ಮೈಸೂರು:ಲೋಕಸಭಾ ಚುನಾವಣೆ 2024ಕ್ಕೆ ಈಗಾಗಲೇ ಸಕಲ ತಯಾರಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಬಿಜೆಪಿಯ ಎರಡನೇ ಪಟ್ಟಿ ಅಧಿಕೃತವಾಗಿ ಪ್ರಕಟವಾಯಿತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಯಿತು. ಈ ಪಟ್ಟಿಯಲ್ಲಿ ಮೈಸೂರು-ಕೊಡುಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬದಲಿಗೆ ಈ ಬಾರಿ ಮೈಸೂರು ರಾಜವಂಶಸ್ಥರಾದ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್ ಕೊಡಲಾಯಿತು. ಈ ಸಂಗತಿ ಪ್ರತಾಪ್ ಅಭಿಮಾನಿಗಳಿಗೆ ಭಾರೀ ಅಚ್ಚರಿ ತಂದಿದ್ದು ಎಲ್ಲರಿಗೂ ತಿಳಿದೇ ಇದೆ.
ಇದನ್ನೂ ಓದಿ:ಯಶಸ್ವಿ ಯುವ ಉದ್ಯಮಿ ಸಿ.ಎಸ್​. ವೇಣುಗೋಪಾಲ್​​; ಕಟ್ಟಡ ವಿನ್ಯಾದಲ್ಲಿ ನೈಪುಣ್ಯ​
ಯದುವೀರ್​ಗೆ ಟಿಕೆಟ್​ ಘೋಷಣೆಯಾದ ದಿನದಿಂದಲೂ ಪ್ರತಾಪ್ ಸಿಂಹ ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳು ಭುಗಿಲೆದ್ದಿವೆ. ಈ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿದ ಸಂಸದರು, “ಮಹಾರಾಜ ಯದುವೀರ್‌ ಒಡೆಯರ್‌ ಅವರಿಗೆ ಅಭಿನಂದನೆಗಳು. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ, ದೇಶಕ್ಕಾಗಿ.. ಮೋದಿಗಾಗಿ” ಎಂದು ಹೇಳಿದ್ದರು. ಆದರೂ ಸಹ ಗೊಂದಲಗಳಿಗೂ ಇನ್ನೂ ತೆರೆಬಿದ್ದಿಲ್ಲ ಎಂಬಂತೆ ಕಾಣುತ್ತಿದೆ.
ಇನ್ನು ನಿನ್ನೆ (ಮಾರ್ಚ್​​ 18) ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “2014ರಲ್ಲಿ ನನಗೆ ಟಿಕೆಟ್​ ಕೊಟ್ಟಿಲ್ಲ ಅಂದಿದ್ರೆ, ಇವತ್ತಿಗೆ ಅಲ್ಲೆಲ್ಲೋ ಬರೆದುಕೊಂಡು ಕುಳಿತಿರುತ್ತಿದ್ದೆ. ಇವತ್ತು ಬಂದು ಈ ಪಕ್ಷ ನನಗೆ ಟಿಕೆಟ್​ ಕೊಟ್ಟು 10 ವರ್ಷ ಎಂಪಿ ಮಾಡಿದೆ. ವೇದಿಕೆಗಳಲ್ಲಿ ಮಾತ್ರ ಪಕ್ಷ ನನ್ನ ತಾಯಿ ಎಂದು ಹೇಳೋದಲ್ಲ, ನಿಜವಾಗಿಯೂ ಬಿಜೆಪಿ ತಾಯಿಯೂ ಹೌದು. ಪಕ್ಷಕ್ಕೂ ಹಾಗೂ ಪಕ್ಕದಲ್ಲಿರುವವರಿಗೂ ದ್ರೋಹ ಬಗೆಯಲ್ಲ” ಎಂದರು.
ಇದನ್ನೂ ಓದಿ:ಡಿಕೆಸು ಗಟ್ಟಿ ನೆಲೆಗೆ ಪೆಟ್ಟು ಕೊಡುವರೇ ಹೃದಯದ ಡಾಕ್ಟರ್? ಬೆಂ.ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಚಟುವಟಿಕೆ ಬಿರುಸು
“ಇವತ್ತಿರೋ ಬಿಜೆಪಿ ಒಳಗಡೆ ಇರುವಂತವರಲ್ಲಿ ಯಾರು ಕೂಡ ಮೂಲ ಬಿಜೆಪಿ………” ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
