ಹುಬ್ಬಳ್ಳಿ:ಗಣಾಧಿಪತಿ ಗಣಧರಾಚಾರ್ಯ ಭಾರತ ಗೌರವ ಶ್ರೀ ಕುಂಥುಸಾಗರ ಮಹಾರಾಜರ ಅಂತಾರಾಷ್ಟ್ರೀಯ ಅಮೃತ ಮಹೋತ್ಸವ ಅಂಗವಾಗಿ ಬುಧವಾರ ವೆಬಿನಾರ್ ಮೂಲಕ ವಿವಿಧ ಧಾರ್ವಿುಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವರೂರು ನವಗ್ರಹ ತೀರ್ಥದ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಮಾರ್ಗದರ್ಶನ ಹಾಗೂ ಸಾರಸ್ವತಾಚಾರ್ಯ ಶ್ರೀ ದೇವನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ, ಕಾರ್ಕಳ ಸೇರಿ 75 ತೀರ್ಥ ಕ್ಷೇತ್ರ ಹಾಗೂ ಜಿನ ಮಂದಿರಗಳಲ್ಲಿ ಮಹಾಮಸ್ತಕಾಭಿಷೇಕ ನೆರವೇರಿತು. 75 ಮಹಿಳಾ ಮಂಡಳ, ಯುವಕ ಮಂಡಳ, ಬಾಲಿಕಾ ಮಂಡಳಗಳಿಂದ ಗುರು ವಂದನಾ, ಗಣಧರ ಆಚಾರ್ಯ ವಿಧಾನ ನಡೆಯಿತು. ಶ್ರಾವಕ, ಶ್ರಾವಕಿಯರು ತಮ್ಮ ಮನೆಗಳಿಂದ ಆಚಾರ್ಯಶ್ರೀಗಳಿಗೆ ವಂದನೆ ಸಲ್ಲಿಸಿದರು. 75 ದೀಪ ಹಾಗೂ ಅಷ್ಟದ್ರವ್ಯಗಳಿಂದ ಮಹಾರಾಜರಿಗೆ ಪೂಜೆ ಹಾಗೂ ಅರ್ಚನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಆಚಾರ್ಯರಾದ ಕುಂಥುಸಾಗರ, ಗುಣಧರನಂದಿ, ದೇವನಂದಿ ಮಹಾರಾಜರು, ವಿಶ್ವಕ್ಕೆ ಮಾರಕವಾಗಿರುವ ಕರೊನಾ ಶಮನವಾಗಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಹಾರೈಸಿದರು.
ಅಂತಾರಾಷ್ಟ್ರೀಯ ವೆಬಿನಾರ್:ಕುಂಥುಸಾಗರ ಮಹಾರಾಜರ ಅಮೃತ ಮಹೋತ್ಸವ ಅಂಗವಾಗಿ ಡಿ. 31ರಂದು ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ಅಂತಾರಾಷ್ಟ್ರೀಯ ವೆಬಿನಾರ್ ಆಯೋಜಿಸಲಾಗಿದೆ. ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಶಿಖರ್ಜಿ, ಶ್ರವಣಬೆಳಗೊಳ, ಹೊಂಬುಜ ಸೇರಿ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಜೂಮ್ ಆಪ್ ಮೂಲಕ ವೀಕ್ಷಿಸಬಹುದು.
2020ರಲ್ಲಿ ನಡೆದ ಘಟನಾವಳಿಗಳು ಭವಿಷ್ಯದಲ್ಲಿ ಮರುಕಳಿಸದಂತೆ ಪ್ರಾರ್ಥಿಸುವುದಕ್ಕಾಗಿ ಬೆಳಗ್ಗೆ ಮತ್ತು ರಾತ್ರಿ ಮಹಾಯಜ್ಞ ನಡೆಯಲಿದೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾಧ್ಯಕ್ಷ ಓಂ ಬಿರ್ಲಾ, ಶ್ರೀ ಶ್ರೀ ರವಿಶಂಕರ ಗುರೂಜಿ, ಯೋಗಗುರು ಬಾಬಾ ರಾಮದೇವ, ಬಿ.ಕೆ. ಶಿವಾನಿ, ಆಚಾರ್ಯ ಸಾಮ್ರಾಟ ಡಾ. ಶಿವಮುನಿ, ಆಚಾರ್ಯ ಶ್ರೀ ವಿಜಯರತ್ನ ಸುಂದರ, ಆಚಾರ್ಯ ಶ್ರೀ ಗುಣಧರನಂದಿ, ಶ್ರೀ ದೇವನಂದಿ, ಡಾ. ಲೋಕೇಶ ಮುನಿ, ಶ್ರೀ ದೀಪಾಂಕರ ಸ್ವಾಮೀಜಿ, ರಾಷ್ಟ್ರಸಂತ ಶ್ರೀ ಲಲಿತಪ್ರಭ, ಚಂದ್ರಪ್ರಭ ಮಹಾರಾಜರು, ಶ್ರೀ ವಚನಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಇತರ ಮುನಿಗಳು ಪಾಲ್ಗೊಳ್ಳುವರು.
ರಾತ್ರಿ 7 ರಿಂದ 10 ಗಂಟೆಯವರೆಗೆ ಖ್ಯಾತ ಗಾಯಕರಾದ ಅನುರಾಧಾ ಪೋಡವಾಲ, ಅನೂಪ ಜಲೋಟ ಹಾಗೂ ಖುಷ್ಬೂ ಜೈನ್ ಅವರಿಂದ ಭಜನಾ ಸಂಜೆ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಣಮೋಕಾರ ಮಂತ್ರದಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುವುದು.
ಇಂದು ವೆಬಿನಾರ್ ಸಂಪರ್ಕ
ಗಣಧರಾಚಾರ್ಯ ಕುಂಥುಸಾಗರ ಗುರುದೇವ 1946ರ ಜೂ. 12ರಂದು ರಾಜಸ್ಥಾನದ ಉದಯಪುರ ಜಿಲ್ಲೆಯ ಬಾಂಟೆಡಾ ಗ್ರಾಮದಲ್ಲಿ ಜನಿಸಿದರು. ಪಂಡಿತ ರೇವಾಚಂದ ಹಾಗೂ ಸೋಹನಬಾಯಿ ಇವರ ತಂದೆ, ತಾಯಿ. 17ನೇ ವರ್ಷದಲ್ಲಿಯೇ ಮನೆಯಿಂದ ಹೊರಗೆ ಬಂದು, ಆಚಾರ್ಯಶ್ರೀ ಮಹಾವೀರಕೀರ್ತನಜಿ ಗುರುದೇವ ಅವರ ಸಾನ್ನಿಧ್ಯದಲ್ಲಿ ಸೇವೆ ಮತ್ತು ಧಾರ್ವಿುಕ ಶಿಕ್ಷಣದ ಅಧ್ಯಯನ ಮಾಡಿದರು. 21ನೇ ವರ್ಷದಲ್ಲಿ 1967ರ ಜು. 2ರಂದು ದಿಗಂಬರ ಮುನಿಯ ದೀಕ್ಷೆ ಪಡೆದುಕೊಂಡರು ಹಾಗೂ ಮುನಿ ಕುಂಥುಸಾಗರ ಎಂಬ ಹೆಸರು ಪಡೆದುಕೊಂಡರು.
ಗುಜರಾತನ ಮೆಹಸಾಣಾದಲ್ಲಿ 1972ರಲ್ಲಿ ಗಣಧರ ಪದದ ಗೌರಕ್ಕೆ ಪಾತ್ರರಾದರು. 1980ರಲ್ಲಿ ಮಹಾರಾಷ್ಟ್ರದ ಅಕಲೂಜ್​ನಲ್ಲಿ ಆಚಾರ್ಯಶ್ರೀ ವಿಮಲಸಾಗರ ಗುರುದೇವ ಅವರು ಕುಂಥುಸಾಗರ ಮಹಾರಾಜರಿಗೆ ಆಚಾರ್ಯ ಪದದಿಂದ ಗೌರವಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
