ಬೆಂಗಳೂರು:ವಿಧಾನಪರಿಷತ್ತಿನಲ್ಲಿ ಸಭಾಪತಿ ಸ್ಥಾನ ಪಡೆಯುವುದಕ್ಕಾಗಿ ಮಂಗಳವಾರ ಮೂರೂ ಪ್ರಮುಖ ಪಕ್ಷಗಳ ಸದಸ್ಯರು ನಡೆಸಿದ ‘ಸಮರ’ದಿಂದ ಬೇಸತ್ತಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದ್ಯದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಭಾಪತಿಗೆ ಬಹುಮತದ ಬೆಂಬಲವಿಲ್ಲವೆಂದು ಜೆಡಿಎಸ್ ಸದಸ್ಯರು ಈಗಾಗಲೇ ಪರಿಷತ್ ಕಾರ್ಯದರ್ಶಿಗೆ ಅಧಿಕೃತವಾಗಿ ಪತ್ರ ಸಲ್ಲಿಸಿದ್ದಾರೆ. ತಮಗೆ ಬಹುಮತವಿಲ್ಲದೆ ಇರುವುದು ಸ್ವತಃ ಪ್ರತಾಪಚಂದ್ರ ಶೆಟ್ಟಿಯವರಿಗೂ ಮನವರಿಕೆಯಾಗಿದೆ. ಹೀಗಾಗಿ ಸಭಾಪತಿ ಸ್ಥಾನದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂಬುದು ಪ್ರತಾಪಚಂದ್ರ ಶೆಟ್ಟಿಯವರ ರಾಜೀನಾಮೆ ಚಿಂತನೆಗೆ ಕಾರಣ ಎನ್ನಲಾಗಿದೆ.
ರಾಜೀನಾಮೆ ನೀಡಲು ಸ್ವತಃ ಸಭಾಪತಿಯೇ ಸಿದ್ಧರಿದ್ದರೂ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ನೀಡದಿರುವಂತೆ ತಡೆಯೊಡ್ಡಿದ್ದಾರೆ. ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಯ ಪತ್ರ ಸಲ್ಲಿಸಿದಾಗಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರತಾಪಚಂದ್ರ ಶೆಟ್ಟಿ ಮುಂದಾಗಿದ್ದರು. ಆದರೆ ಜೆಡಿಎಸ್ ಧೋರಣೆಯನ್ನು ರಾಜ್ಯದ ಜನರಿಗೆ ಗೊತ್ತುಪಡಿಸುವ ರಾಜಕೀಯ ತಂತ್ರಗಾರಿಕೆ ಹೂಡಿದ್ದ ಕಾಂಗ್ರೆಸ್ ನಾಯಕರು, ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡದಂತೆ ನೋಡಿಕೊಂಡಿದ್ದರು ಎಂದು ಹೇಳಲಾಗಿದೆ.
ಕೋವಿಡ್​ನಿಂದ ಗುಣವಾದ ಅಪ್ಪ, ಕೇಕ್​ ಕತ್ತರಿಸಿ ಸಂತಸಪಟ್ಟ ಮಗಳು; ಎಡಿಜಿಪಿ@ಲೋಕಾಭಿರಾಮ!

ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
