|ಕಾರಂಗುಟ್ಟೆ ನಾರಾಯಣಸ್ವಾಮಿಕೋಲಾರ
ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಸಾಧ್ಯತೆಯಿಂದ ಕೋಲಾರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಲ್ಲಿ ತಳಮಳ ಉಂಟಾಗಿದೆ. ಸಿದ್ದರಾಮಯ್ಯ ಬಂದಿದ್ದೇ ಆದರೆ, ಈಗಾಗಲೆ ಜೆಡಿಎಸ್​ನಿಂದ ಉಚ್ಚಾಟಿತರಾಗಿ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿರುವ ಶಾಸಕ ಕೆ.ಶ್ರೀನಿವಾಸಗೌಡ ಶಸ್ತŠತ್ಯಾಗಕ್ಕೆ ಮುಂದಾಗಿದ್ದಾರೆ. ಒಳೇಟು ಬೀಳುವ ಸಾಧ್ಯತೆಯಿಂದ ಸಿದ್ದರಾಮಯ್ಯ ಕ್ಷೇತ್ರದಿಂದ ಹಿಂದೆ ಸರಿದರೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಾಲ ವಿತರಣೆ ಮೂಲಕ ಮನೆಮಾತಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಘಟಬಂಧನ್ ನಾಯಕರ ವಿರೋಧವಿದ್ದರೂ ಗೌಡರ ಪ್ರಭಾವವನ್ನುತಳ್ಳಿಹಾಕುವಂತಿಲ್ಲ. ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಸ್ಪರ್ಧೆಗೆ ಒಲವು ತೋರುತ್ತಿದ್ದಾರೆ. ಉದ್ಯಮಿ ನಂದಿನಿ ಪ್ರವೀಣ್ ಟಿಕೆಟ್​ಗೆ ಪ್ರಯತ್ನಿಸಿದ್ದಾರೆ. ಕೆ.ಎಚ್.ಮುನಿಯಪ್ಪ ಬಣದಿಂದ ಕೆಜಿಎಫ್ ಬಾಬು, ಎಲ್.ಎ.ಮಂಜುನಾಥ್, ಊರುಬಾಗಿಲು ಶ್ರೀನಿವಾಸ್ ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ಸೇರಿರುವ ಮಾಜಿ ಸಚಿವ ವರ್ತರು ಪ್ರಕಾಶ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ಓಂ ಶಕ್ತಿ ಚಲಪತಿ, ಮಾಗೇರಿ ನಾರಾಯಣಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಿಂದ ಸಿಎಂಆರ್ ಶ್ರೀನಾಥ್, ಕುರ್ಕಿ ರಾಜರಾಜೇಶ್ವರಿ, ಅರಿಕೆರೆ ಮಂಜುನಾಥಗೌಡ ಆಕಾಂಕ್ಷಿಗಳಾಗಿದ್ದಾರೆ. ಕಾದುನೋಡುವ ತಂತ್ರ ಅನುಸರಿಸುತ್ತಿರುವ ದಳಪತಿಗಳು ‘ಕೈ’ ಟಿಕೆಟ್ ತಪ್ಪಿದರೆ ಬ್ಯಾಲಹಳ್ಳಿ ಗೋವಿಂದಗೌಡರನ್ನು ಸೆಳೆದು ಸ್ಪರ್ಧೆಗಿಳಿಸುವ ಸಾಧ್ಯತೆ ಅಲ್ಲಗಳೆಯಲಾಗದು.
ವಿಶ್ವದಲ್ಲೇ ಆಳದ ಚಿನ್ನದಗಣಿ ಕೆಜಿಎಫ್​ನಲ್ಲಿದ್ದು, ತಮಿಳು ರಾಜಕೀಯ ಪಕ್ಷಗಳ ಪಾರುಪತ್ಯವಿದ್ದ ಕ್ಷೇತ್ರದಲ್ಲಿ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕಳೆದ ಬಾರಿ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ ಗೆದ್ದು ‘ಕೈ’ ಹಿಡಿತ ಸಾಧಿಸಿದರು. ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಮೂಲಕ ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಕೈ ಜಗಳದಿಂದ ಅಂತರ ಕಾಯ್ದುಕೊಂಡು ಪ್ರಬುದ್ಧತೆ ಮೆರೆದಿದ್ದಾರೆ. ಬಿಜೆಪಿಯ ವೈ.ಸಂಪಂಗಿ ಮತ್ತೊಮ್ಮೆ ಟಿಕೆಟ್​ಗಾಗಿ ನಾಯಕರ ಮನೆಬಾಗಿಲು ಬಡಿಯುತ್ತಿದ್ದಾರೆ. ಇದಕ್ಕೆ ಪಕ್ಷದಲ್ಲಿ ವಿರೋಧವಿದೆ. ಸುರೇಶ್ ನಾರಾಯಣ ಕುಟ್ಟಿ, ಶ್ರೀನಿವಾಸ್, ಮೋಹನ್​ಕೃಷ್ಣ ಆಕಾಂಕ್ಷಿಗಳು. ಮಾಜಿ ಶಾಸಕ ಭಕ್ತವತ್ಸಲಂ ಮೃತಪಟ್ಟ ನಂತರ ಜೆಡಿಎಸ್ ಸೊರಗಿದ್ದು, ವಕೀಲ ಸುರೇಶ್​ಕುಮಾರ್, ವೈದ್ಯ ಡಾ.ಅರವಳಗನ್ ಅಥವಾ ಭಕ್ತನ್ ಪುತ್ರ ಕಾರ್ತಿಕ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ರಾಜ್ಯದ ಪೂರ್ವದಂಚಿನ ಮುಳಬಾಗಿಲು ಎಸ್ಸಿ ಮೀಸಲು ಕ್ಷೇತ್ರ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೇ ಪ್ರಾಮುಖ್ಯತೆ. ಸುಪ್ರೀಂ ಕೋರ್ಟ್​ನಲ್ಲಿರುವ ಜಾತಿ ಪ್ರಮಾಣಪತ್ರ ವಿವಾದ ಇತ್ಯರ್ಥವಾಗಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಕಾಂಗ್ರೆಸ್​ನಿಂದ ಸ್ಪರ್ಧಿಸಿದರೆ ಹೈವೋಲ್ಟೇಜ್ ಕ್ಷೇತ್ರವಾಗಲಿದೆ. ಜೆಡಿಎಸ್​ನ ಸಮೃದ್ಧಿ ವಿ.ಮಂಜುನಾಥ್ ಪ್ರಬಲ ಪೈಪೋಟಿಗೆ ಸಜ್ಜಾಗಿದ್ದಾರೆ. ಪಕ್ಷೇತರ ಶಾಸಕ ಎಚ್.ನಾಗೇಶ್ ‘ಕೈ’ ಬೆಂಬಲಿಸಿ, ಜೆಡಿಎಸ್ ಕೋಟಾದಲ್ಲಿ ಸಚಿವರಾದರು. ನಂತರ ಬಿಜೆಪಿ ಬೆಂಬಲಿಸಿ ಅಬಕಾರಿ ಸಚಿವರಾಗಿ, ಈಗ ಅಂಬೇಡ್ಕರ್ ನಿಗಮ ಅಧ್ಯಕ್ಷರಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಅವರ ನಡೆ ಸದ್ಯ ನಿಗೂಢ. ಕೈಗೆ ಬಂಡಾಯದ ಬಿಸಿತಟ್ಟಿದರೆ ತೆನೆಗೆ ಲಾಭವಾಗಿರುವುದು ಸಾಬೀತಾಗಿದೆ. ಬಿಜೆಪಿಯಿಂದ ಮಾಜಿ ಶಾಸಕ ಅಮರೇಶ್, ಸುಂದರರಾಜು ಸ್ಪರ್ಧಿಸುವ ನಿರೀಕ್ಷೆಯಿದೆ.
ಮಲ್ಲಿಗೆ ಹೂವಿಗೆ ಹೆಸರುವಾಸಿಯಾದ ಮಾಲೂರಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕಾಂಗ್ರೆಸ್​ನ ಎ.ನಾಗರಾಜು ಹಾಗೂ ಬಿಜೆಪಿಯ ಕೃಷ್ಣಯ್ಯಶೆಟ್ಟಿ ನಂತರ ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಅಖಾಡಕ್ಕಿಳಿಯುತ್ತಿದ್ದಾರೆ. ಈ ಬಾರಿಯೂ ಗೌಡರ ಗದ್ದಲ ಜೋರಾಗಿದೆ. 2ನೇ ಬಾರಿಗೆ ಶಾಸಕರಾಗಲು ಕೆ.ವೈ.ನಂಜೇಗೌಡ ಪಾದಯಾತ್ರೆ ಮಾಡಿ ಶಕ್ತಿ ಪ್ರದರ್ಶಿಸಿದ್ದಾರೆ. ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡುತ್ತಿರುವ ಜೆಡಿಎಸ್​ನ ರಾಮೇಗೌಡ ಅವರಿಗೆ ಜನತಾ ಜಲಧಾರೆ ಬಲತುಂಬಿದೆ. ಇಡೀ ಜಿಲ್ಲೆಯಲ್ಲಿ ಕಮಲ ಅರಳುವ ಮುಂಚೂಣಿ ಕ್ಷೇತ್ರ ಇದಾಗಿದ್ದು, ಬೂತ್​ವುಟ್ಟದಲ್ಲಿ ಕಾರ್ಯಕರ್ತರ ಪಡೆ ಪ್ರಬಲವಾಗಿದೆ. ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಹೂಡಿ ವಿಜಯಕುಮಾರ್, ಇತ್ತೀಚೆಗೆ ಪಕ್ಷ ಸೇರಿರುವ ಮಾಜಿ ಶಾಸಕ ಮಂಜುನಾಥಗೌಡರ ನಡುವೆ ಟಿಕೆಟ್ ಫೈಟ್ ಏರ್ಪಟ್ಟಿದೆ. ಟಿಕೆಟ್ ಯಾರಿಗೇ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮತ್ತೊಮ್ಮೆ ಕಮಲ ಅರಳಬಹುದು.
ಬಂಗಾರಪೇಟೆ (ಮೀಸಲು) ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್​ನಿಂದ ಮತ್ತೆ ಕಣಕ್ಕಿಳಿ ಯಲಿದ್ದು, ಹ್ಯಾಟ್ರಿಕ್ ಗೆಲುವಿಗಾಗಿ ಕ್ಷೇತ್ರ ಪರ್ಯಟನೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಪರಾಜಿತರಾಗಿರುವ ಜೆಡಿಎಸ್​ನ ಎಂ.ಮಲ್ಲೇಶ್​ಬಾಬು, ಎಸ್ಸೆನ್ ಓಟಕ್ಕೆ ಬ್ರೇಕ್ ಹಾಕುವ ಲಕ್ಷಣ ಕಂಡುಬರುತ್ತಿದೆ. ಕೈ ಟಿಕೆಟ್​ಗೆ ಗುಟ್ಟೆರಾಜಣ್ಣ ಯತ್ನಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಬಿಜೆಪಿಯಲ್ಲಿ ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪಗೆ ವಯಸ್ಸಾಗಿದ್ದು, ಬಿ.ಪಿ.ವೆಂಕಟಮುನಿಯಪ್ಪ ಪುತ್ರ ಬಿ.ವಿ.ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ನರೇಂದ್ರರಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಪಕ್ಷ ಸಂಘಟನೆಯಿಲ್ಲದೆ ಸೊರಗಿರುವ ಬಿಜೆಪಿ, ಕೈ ಬಂಡಾಯ ಅಭ್ಯರ್ಥಿ ಪಡೆಯುವ ಮತಗಳ ಆಧಾರದ ಮೇಲೆ ಕೈ ಅಥವಾ ತೆನೆ ಅಭ್ಯರ್ಥಿಗಳ ಗೆಲುವು ನಿರ್ಧಾರವಾಗಲಿದೆ.
ತೆಲುಗು ಪ್ರಭಾವದ ಶ್ರೀನಿವಾಸಪುರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಕೈ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಮುಖ ಪಾತ್ರವಹಿಸುವ ಹಂಬಲದಲ್ಲಿರುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಅವರನ್ನು ಕೆಡವಲು ಕಾಂಗ್ರೆಸ್​ನ ಕೆ.ಎಚ್.ಮುನಿಯಪ್ಪ, ಬಿಜೆಪಿಯ ಸಚಿವ ಡಾ.ಕೆ.ಸುಧಾಕರ್, ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಖೆಡ್ಡಾ ತೋಡಿದ್ದಾರೆ. ಒಮ್ಮೆ ಸ್ವಾಮಿ (ರಮೇಶ್ ಕುಮಾರ್), ಮತ್ತೊಮ್ಮೆ ರೆಡ್ಡಿ ಸೋಲá–ಗೆಲುವಿನ ಏಣಿಯಾಟ ನಡೆಯುತ್ತಿದ್ದ ಕ್ಷೇತ್ರದಲ್ಲಿ ಕಳೆದ ಬಾರಿ ಸ್ವಾಮಿ 2ನೇ ಬಾರಿಗೆ ಗೆಲುವಿನ ನಗೆ ಬೀರಿದ್ದರು. 4 ಬಾರಿ ಗೆದ್ದು, ಐದು ಬಾರಿ ಸೋತಿರುವ ಜಿ.ಕೆ.ವೆಂಕಟಶಿವಾರೆಡ್ಡಿ, ಸ್ವಾಮಿಯನ್ನು ಕಟ್ಟಿಹಾಕಲು ಘಟಬಂಧನ್ ಮಾದರಿಯದ್ದೇ ಪ್ರತಿತಂತ್ರಕ್ಕೆ ಮೊರೆಹೋಗಿದ್ದಾರೆ. ವಿರೋಧಿಗಳೆಲ್ಲ ಸೇರಿ ಹೆಣೆದಿರುವ ಚಕ್ರವ್ಯೂಹದಿಂದ 6 ಬಾರಿ ಗೆದ್ದು, ನಾಲ್ಕು ಬಾರಿ ಸೋತಿರುವ ರಮೇಶ್​ಕುಮಾರ್ ಹೇಗೆ ಪಾರಾಗುತ್ತಾರೆಂಬುದು ಕುತೂಹಲ. ಬಿಜೆಪಿಯಿಂದ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಸ್ಪರ್ಧಿಸುವ ಸಾಧ್ಯತೆಯಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
