ಬೆಂಗಳೂರು:ಭಾರತದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ. ಜುಲೈ 14ರಂದು ಚಂದ್ರಯಾನ-3 ನೌಕೆ ಉಡಾವಣೆ ಆದಾಗಿನಿಂದ ಈವರೆಗೂ ಎದುರು ನೋಡುತ್ತಿದ್ದ ಆ ಕ್ಷಣ ಇಂದು ಬಂದೇ ಬಿಟ್ಟಿದೆ. ಇಂದು ಸಂಜೆ 6 ಗಂಟೆಗೆ ವಿಕ್ರಮ್​ ಲ್ಯಾಂಡರ್​ ಚಂದ್ರನ ಅಂಗಳನ್ನು ಸ್ಪರ್ಶಿಸಲಿದೆ. ಆದರೆ, ಇದೊಂದು ಸವಾಲಿನ ಕೆಲಸವಾಗಿದೆ. ಇಡೀ ಯೋಜನೆ ಯಶಸ್ಸು ಈ ಲ್ಯಾಂಡಿಂಗ್​ ಮೇಲೆ ನಿಂತಿದೆ. ಒಂದು ವೇಳೆ ಭಾರತ ಇಂದು ತನ್ನ ಸವಾಲನ್ನು ಯಶಸ್ವಿಯಾಗಿ ಸಾಧಿಸಿದ್ದಲ್ಲಿ, ಇಡೀ ವಿಶ್ವದ ಎದುರು ತನ್ನ ಪರಾಕ್ರಮ ಪ್ರದರ್ಶಿಸಿದಂತಾಗುತ್ತದೆ. ಅಲ್ಲದೆ, ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಲಿದ್ದು, ಜಗತ್ತಿನ ಚರಿತ್ರೆಯ ಪುಟದಲ್ಲಿ ಭಾರತದ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುತ್ತದೆ. ಇಂಥದ್ದೊಂದು ಕ್ಷಣ ಯಾವುದೇ ಅಡ್ಡಿಯಿಲ್ಲದೆ, ಸುಸೂತ್ರವಾಗಿ, ಯಶಸ್ಸಿಯಾಗಲೆಂದು ಇಡೀ ದೇಶದ ಜನರು ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಪೂಜೆ-ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಾರೆ.
ಈಗಾಗಲೇ ಧರ್ಮಸ್ಥಳ, ತಿರುಪತಿ ಸೇರಿದಂತೆ ಹಲವೆಡೆ ಚಂದ್ರಯಾನ ಲ್ಯಾಂಡಿಂಗ್​ ಯಶಸ್ವಿಯಾಗಲೆಂದು ಪೂಜೆಗಳು ನಡೆದಿವೆ. ಇಂದು ಕೂಡ ಪೂಜೆಗಳು ಮುಂದುವರಿದಿವೆ. ಮೈಸೂರಿನ ಬಿಜೆಪಿ ಸದಸ್ಯರು ಮಂತ್ರಾಲಯ ರಾಯರ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಚಂದ್ರಯಾನ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಸಕ ಶ್ರೀವತ್ಸ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಮಾಡಲಾಗಿದೆ. ಪೂಜೆಗಾಗಿ ಮೈಸೂರಿನಿಂದ 82 ಜನರ ಬಿಜೆಪಿ ನಿಯೋಗ ತೆರಳಿದೆ. ವಿಜ್ಞಾನಿಗಳ ಶ್ರಮಕ್ಕೆ ಫಲ ನೀಡುವಂತೆ ಬಿಜೆಪಿ ಸದಸ್ಯರು ಬೇಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿಜ್ಞಾನಿಗಳು ಹಾಗೂ ಪ್ರಧಾನಿ ನರೇಂದ್ರಮೋದಿಗೆ ಬಿಜೆಪಿ ಸದಸ್ಯರು ಜೈಕಾರ ಕೂಗಿದರು.
ಇದನ್ನೂ ಓದಿ:ನೀವು ಅಮೆರಿಕಕ್ಕೆ ಏಕೆ ಹೋಗಲಿಲ್ಲ? ಸಿಕ್ಕಾಪಟ್ಟೆ ವೈರಲ್​ ಆಯ್ತು ಬೆಂಗಳೂರು ಟೆಕ್ಕಿ ಕೊಟ್ಟ ಉತ್ತರ…
ಗದಗಿನಲ್ಲಿ ಚಂದ್ರಯಾನ-3 ಯಶಸ್ವಿಗಾಗಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದಲ್ಲಿರುವ ಹನುಮಂತನ ವಿಗ್ರಹಕ್ಕೆ ಸ್ಥಳೀಯರು ಜಲ ಅಭಿಷೇಕ, ಪಂಚಾಮೃತ ಅಭಿಷೇಕ ಮಾಡಿಸಿ, ಚಂದ್ರಯಾನ-3 ಯಶಸ್ಸಿಗೆ ಹಾರೈಸಿದ್ದಾರೆ.
ಚಂದ್ರಯಾನ ಯಶಸ್ಸಿಗಾಗಿ ರಾಯಚೂರಿನಲ್ಲಿ ಪುಟಾಣಿ ಮಕ್ಕಳಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ ನಡೆದಿದೆ. ನಗರದ ಎನ್.ಐ.ಜಿ ಕಾಲನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು, ಶಿವನಿಗೆ ಅಭಿಷೇಕ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಂದ್ರಯಾನ 3 ಲ್ಯಾಂಡಿಂಗ್ ಮಕ್ಕಳಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಶಿವಪ್ಪ ನಾಯಕ ವೃತ್ತದ ಹಜರತ್ ಸೈಯದ್ ರಾಜ್ ಬಕ್ಷ್ ವಲಿ ಅಲ್ಲಾಹ್ ದರ್ಗಾದಲ್ಲಿ ಚಂದ್ರಯಾನ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಘರೀಬ್ ನಮಾಜ್ ನಂತರ ಮುಸ್ಲಿಂ ಸಮುದಾಯದವರಿಂದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಪಾದಸ್ಪರ್ಶ ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಸಮಿತಿಯ ಅಧ್ಯಕ್ಷ ಅಕ್ಬರ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಈ ವಿಶೇಷ ಪ್ರಾರ್ಥನೆ ನಡೆಯಿತು.
ಚಂದ್ರಯಾನ-3 ವಿಕ್ರಮ್ ಸೇಫ್ ಲ್ಯಾಂಡಿಂಗ್​ಗಾಗಿ ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಬೃಹತ್ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಬೃಹತ್ ಆಂಜನೇಯ, ಈಶ್ವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು. ವಿಜ್ಞಾನಕ್ಕೆ ದೈವದ ಅನುಗ್ರಹ ಇರಲಿ ಅಂತ ಪೂಜೆ ಮಾಡಲಾಯಿತು. ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ಪ್ರಗತಿಪರ ಚಿಂತಕರಿಂದ ಪೂಜೆ ನೆರವೇರಿದ್ದು, ಕಳೆದ ಬಾರಿಯ ನೋವನ್ನು ವಿಜ್ಞಾನಿಗಳು ಮತ್ತೆ ಅನುಭವಿಸಬಾರದು ಹಾಗೂ ಈ ಬಾರಿಯ ಅವರ ಪ್ರಯತ್ನ ಯಶಸ್ವಿ ಆಗಲಿ. ಚಂದ್ರಯಾನಕ್ಕೆ ಯಾವುದೇ ಅಡೆತಡೆಯಾಗದೇ ಸೇಫ್ ಆಗಿ ಲ್ಯಾಂಡ್ ಆಗಲಿ ಅಂತ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: ಮಾರಕ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ಲೆಜೆಂಡ್​ ಹೆಲ್ತ್​ ಸ್ಟ್ರೀಕ್ 49ನೇ ವಯಸ್ಸಿಗೆ​ ವಿಧಿವಶ​
ಚಂದ್ರಯಾನ ಸಕ್ಸಸ್ ಲ್ಯಾಂಡಿಂಗ್​ಗಾಗಿ ಕಲಬುರಗಿಯ ಸನ್ನತಿ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ಅಲ್ಲದೆ, ಶ್ರೀ ಸೂಕ್ತ ಪಾರಾಯಣ ಮಾಡಿ ಅರ್ಚಕರಿಂದ ವಿಶೇಷ ಪ್ರಾರ್ಥನೆ ಮಾಡಲಾಯಿತು. ಚಂದ್ರಯಾನ-3 ಸಕ್ಸಸ್​ಗೆ ಸತತ ಮೂರು ಗಂಟೆಗಳ ಕಾಲ ಪಾರಾಯಣ ಮಾಡಿದ್ದಾರೆ.
ಚಂದ್ರಯಾನ-3 ಸಕ್ಸಸ್​ಗಾಗಿ ರಾಮನಗರದ ಹಜರತ್ ಪೀರೇನ್ ಶಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಹ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ರಾಮ ರಹೀಮನ ಕೃಪೆಯಿಂದ ಒಳ್ಳೆಯದಾಗಲಿ ಎಂದು ಕೋರಿದರು.
ಹೀಗೆ ರಾಜ್ಯದ ಹಲವೆಡೆ ಚಂದ್ರಯಾನ ಯಶಸ್ಸಿಗೆ ಪೂಜೆ-ಪುನಸ್ಕಾರಗಳು ನಡೆಯುತ್ತಲೇ ಇವೆ. ಇಂದು ಸಂಜೆ 6 ಗಂಟೆಗೆ ಇಸ್ರೋ ತನ್ನ ಚಂದ್ರಯಾನ 3 ನೌಕೆಯನ್ನು ಚಂದ್ರನ ಅಂಗಳದ ಮೇಲೆ ಇಳಿಸಲಿದೆ.
ನಿಮಗೆಲ್ಲ ಗೊತ್ತಿರುವಂತೆ ಜು.14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶದಿಂದ ಚಂದ್ರಯಾನ-3 ನೌಕೆ ಹೊತ್ತ ಬಾಹುಬಲಿ ರಾಕೆಟ್​ ನಭಕ್ಕೆ ಜಿಗಿಯಿತು. ಬಳಿಕ ಚಂದ್ರಯಾನ ನೌಕೆಯು ಭೂ ಕಕ್ಷೆಯನ್ನು ಸೇರುವಲ್ಲಿ ಯಶಸ್ವಿಯಾಯಿತು. ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲು ಚಂದ್ರಯಾನ 3 ಭೂಮಿಯ ಸುತ್ತ ಹಲವು ಎಲಪ್ಟಿಕಲ್​ ರೌಂಡ್​ ಹಾಕಿತು. ಆಗಸ್ಟ್​ 1ರಂದು ಚಂದ್ರಯಾನ ತನ್ನ 3.84 ಲಕ್ಷ ಕಿ.ಮೀ ಜರ್ನಿಯಲ್ಲಿ ಭೂಮಿಯನ್ನು ಬಿಟ್ಟು ಚಂದ್ರನ ಕಡೆ ಸಾಗಿತು. ಆ. 5ರಂದು ಚಂದ್ರಯಾನ ನೌಕೆ, ಚಂದ್ರನ ಕಕ್ಷೆಯನ್ನು ಪ್ರವೇಶಿಸುವಲ್ಲಿ ಯಶಸ್ಸು ಸಾಧಿಸಿತು. ಚಂದ್ರನ ಕಕ್ಷೆಯಲ್ಲಿ ಯಾವುದೇ ಸಮಸ್ಯೆಯಾಗದೇ ಹಲವು ದಿನಗಳವರೆಗೆ ಚಂದ್ರಯಾನ ನೌಕೆ ಗಿರಕಿ ಹೊಡೆಯಿತು. ಈ ಪ್ರಯಾಣದ ಮಹತ್ವದ ಘಟ್ಟವಾದ ಪ್ರೊಪಲ್ಸನ್​ ಮಾಡ್ಯೂಲ್​ನಿಂದ ವಿಕ್ರಮ್​ ಲ್ಯಾಂಡರ್​ ಬೇರ್ಪಡುವಿಕೆ ಕಾರ್ಯ ಆ.17ರಂದು ಯಶಸ್ಸಿಯಾಗಿ ನಡೆಯಿತು. ಈ ವೇಳೆ ಚಂದ್ರಯಾನ ನೌಕೆ ಚಂದ್ರನಿಂದ 153 ಕಿ.ಮೀ ನಿಂದ 163 ಕಿ.ಮೀ ಆರ್ಬಿಟ್​ನಲ್ಲಿ ಸುತ್ತುತ್ತಿತ್ತು. ಇದೀಗ ಪ್ರೊಪಲ್ಸನ್​ ಮಾಡ್ಯೂಲ್​ ಚಂದ್ರನಿಂದ 153 ಕಿ.ಮೀ ನಿಂದ 163 ಕಿ.ಮೀ ಆರ್ಬಿಟ್​ನಲ್ಲೇ ತನ್ನ ಕಕ್ಷೆಯ ಸುತ್ತುವಿಕೆ ಕಾರ್ಯವನ್ನು ಮುಂದುವರಿಸಿದೆ.
ಇದಾದ ಬಳಿಕ ವಿಕ್ರಮ್ ಲ್ಯಾಂಡರ್ ಅನ್ನು 134 ಕಿಮೀ ಹಾಗೂ 25 ಕಿಮೀ ದೀರ್ಘವೃತ್ತದ ಕಕ್ಷೆಯಲ್ಲಿ ಚಂದ್ರನ ಮೇಲ್ಮೈಗೆ ಹತ್ತಿರ ತರಲಾಯಿತು. ಚಂದ್ರಯಾನ 2 ಕೂಡ ಈ ಹಂತದವರೆಗೂ ಯಶಸ್ಸು ಸಾಧಿಸಿತ್ತು. ಆದರೆ, ಲ್ಯಾಂಡಿಂಗ್​ ದಿನ 20 ನಿಮಿಷಗಳ ಕಾರ್ಯಾಚರಣೆ ಸಂದರ್ಭದಲ್ಲಿ ವಿಫಲವಾಯಿತು. ಇದೀಗ ಚಂದ್ರಯಾನ 3 ಕೂಡ ಇದೇ ಹಂತದಲ್ಲಿದೆ. ಬೆಂಗಳೂರಿನ ಇಸ್ರೋ ಕಚೇರಿಯಿಂದ ಮಾನಿಟರ್​ ಮಾಡಲಾಗುತ್ತಿದ್ದು, ವಿಕ್ರಮ್​ ಲ್ಯಾಂಡರ್​, ಚಂದ್ರನಿಂದ 25 ಕಿ.ಮೀ ಎತ್ತರದಿಂದ ಅವರೋಹಣ ಕ್ರಮದಲ್ಲಿ ಚಂದ್ರನ ಮೇಲೆ ಇಳಿಯಲು ಪ್ರಯಾಣ ಆರಂಭಿಸಲಿದೆ.
ಇದನ್ನೂ ಓದಿ:24 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿ 1.45 ಲಕ್ಷ ರೂ. ಬಹುಮಾನ ಬಾಚಿಕೊಂಡ ಸಾಹಸಿ!
ಸದ್ಯ ಭಾರತ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡ್​ ಮಾಡುವ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ. ವಿಕ್ರಮ್​ ಲ್ಯಾಂಡರ್​ನ ಒಳಗಿರುವ ಪ್ರಗ್ಯಾನ್​ ರೋವರ್​ ಚಂದ್ರನ ಅಂಗಳಕ್ಕೆ ಇಳಿದು ತನ್ನ ಚಮತ್ಕಾರ ಪ್ರದರ್ಶಿಸಲು ಸಜ್ಜಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ಭಾರತವೇ ಎದುರು ನೋಡುತ್ತಿದೆ. ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಚಂದ್ರಯಾನ ನೌಕೆ ಲ್ಯಾಂಡ್​ ಆದರೆ, ಭಾರತದ ಪಾಲಿಗೆ ಸುವರ್ಣ ಯುಗವಾಗಲಿದೆ. ಏಕೆಂದರೆ ಈವರೆಗೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗಿಲ್ಲ. ಇಲ್ಲಿ ಲ್ಯಾಂಡ್​ ಆಗುವುದು ತುಂಬಾ ಕಷ್ಟವೆಂದು ಹೇಳಲಾಗಿದೆ. ಇನ್ನು ಅಮೆರಿಕ, ರಷ್ಯಾ, ಫ್ರಾನ್ಸ್​ ಮತ್ತು ಚೀನಾ ಈಗಾಗಲೇ ಚಂದ್ರನ ಅಂಗಳಕ್ಕೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಲ್ಲ. ಆದರೆ, ಭಾರತದ ಯಶಸ್ವಿಯಾದರೆ, ಈ ರಾಷ್ಟ್ರಗಳ ಸಾಲಿಗೆ ಸೇರುವುದಲ್ಲದೆ, ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಮಾಡಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಸಾಧಿಸಲಿದೆ.(ದಿಗ್ವಿಜಯ ನ್ಯೂಸ್​)
ಹೇಗಿರಲಿದೆ ಚಂದ್ರಯಾನ 3 ಲ್ಯಾಂಡಿಂಗ್​ ಪ್ರಕ್ರಿಯೆ? ಆ 20 ನಿಮಿಷ ನಿರ್ಣಾಯಕ, ಟಿ20 ಪಂದ್ಯದ ಕೊನೇ ಓವರ್​ ಇದ್ದಂತೆ

ಇಂದು ಸಂಜೆ 6 ಗಂಟೆ ಸುಮಾರಿಗೆ ಚಂದ್ರನ ಮೇಲೆ ಭಾರತದ ‘ವಿಕ್ರಮ’! ಅದಕ್ಕೂ ಮುನ್ನ ನಡೆಯಲಿರುವ ಕಾರ್ಯಾಚರಣೆಗಳ ವಿವರ ಹೀಗಿದೆ…

ವಲಸೆಗೆ ಒತ್ತಡ, ಭವಿಷ್ಯದ ದುಗುಡ: ನಾಲ್ಕು ದಿನದಲ್ಲಿ ತೀರ್ಮಾನವೆಂದ ಎಸ್​ಟಿಎಸ್; ಬೈರತಿ, ಹೆಬ್ಬಾರ್ ತ್ರಿಶಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + ten =
Remember me
