
ಬೆಂಗಳೂರು: ಶಾಲಾ ಮಕ್ಕಳು ಅಪೌಷ್ಟಿಕತೆ, ರಕ್ತಹೀನತೆ, ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕೆ ಸರ್ಕಾರ ಕ್ಷೀರಭಾಗ್ಯ ಯೋಜನೆ ಪ್ರಾರಂಭಿಸಿತು. ಜತೆಗೆ ವಾರಕ್ಕೆ‌ಎರಡು ದಿನ ಎರಡು ಮೊಟ್ಟೆ ವಿತರಿಸಲಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿಃ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರು ಸಾಯಿ ಶ್ಯೂರ್ ಹೆಲ್ತ್ ಮಿಕ್ಸ್ ರಾಗಿ ಪುಡಿ ಒಊರೈಸುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ ನಿವಾರಣೆಗೆ ಆದ್ಯತೆ‌ ನೀಡುದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಹೇಳಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಏರ್ಪಡಿಸಿದ್ದ ಸರ್ಕಾರಿ, ಅನುದಾನಿತ ಶಾಲೆಗಳ ಒಂದರಿಂದ 10 ನೇ ತರಗತಿ ಮಕ್ಕಳಿಗೆ ‘ಸಾಯಿ ಶ್ಯೂರ್ ಹೆಲ್ತ್ ಮಿಕ್ಸ್’ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಸರ್ಕಾರಿ, ಅನುದಾನಿತ ಒಂದರಿಂದ ಹತ್ತನೇ ತರಗತಿ‌ಯ 55 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ಸಿಗಲಿದೆ. ಮಕ್ಕಳು ಮಾನಸಿಕ, ದೈಹಿಕವಾಗಿ‌ ಸದೃಢವಾಗಿದ್ದರೆ ಓದಿನ ಕಡೆ ಗಮನ ಕೊಡುತ್ತಾರೆ. ಶಿಕ್ಷಣದಿಂದ ಸಮ ಸಮಾಜ ನಿರ್ಮಾಣ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ಸಿದ್ದರಾಮಯ್ಯ‌ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಮಧು ಬಂಗರಾಪ್ಪ, ಕೆಹೆಚ್ ಮುನಿಯಪ್ಪ, ಟಿಬಿ ಜಯಂಚಂದ್ರ, ಸತ್ಯ ಸಾಯಿ ಟ್ರಸ್ಟ್ ನ ಸಂಸ್ಥಾಪಕ  ಶ್ರೀ ಮಧುಸೂದನ್ ಸಾಯಿ, ಇನ್ನಿತರ ಅಧಿಕಾರಿಗಳು ಇದ್ದರು.
ಮೂರು ದಿನ ವಿತರಣೆ
*ಬಹುಪೌಷ್ಠಿಕಾಂಶಗಳ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿದ್ಯಾರ್ಥಿಗಳಿಗೆ  ಮೂರು ದಿನ ಸೋಮವಾರ ,ಬುಧವಾರ ಮತ್ತು ಶುಕ್ರವಾರ ವಿತರಿಸಲಾಗುತ್ತದೆ. ಕ್ಷೀರ ಭಾಗ್ಯ ಹಾಲಿನೊಂದಿಗೆ ಪ್ರತಿ ವಿದ್ಯಾರ್ಥಿಗಳಿಗೆ 05 ಗ್ರಾಮ ಪ್ರಮಾಣಲ್ಲಿ ಬೆರೆಸಿ ವಿತರಿಸಲಾಗುವುದು.
ಪ್ರತಿ ವಿದ್ಯಾರ್ಥಿಗಳಿಗೆ 18 ಗ್ರಾಂ ಹಾಲಿನ ಪುಡಿಯಿಂದ 150 ML ಹಾಲನ್ನು ತಯಾರಿಸಿ ವಿತರಿಸಲಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಹೆಲ್ತ್ ಮಿಕ್ಸ್ ಪೌಡರ್ ಸಿದ್ದಪಡಿಸಲಾಗಿದೆ.
ಈ ಬಹುಪೌಷ್ಟಿಕಾಂಶದ ಪೌಡರ್ ನಿಂದ ಅಪೌಷ್ಟಿಕತೆ ಮತ್ತು ರಕ್ತ ಹೀನತೆಯನ್ನ ನಿವಾರಿಸಿ ಆರೋಗ್ಯಕರ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಟ್ರಸ್ಟ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
