|ಕೇಶವಮೂರ್ತಿ ವಿ.ಬಿ.ಹಾವೇರಿ
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2019ರಲ್ಲಿ ಅಸ್ತಿತ್ವಕ್ಕೆ ಬರಲು ‘ವಲಸೆ’ ಕೊಡುಗೆ ನೀಡಿದ್ದ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಈ ಬಾರಿಯೂ ರಾಜ್ಯದ ಗಮನ ಸೆಳೆಯಲಿದೆ. ಉಪ ಚುನಾವಣೆಯಲ್ಲಿ ಬಿಎಸ್​ವೈ ಅವರಿಂದ ಜೋಡೆತ್ತು ಎಂದು ಕರೆಸಿಕೊಂಡಿದ್ದ ಬಿ.ಸಿ. ಪಾಟೀಲ ಮತ್ತು ಯು.ಬಿ. ಬಣಕಾರ ಮತ್ತೆ ಪ್ರತಿಸ್ಪರ್ಧಿಗಳಾಗುವುದು ನಿಚ್ಚಳವಾಗಿದೆ.
ಜೆಡಿಎಸ್​ನಿಂದ ಒಂದು ಬಾರಿ, ಕಾಂಗ್ರೆಸ್​ನಿಂದ ಎರಡು ಬಾರಿ ಶಾಸಕರಾಗಿ ಕ್ಷೇತ್ರ ಪ್ರತಿನಿಧಿಸಿರುವ ಬಿ.ಸಿ. ಪಾಟೀಲ, 17 ಶಾಸಕರ ಗುಂಪಿನಲ್ಲಿ ಪಕ್ಷಾಂತರ ಮಾಡಿ ಬಿಜೆಪಿ ಸೇರಿದ್ದರು. ಕಮಲ ಪಡೆಯಿಂದ ಸ್ಪರ್ಧಿಸಿ 2019ರ ಉಪ ಚುನಾವಣೆಯಲ್ಲಿ ಜಯಭೇರಿ ಭಾರಿಸಿ, ಕೃಷಿ ಸಚಿವರೂ ಆಗಿದ್ದಾರೆ.
ಬಿಎಸ್​ವೈ ಆಪ್ತರಾಗಿದ್ದ ಮಾಜಿ ಶಾಸಕ ಯು.ಬಿ. ಬಣಕಾರ ಇತ್ತೀಚೆಗೆ ಬಿಜೆಪಿಗೆ ಗುಡ್​ಬೈ ಹೇಳಿ, ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತರಿಯಾಗಿಯೇ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ- ಲಿಂಗಾಯತ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದ ಹೊರಬಂದಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ದಿಗ್ವಿಜಯ ಹತ್ತಿ, ಪಿ.ಡಿ. ಬಸನಗೌಡ ಸೇರಿ ಹಲವರು ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್​ನಿಂದ ಮೊದಲ ಬಾರಿಗೆ ಶಾಸಕರಾಗಿದ್ದ ಬಿ.ಸಿ.ಪಾಟೀಲ ಕಾಂಗ್ರೆಸ್ ಸೇರಿದ ಬಳಿಕ ಜಾ.ದಳಕ್ಕೆ ಕ್ಷೇತ್ರದಲ್ಲಿ ಗಟ್ಟಿ ನೆಲೆ ಇಲ್ಲ. ಆದರೂ ಕ್ಷೇತ್ರದ ಅಭ್ಯರ್ಥಿ ಎಂದು ಘೊಷಿಸಲ್ಪಟ್ಟಿರುವ ದಯಾನಂದ ಜಾವಣ್ಣವರ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್​ನಲ್ಲಿಯೂ ಟಿಕೆಟ್​ಗಾಗಿ ತೀವ್ರ ಪೈಪೋಟಿ ಇರುವುದರಿಂದ ಬಣಕಾರ ಅವರಿಗೇ ಟಿಕೆಟ್ ಪಕ್ಕಾ ಎಂದು ಈಗಲೇ ಹೇಳಲಾಗದು. ಒಂದು ವೇಳೆ ಬಣಕಾರ ಅವರಿಗೇ ಕೈ ಟಿಕೆಟ್ ಸಿಕ್ಕರೆ ಒಂದು ಕಾಲದ ಜೋಡೆತ್ತುಗಳ ಮಧ್ಯೆ ಬಿಗ್ ಫೈಟ್ ನಡೆಯುವುದು ನಿಶ್ಚಿತ.
ಲಿಂಗಾಯತ ಮತಗಳೇ ನಿರ್ಣಾಯಕ:ಕ್ಷೇತ್ರದಲ್ಲಿ 1,80,294 ಮತದಾರರಿದ್ದಾರೆ. ಈ ಪೈಕಿ ಸಾದರ ಅಂದಾಜು 50,000, ಪಂಚಮಸಾಲಿ 20,000, ನೊಣಬ 10,000, ಕುರುಬ 20,000, ಎಸ್​ಸಿ, ಎಸ್​ಟಿ 25,000, ಇತರ ಸಮುದಾಯದ 55,294 ಮತಗಳಿವೆ.
ರಟ್ಟಿಹಳ್ಳಿ ಪ್ರಮುಖ ಪಾತ್ರ:ಹಿರೇಕೆರೂರು ತಾಲೂಕಿನಿಂದ ಬೇರ್ಪಟ್ಟು ನೂತನ ತಾಲೂಕಾಗಿರುವ ರಟ್ಟಿಹಳ್ಳಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ, ಸ್ಥಳೀಯ ಮುಖಂಡರ ಮನವೊಲಿಸುವ ಕೆಲಸವನ್ನು ಎಲ್ಲ ಪಕ್ಷದವರೂ ಆರಂಭಿಸಿದ್ದಾರೆ. ರಟ್ಟಿಹಳ್ಳಿ ಕಡೆಗೆ ಹೆಚ್ಚು ಎಡತಾಕುತ್ತಿದ್ದಾರೆ.

ಬನ್ನಿಕೋಡರ ನಡೆ ಯಾವ ಕಡೆ?:ಉಪ ಚುನಾವಣೆಯಲ್ಲಿ ಬಿ.ಸಿ.ಪಾಟೀಲರ ವಿರುದ್ಧ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಬಿ.ಎಚ್.ಬನ್ನಿಕೋಡ 56 ಸಾವಿರ ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ ಬನ್ನಿಕೋಡ ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಯು.ಬಿ.ಬಣಕಾರ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಲಾಭದಾಯಕವಾಗಿದ್ದರೂ, ಈ ಬಾರಿ ಕೈ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಪಕ್ಕಾ ಆಗಬೇಕಿದೆ. ಕಳೆದ ಬಾರಿ ಪಕ್ಷದ ಮುಖಂಡರೇ ಬನ್ನಿಕೋಡರಿಗೆ ಟಿಕೆಟ್ ನೀಡಿ ಚುನಾವಣೆಗೆ ಧುಮುಕಿಸಿದ್ದರು. 70 ವರ್ಷ ದಾಟಿರುವ ಬನ್ನಿಕೋಡ ಇದೊಂದು ಬಾರಿ ಬಿ-ಫಾರಂ ಕೊಡಿ ಎಂದು ಪಕ್ಷಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಬಣಕಾರರಿಗೆ ಕೈ ಟಿಕೆಟ್ ನೀಡಿದರೆ ಬನ್ನಿಕೋಡರ ನಡೆ ಬದಲಾಗುವ ಸಾಧ್ಯತೆಯೂ ಇದೆ.
ಅದಲು ಬದಲು ಸಂಭವ:ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ಪಕ್ಷಗಳ ಪ್ರಮುಖ ಮುಖಂಡರು ಅದಲು ಬದಲು ಆಗುವ ಸಂಭವ ಇದೆ. ಕ್ಷೇತ್ರದಲ್ಲಿ ಸಾವಿ ರಾರು ಮತಗಳನ್ನು ತಂದುಕೊಡುವ ಸಾಮರ್ಥ್ಯ ಇರುವ ಅನೇಕ ಮುಖಂಡರನ್ನು ತಮ್ಮತ್ತ ಸೆಳೆಯುವ ತಂತ್ರವನ್ನು ಪ್ರಬಲ ಅಭ್ಯರ್ಥಿಗಳು ತೆರೆಮರೆ ಹಿಂದೆ ಮಾಡುತ್ತಿದ್ದಾರೆ.
8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

ತನಗೆ ತಾನೇ ಶ್ರದ್ಧಾಂಜಲಿ ಸ್ಟೇಟಸ್ ಹಾಕೊಂಡವನ ಶವ ಮರದಲ್ಲಿ ನೇತಾಡುತ್ತಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eleven =
Remember me
