ಮೈಸೂರು:ಲೋಕಸಭಾ ಚುನಾವಣೆ 2024ಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ನಿನ್ನೆ ಬಿಜೆಪಿಯ ಎರಡನೇ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಯಿತು. ಈ ಪಟ್ಟಿಯಲ್ಲಿ ಮೈಸೂರು-ಕೊಡುಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬದಲಿಗೆ ಈ ಬಾರಿ ಮೈಸೂರು ರಾಜವಂಶಸ್ಥರಾದ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್ ಕೊಡಲಾಯಿತು. ಈ ಸಂಗತಿ ಪ್ರತಾಪ್ ಅಭಿಮಾನಿಗಳಿಗೆ ಭಾರೀ ಅಚ್ಚರಿ ತಂದಿತು.
ಇದನ್ನೂ ಓದಿ:ಮತಾಂತರಗೊಂಡು ಮದುವೆಯಾದಳು, ಆದ್ರೂ ಡೀವೋರ್ಸ್​​ ಆಯ್ತು.. ಇದು ನಟಿ ಶ್ರೀವಿದ್ಯಾರ ದುರಂತ ಪ್ರೇಮಕಥೆ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪುತ್ತಿದ್ದಂತೆ ಟ್ವೀಟ್ ಮಾಡಿದ ಪ್ರತಾಪ್‌ ಸಿಂಹ, “ಮಹಾರಾಜ ಯದುವೀರ್‌ ಒಡೆಯರ್‌ ಅವರಿಗೆ ಅಭಿನಂದನೆಗಳು. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ, ದೇಶಕ್ಕಾಗಿ.. ಮೋದಿಗಾಗಿ” ಎಂದು ಬರೆದು ಹಂಚಿಕೊಂಡರು. ಈ ಬೆನ್ನಲ್ಲೇ ಅವರ ಕಾರ್ಯಕರ್ತರು ಬೇಸರ ಹೊರಹಾಕಿದ್ದು, ಟಿಕೆಟ್ ನಿಮಗೆ ಸಿಗಬೇಕಿತ್ತು ಎಂದು ಕಮೆಂಟ್ ಮೂಲಕ ಅಭಿಪ್ರಾಯಿಸಿದ್ದಾರೆ.
ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ.
— Prathap Simha (@mepratap)March 14, 2024

ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೇಸರ ವ್ಯಕ್ತವಾದ ಬೆನ್ನಲ್ಲೇ ಮತ್ತೆ ಟ್ವೀಟ್​ ಮಾಡಿರುವ ಅವರು, “ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ” ಎಂದು ಹೇಳಿದ್ದಾರೆ.
ಲೋಕ ಸಮರ 2024: ಜಗದೀಶ್ ಶೆಟ್ಟರ್​ ಟಿಕೆಟ್​​ ಬಗ್ಗೆ ಸತ್ಯ ಬಿಚ್ಚಿಟ್ಟ ಸಚಿವ ಪ್ರಲ್ಹಾದ್​ ಜೋಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
