ಬಾಗಲಕೋಟೆ: ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತಂದರೆ ಉಳಿಯುತ್ತೀರಿ ಎಂದು ಸ್ವಾಮೀಜಿಯೊಬ್ಬರು ನುಡಿದಿದ್ದರು ಎನ್ನಲಾದ ಭವಿಷ್ಯ ಒಂದೇ ದಿನದಲ್ಲಿ ಇಲ್ಲವಾಗಿದೆ. ಈ ಕುರಿತು ಇಂದು ಆ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ಭವಿಷ್ಯದ ಮಾತೆಲ್ಲ ಸುಳ್ಳಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಕುರಿತು ಇಂದು ಸ್ಪಷ್ಟನೆ ನೀಡಿದ್ದಾರೆ. ಅವರು ಆಡಿದ್ದರೆನ್ನಲಾದ ಮಾತುಗಳು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಇಂದು ಅವರು ಆ ಕುರಿತು ಸ್ಪಷ್ಟನೆ ನೀಡಿ ಅವುಗಳನ್ನು ಅಲ್ಲಗಳೆದಿದ್ದಾರೆ.
ಇದನ್ನೂ ಓದಿ:ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!
ಆ ಮಾತುಗಳನ್ನು ನಾನು ಹೇಳೇ ಇಲ್ಲ. ನಿನ್ನೆ ಹರಿಬಿಟ್ಟ ವಿಡಿಯೋ ಯಾರೋ ಕಿಡಿಗೇಡಿಗಳ ಕೃತ್ಯ. ನಾನು ವಿಡಿಯೋದಲ್ಲಿ ಯಾವುದೇ ಪಕ್ಷದ ಪರ ಮಾತನಾಡಿಲ್ಲ. ನಾನು ಏನೂ ಹೇಳಿಲ್ಲ, ನನಗೆ ಏನೂ ಗೊತ್ತಿಲ್ಲ ಎಂಬುದಾಗಿ ಸ್ವಾಮೀಜಿ ಇಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಮಹಿಳಾ ಕುಸ್ತಿಪಟುಗಳ ನಾಡಿಮಿಡಿತ ಚೆಕ್ ಮಾಡಿದ್ದೆ, ಅಷ್ಟೇ..: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್​ ಭೂಷಣ್ ಹೇಳಿಕೆ
‘ಮೋದಿ ಅವರನ್ನು ಆರಿಸಿ ತಂದ್ರೆ ಉಳಿತೀರಿ, ಮೋದಿ ಅವರನ್ನು ಆರಿಸಿ ತರದಿದ್ರೆ ಉಳಿಯಂಗಿಲ್ಲ. ಇದರ‌ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ’ ಎಂದು ನಿನ್ನೆ ಸ್ವಾಮೀಜಿ ಜಟಭವಿಷ್ಯ ನುಡಿದಿದ್ದರು ಎಂಬ ವಿಡಿಯೋ ಹರಿದಾಡಿತ್ತು. ಅದನ್ನು ಹಲವರು ಹಂಚಿಕೊಂಡಿದ್ದರಿಂದ ವೈರಲ್ ಕೂಡ ಆಗಿತ್ತು.
‘ಮೋದಿಯನ್ನು ಆರಿಸಿ ತಂದ್ರೆ ಉಳಿತೀರಿ..’ ಭವಿಷ್ಯ ನುಡಿದ ಸ್ವಾಮೀಜಿ…ವಿವರಗಳಿಗೆhttps://t.co/YaFZZchMRhನೋಡಿpic.twitter.com/veFETJcWHT
— Vijayavani (@VVani4U)October 17, 2023

ನವರಾತ್ರಿ ದೀಪೋತ್ಸವ ವೇಳೆ ಈ ಸ್ವಾಮೀಜಿ ಕೈಯಲ್ಲಿ ಜಟ ಹಿಡಿದು ಭವಿಷ್ಯ ನುಡಿದಿದ್ದರು. ಜಟ ಎಂದರೆ ಮೂಲ ಮಹಾಲಿಂಗೇಶ್ವರ ಸ್ವಾಮೀಜಿ ಅವರ ಕೂದಲು, ಇದು ಪ್ರತಿ ವರ್ಷ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಈ ಜಟವನ್ನು ಹಿಡಿದು ಹೇಳುವ ಭವಿಷ್ಯ ನಿಜವಾಗುತ್ತದೆ ಎಂದೂ ಇಲ್ಲಿನ ಭಕ್ತರು ನಂಬಿದ್ದಾರೆ.

ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + one =
Remember me
