|ರಾಯಣ್ಣ ಆರ್.ಸಿ.ಬೆಳಗಾವಿ
ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ನದೇ ಆದ ಮತಬ್ಯಾಂಕ್ ಹೊಂದಿರುವ ಎಂಎಲ್ಸಿ ಹಾಗೂ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಮತ್ತೆ ಕಾಂಗ್ರೆಸ್​ನಿಂದ ಕಣಕ್ಕಿಳಿಯಲಿದ್ದಾರೆ. ಇವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹುಡುಕಾಟ ನಡೆಸುತ್ತಿದ್ದು, ಜಗದೀಶ ಕವಟಗಿಮಠ ಅಥವಾ ಅಮಿತ ಕೋರೆ ಅವರನ್ನು ಕಣಕ್ಕಿಳಿಸಿ ಗಣೇಶ ಹುಕ್ಕೇರಿ ಅವರನ್ನು ಸೋಲಿಸುವ ಲೆಕ್ಕಾಚಾರ ಜೋರಾಗಿದೆ.
ಅಥಣಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ ಲಕ್ಷ್ಮಣ ಸವದಿ ಈಗ ವಿಧಾನ ಪರಿಷತ್ ಸದಸ್ಯರಾಗಿದ್ದು, ಮತ್ತೊಮ್ಮೆ ಮಹೇಶ್ ಕುಮಠಳ್ಳಿ ಅವರನ್ನೇ ಕಣಕ್ಕಿಳಿಸಲು ಬಿಜೆಪಿಯಲ್ಲಿ ಸದ್ದಿಲ್ಲದೇ ತಯಾರಿ ನಡೆದಿದೆ. ಇದೇ ಕ್ಷೇತ್ರದಿಂದ ಹಣಬಲದ ಜತೆಗೆ ಉತ್ತಮ ಸಂಪರ್ಕ ಹೊಂದಿರುವ ಎಸ್.ಕೆ.ಬುಟಾಳಿ ಅವರನ್ನು ಸ್ಪರ್ಧೆಗಿಳಿದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯೋಜನೆ ರೂಪಿಸುತ್ತಿದ್ದಾರೆನ್ನಲಾಗಿದೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪೊಲೀಸ್ ಅಧಿಕಾರಿಯಾಗಿರುವ ಬಸವರಾಜ ಬೀಸನಕೊಪ್ಪ ಕೂಡ ‘ಕೈ’ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಬಿರುಸಿನ ಕಸರತ್ತು ನಡೆಸುತ್ತಿದ್ದಾರೆ.
ಹುಕ್ಕೇರಿ ಮತಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದು, ಒಂದು ಬಾರಿ ಸೋತಿರುವ ಹಾಲಿ ಸಚಿವ ಉಮೇಶ ಕತ್ತಿ ಜಾಗಕ್ಕೆ ಯಾರು ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ವಾರಕ್ಕೆರಡು ಬಾರಿ ಜನಸಂಪರ್ಕ ಸಭೆ ಮೂಲಕ ತಮ್ಮದೇ ಹಿಡಿತ ಹೊಂದಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಂದ್ರ ನೇರ್ಲಿ ಅವರನ್ನು ಅಖಾಡಕ್ಕಿಳಿಸಲು ಆರ್​ಎಸ್​ಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಪಕ್ಷ ಯಾರಿಗೆ ಬಿಫಾಮ್ರ್ ನೀಡಲಿದೆ ಎಂಬುದು ಕುತೂಹಲ. ಇನ್ನು ಕಾಂಗ್ರೆಸ್​ನಿಂದ ಮಾಜಿ ಸಚಿವ ಎ.ಬಿ.ಪಾಟೀಲ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯಮಕನಮರಡಿ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಲು ಬಿಜೆಪಿಯ ಒಂದು ಗುಂಪು ಸಿದ್ಧತೆ ಮಾಡಿಕೊಂಡಿದ್ದು, ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾರುತಿ ಅಷ್ಟಗಿ ಅಥವಾ ಬಸವರಾಜ ಹುಂದ್ರಿ ಅವರನ್ನು ಕಣಕ್ಕಿಳಿಸಲು ಜಿಲ್ಲೆಯ ಹಿರಿಯ ರಾಜಕರಾಣಿಗಳು ತಿರ್ವನಿಸಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಿಂದ ಗೆದ್ದಿರುವ ಸತೀಶ್ ಈ ಬಾರಿ ಅತಿ ಹೆಚ್ಚು ಅಂತರದಿಂದ ಜಯ ಸಾಧಿಸಬೇಕು ಎಂಬ ಉದ್ದೇಶದಿಂದ ಭರ್ಜರಿ ರಣತಂತ್ರ ಹೆಣೆಯುತ್ತಿದ್ದಾರೆ.
ಸತತ ಎರಡು ಬಾರಿ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಸಚಿವರಾಗಿ ಕಾರ್ಯನಿರ್ವ ಹಿಸುತ್ತಿರುವ ಶಶಿಕಲಾ ಜೊಲ್ಲೆ ಅವರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಲಗೈಬಂಟ ಅರಿಹಂತ ಸೊಸೈಟಿ ಚೇರ್ಮನ್ ಹಾಗೂ ಬೋರಗಾಂವ ಗ್ರಾಮದ ಉತ್ತಮ್ ಪಾಟೀಲ ಅವರು ಕಾಂಗ್ರೆಸ್​ನಿಂದ ಅಖಾಡಕ್ಕಿಳಿಸುವುದಕ್ಕಾಗಿ ತೀರ್ವನಿಸಿ, ಜಾರಕಿಹೊಳಿ ಸಹೋದರರು ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದೆಡೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕಾಂಗ್ರೆಸ್ ‘ಹೈ’ಕಮಾಂಡ್ ಉತ್ತಮ್ೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮೀಸಲು ವಿಧಾನಸಭಾ ಕ್ಷೇತ್ರವಾದ ರಾಯಬಾಗದಲ್ಲಿ ಬಿಜೆಪಿಯಿಂದ ಸತತ 3 ಬಾರಿ ಗೆದ್ದಿರುವ ದುರ್ಯೋಧನ ಐಹೊಳೆ ಅವರನ್ನು ಸೋಲಿಸುವುದಕ್ಕಾಗಿ ಈ ಬಾರಿ ಹಿರಿಯ ಐಎಸ್​ಎಸ್ ಅಧಿಕಾರಿ ಮಹಾವೀರ ಮೋಹಿತೆ ಅಥವಾ ಅವರ ಸಹೋದರಿ ಜಿಪಂ ಮಾಜಿ ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಐಹೊಳೆ ಮತ್ತೊಮ್ಮೆ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ.
ರಾಜ್ಯಮಟ್ಟದ ನಾಯಕರಾಗಿ ಬೆಳೆಯುತ್ತಿರುವ ಕುಡಚಿ ಮೀಸಲು ಕ್ಷೇತ್ರದ ಶಾಸಕ ಪಿ.ರಾಜೀವ್ ಅವರು 2 ಬಾರಿ ಗೆದ್ದಿದ್ದಾರೆ. ಈಗ ಮತ್ತೆ ಕಾಂಗ್ರೆಸ್​ನ ಹಳೆಯ ಹುಲಿ ಎಸ್.ಬಿ. ಘಾಟಗೆ ಅವರನ್ನು ಕಣಕ್ಕಿಳಿಸಿ, ಗೆಲ್ಲಿಸಲು ಕೆಪಿಸಿಸಿ ನಾಯಕರು ಚುನಾವಣೆ ತಯಾರಿ ನಡೆಸುವಂತೆ ಘಾಟಗೆ ಅವರಿಗೆ ಸೂಚನೆ ನೀಡಿದ್ದಾರೆ. ಮತ್ತೊಂಡೆ ಹಾರೂಗೇರಿಯ ಮಹೇಶ ತಮ್ಮಣ್ಣವರ ಕೂಡ ಪಿ. ರಾಜೀವ್ ವಿರುದ್ಧ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಾಗವಾಡ ಮತಕ್ಷೇತ್ರದಲ್ಲಿ ತಮ್ಮದೇ ಆದ ಜನಬಲ ಹೊಂದಿರುವ ಸಕ್ಕರೆ ಉದ್ಯಮಿ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಕಾಂಗ್ರೆಸ್​ನಿಂದ ರಾಜು ಕಾಗೆ ಪ್ರಬಲ ಎದುರಾಳಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ ಶ್ರೀಮಂತ ಪಾಟೀಲರ ಧನಬಲ, ಜನಬಲದ ಎದುರು ಪ್ರಬಲರನ್ನು ಕಣಕ್ಕಿಳಿಸಲು ಅಂಕಲಿ ಮೂಲದ ವೈದ್ಯ ಡಾ. ಎನ್.ಎ. ಮಗದುಮ್ಮ ಅವರಿಗೆ ಟಿಕೆಟ್ ಕೊಡಿಸಲು ಕಾಂಗ್ರೆಸ್ ವಲಯದಲ್ಲಿ ಚಿಂತನೆ ನಡೆಯುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + six =
Remember me
