| ಎ.ಆರ್.ವೆಂಕಟೇಶ್, ಹಾಸನ
ಪ್ರಪ್ರಥಮ ಕನ್ನಡಿಗ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ಪಟ್ಟುಗಳನ್ನು ಕಲಿತು ಬೆಳೆದ, ಪ್ರಸ್ತುತ ಅವರ ಪುತ್ರ ಎಚ್.ಡಿ. ರೇವಣ್ಣ ಅವರ ಅಭೇದ್ಯ ಕೋಟೆಯಂತಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದು. 1957ರಿಂದ ಇದುವರೆಗೂ ನಡೆದಿರುವ 14 ಸಾರ್ವತ್ರಿಕ ಚುನಾವಣೆಗಳಲ್ಲಿ ಒಮ್ಮೆ ವೈ.ವೀರಭದ್ರಪ್ಪ, ಆರು ಬಾರಿ ಎಚ್.ಡಿ. ದೇವೇಗೌಡ, ತಲಾ ಒಂದು ಬಾರಿ ಜಿ.ಪುಟ್ಟಸ್ವಾಮಿಗೌಡ ಮತ್ತು ಎ. ದೊಡ್ಡೇಗೌಡ ಹಾಗೂ ಐದು ಬಾರಿ ಎಚ್.ಡಿ. ರೇವಣ್ಣ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ವೈ.ವೀರಭದ್ರಪ್ಪ ಅವರು ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ, ದೇವೇಗೌಡರು ಎರಡು ಬಾರಿ ಸ್ವತಂತ್ರವಾಗಿ, ಒಮ್ಮೆ ಕಾಂಗ್ರೆಸ್​ನಿಂದ ಮತ್ತು ಮೂರು ಬಾರಿ ಜನತಾ ಪಕ್ಷದಿಂದ ಗೆದ್ದಿದ್ದರು. ಜಿ.ಪುಟ್ಟಸ್ವಾಮಿಗೌಡ ಮತ್ತು ಎ.ದೊಡ್ಡೇಗೌಡ ಕ್ರಮವಾಗಿ 1989 ಮತ್ತು 1999ರಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು. ಉಳಿದಂತೆ, ಜನತಾದಳದಿಂದ ಎಚ್.ಡಿ.ರೇವಣ್ಣ ಸತತ ಗೆಲುವು ಸಾಧಿಸುತ್ತ ಬಂದಿದ್ದು, ಈ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್​ನ ಭದ್ರಕೋಟೆ ಆಗಿದೆ. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆದ ನಂತರವಂತೂ ಮೂರು ತಾಲೂಕುಗಳ ಐದು ಹೋಬಳಿಗಳನ್ನೊಳಗೊಂಡು ರಚನೆಗೊಂಡ ಹೊಳೆನರಸೀಪುರ ಕ್ಷೇತ್ರ ರೇವಣ್ಣರ ಅಭೇದ್ಯ ಕೋಟೆಯಾಗಿ ಮಾರ್ಪಟ್ಟಿದೆ.
ಕುರುಬ ಜನಾಂಗದ ಮತದಾರರ ಪ್ರಾಬಲ್ಯ ಹೊಂದಿರುವ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಉಳಿದ ಕಸಬಾ ಮತ್ತು ಹಳೇಕೋಟೆ, ಹಾಸನ ತಾಲೂಕಿನ ದುದ್ದ ಮತ್ತು ಶಾಂತಿಗ್ರಾಮ ಹಾಗೂ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಗಳು ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಗೆ ಸೇರುತ್ತವೆ. ಈ ಐದೂ ಹೋಬಳಿಗಳಲ್ಲಿ ಒಕ್ಕಲಿಗ ಜನಾಂಗದ ಪ್ರಾಬಲ್ಯ ಹೆಚ್ಚಿರುವುದು ರೇವಣ್ಣ ಅವರ ಸತತ ಗೆಲುವಿನ ಮೂಲಶಕ್ತಿ. ಜತೆಗೆ, ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣ ಸೇರಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತಿವೆ. ಅಲ್ಲದೆ, ಕ್ಷೇತ್ರವು ಮೂರು ತಾಲೂಕುಗಳಲ್ಲಿ ಹಂಚಿ ಹೋಗಿರುವುದರಿಂದ ಎಲ್ಲ ಪ್ರದೇಶಗಳ ಮತದಾರರ ವಿಶ್ವಾಸ ಗಳಿಸುವುದು ಪ್ರತಿಸ್ಪರ್ಧಿ ಅಭ್ಯರ್ಥಿಗೆ ಬಹುದೊಡ್ಡ ಸವಾಲಾಗಿರುವುದು ರೇವಣ್ಣ ಅವರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಕ್ಷೇತ್ರ ಪುನರ್ವಿಂಗಡಣೆ ನಂತರ ದಿವಂಗತ ಜಿ. ಪುಟ್ಟಸ್ವಾಮಿಗೌಡರ ಸೊಸೆ ಎಸ್.ಜಿ. ಅನುಪಮಾ ಎರಡು ಬಾರಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ ಒಮ್ಮೆ ರೇವಣ್ಣ ವಿರುದ್ಧ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಈ ಬಾರಿ ಬಾಗೂರು ಮಂಜೇಗೌಡ ಹಾಸನ ಕ್ಷೇತ್ರದ ಟಿಕೆಟ್ ಕೇಳುತ್ತಿದ್ದಾರೆ. ಅನುಪಮಾ ಅವರು ತಮ್ಮ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೇಯಸ್ ಪಟೇಲ್​ಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ರನ್​ಗಾಗಿ ಓಡುತ್ತಿದ್ದಾಗ ಹೃದಯಾಘಾತ..

ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 4 =
Remember me
