ಮಂಗಳೂರು:ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ್ ನೆಟ್ಟಾರ್​ ಹತ್ಯೆಗೀಡಾಗಿದ್ದು, ತೀವ್ರ ದುಃಖಕ್ಕೆ ಒಳಗಾಗಿರುವ ತಾಯಿ ಹಾಗೂ ಪತ್ನಿ, ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗ ದುಡಿದು ನಮ್ಮನ್ನು ಸಾಕುತ್ತಿದ್ದ, ನಮ್ಮ ಮನೆ ಜರಿದು ಬೀಳುವ ಸ್ಥಿತಿ ಇದೆ, ಆದಷ್ಟು ಬೇಗ ಮನೆ ಕಟ್ಟಬೇಕೆಂದು ಆಸೆ ಹೊಂದಿದ್ದ. ಯಾರ ಜೊತೆಯೂ ಜಗಳ ಮಾಡಿದ ಮಗ ಅಲ್ಲ, ಅನ್ಯಾಯವಾಗಿ ನನ್ನ ಮಗನನ್ನು ಬಲಿ ಪಡೆದಿದ್ದಾರೆ ಎಂದು ಪ್ರವೀಣ್ ತಾಯಿ ರತ್ನಾವತಿ ಹೇಳಿದ್ದಾರೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರೆ ಹತ್ಯೆ ಪ್ರಕರಣ; 15 ಮಂದಿ ವಶಕ್ಕೆ, ಯಾರನ್ನೂ ಬಂಧಿಸಿಲ್ಲ: ಎಡಿಜಿಪಿ ಅಲೋಕ್ ಕುಮಾರ್​
ನಾನು ಪ್ರತಿದಿನ ಪ್ರವೀಣ್ ಜೊತೆ ಚಿಕನ್ ಸೆಂಟರ್​ನಲ್ಲಿರುತ್ತಿದ್ದೆ. ಆದರೆ ನಿನ್ನೆ ಕುಟುಂಬದ ಕಾರ್ಯಕ್ರಮವಿದ್ದ ಕಾರಣ ಹೋಗಲು ಸಾಧ್ಯವಾಗಲಿಲ್ಲ. ಎಲ್ಲರ ಜೊತೆಯೂ ಪ್ರವೀಣ್ ಆತ್ಮೀಯವಾಗಿ ಇರುತ್ತಿದ್ದರು. ಮುಸ್ಲಿಮರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಯಾರ ಜೊತೆಯೂ ದ್ವೇಷ ಜಗಳಕ್ಕೆ ಅವರು ಹೋಗಿಲ್ಲ. ಕಳೆದ ವಾರ ಬೆಳ್ಳಾರೆಯಲ್ಲಿ ಕೊಲೆ ಆದಾಗ ಪೇಟೆಯಲ್ಲಿ ಜನಸಂಚಾರ ಕಡಿಮೆ ಆಗಿದೆ ಅಂತ ಹೇಳಿದ್ದರು. ಪ್ರತೀಕಾರದ ಹತ್ಯೆಯಾದರೆ ಏನೂ ಮಾಡದ ನನ್ನ ಗಂಡನನ್ನು ಯಾಕೆ ಬಲಿ ಪಡೆದರು? ಎಂದು ಪ್ರವೀಣ್ ಪತ್ನಿ ನೂತನ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ 24 ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಬೇಕು. ಅವರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಹುಸಿಯಾದ ಬಿಜೆಪಿ ಕಠಿಣ ಕ್ರಮದ ಭರವಸೆ; ಬೇಸತ್ತು ಪಕ್ಷದ ಜಿಲ್ಲಾ ಸಹ ಸಂಚಾಲಕಿ ರಾಜೀನಾಮೆ..
ಪ್ರವೀಣ್ ನೆಟ್ಟಾರ್ ಹತ್ಯೆ: ಕಠಿಣ ಕ್ರಮಕ್ಕಾಗಿ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಅಸ್ತ್ರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
