೇನೆ’’ ಎಂದು ಪ್ರತಾಪಚಂದ್ರಶೆಟ್ಟಿ ಸೂಚ್ಯವಾಗಿ ತಮ್ಮ ವಿದಾಯ ಭಾಷಣದಲ್ಲಿ ಹೇಳಿದರು.
‘‘ನನ್ನ ಅವಧಿಯಲ್ಲಿ ಒಂದು ಅಹಿತಕರ ಘಟನೆ ಕೂಡ ನಡೆದಿದೆ. ಮೇಲ್ಮನೆಯ 113 ವರ್ಷಗಳ ಇತಿಹಾಸದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ಅದರ ಬಗ್ಗೆ ನನಗೆ ವಿಷಾದವಿದೆ. ನನ್ನ 37 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ನಡೆನುಡಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ವರ್ತಿಸಿದ್ದೇನೆ’’ ಎಂದು ಭಾವುಕರಾಗಿ ಹೇಳಿದರು.
ಸದನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇದ್ದರೂ ಸಭಾಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯ ಆಯ್ಕೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸಿವೆ. ಈ ಎರಡೂ ಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆಗಿಂತ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿಯೇ ಈಗಾಗಲೇ ಒಮ್ಮೆ ಪ್ರತಾಪಚಂದ್ರ ಶೆಟ್ಟಿ ಅವರ ಪದಚ್ಯುತಿಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಆದರೆ ಅದಕ್ಕೆ ಸಭಾಪತಿ ಅವಕಾಶ ನೀಡದೇ ಇದ್ದುದರಿಂದ ಸದನದಲ್ಲಿ ಹಿಂದೆಂದೂ ಕಂಡರಿಯದಷ್ಟು ಗದ್ದಲ-ಗಲಾಟೆ ನಡೆದು, ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಭಾಪತಿಯವರು ತಮ್ಮ ರಾಜೀನಾಮೆಯನ್ನು ಉಪಸಭಾಪತಿಗಳ ಕೈಗೆ ಕೊಟ್ಟಿದ್ದು, ಮೇಲ್ಮನೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ನಾಳೆಯ ಕಲಾಪವನ್ನು ಉಪಸಭಾಪತಿ ನಡೆಸಲಿದ್ದಾರೆ.
ಪಾಕಿಸ್ತಾನಕ್ಕೆ ಮರ್ಮಾಘಾತ! ನಡೆಯಿತು ಇನ್ನೊಂದು ಸರ್ಜಿಕಲ್​ ಸ್ಟ್ರೈಕ್​- ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿ

ಮಕ್ಕಳಿಬ್ಬರು ನೀರುಪಾಲು! ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಬಂದ ಅಮ್ಮ-ಚಿಕ್ಕಮ್ಮನೂ ಬದುಕಲಿಲ್ಲ

ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!

ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ಚಿತ್ರಮಂದಿರಕ್ಕೆ ಹೋಗುವ ಮುನ್ನ ಇದನ್ನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 18 =
Remember me
