ಬೆಂಗಳೂರು: ಕರೊನಾ ಲಾಕ್​ಡೌನ್ ಕಾರಣದಿಂದ ಆರ್ಥಿಕ ವರ್ಷ ಆರಂಭವಾದರೂ ಬಿಬಿಎಂಪಿ ಆಯವ್ಯಯ ಮಂಡನೆಯಾಗಿಲ್ಲ. ಹೀಗಾಗಿ ಪಾಲಿಕೆ ಖರ್ಚು ವೆಚ್ಚಗಳಿಗೆ ಶೇ.30 ಬಜೆಟ್​ಪೂರ್ವ ಅನುಮತಿ ನೀಡುವಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.
2020-21ನೇ ಸಾಲಿನ ಆರ್ಥಿಕ ವರ್ಷ ಆರಂಭವಾದರೂ, ಲಾಕ್​ಡೌನ್ ಕಾರಣದಿಂದ ಆಯವ್ಯಯ ಮಂಡನೆಯಾಗಿಲ್ಲ. ಇದರಿಂದ ಪಾಲಿಕೆಯಲ್ಲಿ ಆಡಳಿತ ನಡೆಸಲು ಆರ್ಥಿಕ ಸಮಸ್ಯೆ ಉಂಟಾಗಿದೆ. ಜತೆಗೆ ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯುವುದು, ಅಗತ್ಯ ಆರೋಗ್ಯ ಸಾಮಗ್ರಿ ಒದಗಿಸುವುದು, ಸ್ವಚ್ಛತೆ, ಔಷಧ ಸಿಂಪಡಣೆ ಸೇರಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಆರ್ಥಿಕ ಬೆಂಬಲ ಬೇಕಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಪೂರ್ವಾನುಮತಿಗೆ ಸಭೆ:ಪಾಲಿಕೆ ಅಯುಕ್ತರು ಬಜೆಟ್ ಗಾತ್ರದ ಶೇ.30 ಅನುದಾನ ಬಳಕೆಗೆ ಲೇಖಾನುದಾನ ನೀಡುವಂತೆ ಮನವಿ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಕಾರಣದಿಂದ ಎಷ್ಟು ಅನುದಾನ ಬಳಕೆಗೆ ಅನುಮತಿ ನೀಡಬೇಕು ಎಂಬುದರ ಬಗ್ಗೆ ಮೇಯರ್ ಸೇರಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರ ನಡುವೆ ಸಭೆಗಳು ನಡೆಯುತ್ತಿವೆ. ಮುಂದಿನ 2-3 ದಿನಗಳಲ್ಲಿ ಬಜೆಟ್ ಪೂರ್ವ ಅನುದಾನ ಬಳಕೆಗೆ ಅನುಮತಿ ಸಿಗುವ ಸಾಧ್ಯತೆಗಳಿವೆ.
ಬಜೆಟ್ ಗಾತ್ರದ ಮೇಲೆ ಹೊರೆ:ಲಾಕ್​ಡೌನ್ ಕಾರಣದಿಂದ ಎಲ್ಲ ವ್ಯಾಪಾರ ಉದ್ಯಮಗಳು ಸಂಪೂರ್ಣ ಬಂದ್ ಆಗಿವೆ. ಹೀಗಾಗಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿಯೂ ಕುಸಿತವಾಗಿದ್ದು, ಪಾಲಿಕೆ ಗುರಿಯಲ್ಲಿ ಶೇ.76 ತೆರಿಗೆ ಸಂಗ್ರಹವಾಗಿದೆ. ಆದ್ದರಿಂದ ಬಜೆಟ್ ಗಾತ್ರ ಎಷ್ಟಿರಲಿದೆ ಎಂಬುದು ನಿಗೂಢವಾಗಿದೆ.
ವಾಸ್ತವಿಕ ಬಜೆಟ್ ಮಂಡನೆ ಮಾಡುವುದಾಗಿ ಮೇಯರ್ ಎಂ. ಗೌತಮ್ ಕುಮಾರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಮಾರ್ಚ್ ಆರಂಭದಲ್ಲಿ ತಿಳಿಸಿದ್ದರು. ಆದರೆ, ಸರ್ಕಾರದ ಅನುದಾನಕ್ಕೆ ಹೆಚ್ಚು ಬೇಡಿಕೆ ಸಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಎಷ್ಟು ಗಾತ್ರದ ಬಜೆಟ್ ಎಂಬುದು ಮಂಡನೆ ದಿನವೇ ಬಹಿರಂಗವಾಗಲಿದೆ.
ಕರೊನಾ ಮುಗಿದ ನಂತರವೇ ಬಜೆಟ್:ಪ್ರತಿ ವರ್ಷ ಬಜೆಟ್ ಮಂಡನೆಯಾದ ತಕ್ಷಣ ಅಗತ್ಯ ಕಾಮಗಾರಿಗಳು, ಸಿಬ್ಬಂದಿ ವೇತನ ಸೇರಿ ಎಲ್ಲದಕ್ಕೂ ಹಣ ಬಳಕೆ ಮಾಡಲಾಗುತ್ತಿತ್ತು. ಒಂದು ವೇಳೆ ಆಯವ್ಯಯ ಮಂಡನೆ ತಡವಾದರೆ ಲೇಖಾನುದಾನ ಪಡೆದು ಸಿಬ್ಬಂದಿ ವೇತನ, ಅಭಿವೃದ್ಧಿ ಕಾಮಗಾರಿಗಳು ನಿಲ್ಲದಂತೆ ಕ್ರಮ ವಹಿಸಲಾಗುತ್ತಿತ್ತು. ಆದರೆ, ಈಗ ಕರೊನಾ ಹೆಚ್ಚು ವ್ಯಾಪಿಸುತ್ತಿರುವ ಕಾರಣ ಆಯವ್ಯಯ ಮಂಡನೆ ಸದ್ಯಕ್ಕೆ ಮಾಡುವುದಿಲ್ಲ. ಕರೊನಾ ಮುಗಿದ ನಂತರವೇ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಡ್ರೋನ್ ಕ್ಯಾಮರಾ ಕಣ್ಗಾವಲು – ಇಲ್ಲಿದೆ ನೋಡಿ ವಿಷುವಲ್ಸ್​…

ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
