ಹಾಸನ:ಮದುವೆ ಆಗುವುದಾಗಿ ಯುವತಿಯೊಬ್ಬಳನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಹೊಂದಿದ್ದ ಯುವಕನೀಗ ಉಲ್ಟಾ ಹೊಡೆದಿದ್ದು, ನ್ಯಾಯಕ್ಕಾಗಿ ಆಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.
ಅರಕಲಗೂಡು ತಾಲೂಕಿನ ಇಬ್ಬಡಿ ಗ್ರಾಮದ 24 ವರ್ಷದ ಅವಿವಾಹಿತ ಯುವಕನೊಬ್ಬನಿಂದ ಅನ್ಯಾಯವಾಗಿದ್ದು, ಆತನ ಮಗು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಆರಂಭದಲ್ಲಿ ಮದುವೆ ಆಗುವುದಾಗಿ ನಂಬಿಸಿದ್ದ ಯುವಕನು ಬಲವಂತ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಈಗ 6 ತಿಂಗಳ ಗರ್ಭಿಣಿಯಾಗಿದ್ದರೂ ಮದುವೆ ಆಗುತ್ತಿಲ್ಲ ಎಂದು ಯುವತಿ ಕಣ್ಣೀರಿಟ್ಟಿದ್ದಾಳೆ. ನ್ಯಾಯ ಕೊಡಿಸಬೇಕೆಂದು ಪೊಲೀಸರ ಮೊರೆ ಹೋಗಿದ್ದಾಳೆ.ಇದನ್ನೂ ಓದಿರಿಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳಿಂದ ಹೀನಾಯ ಕೃತ್ಯ!
ಯುವಕ ಮತ್ತು ಯುವತಿ ಇಬ್ಬರೂ ಈ ಮೊದಲು ಬೆಂಗಳೂರಿನಲ್ಲಿ ನೆಲೆಸಿದ್ದರು. ಆ ವೇಳೆ ಇಬ್ಬರಿಗೂ ಪರಿಚಯ, ಪ್ರೀತಿಗೆ ತಿರುಗಿದೆ. ಕಳೆದ ವರ್ಷ ಗ್ರಾಮಕ್ಕೆ ವಾಪಸ್​ ಬಂದಿದ್ದ ಯುವಕ ತಾಲೂಕಿನಲ್ಲೇ ವಾಸವಿದ್ದ. ಆ ವೇಳೆ ಯುವತಿಯೂ ಹಿಂತಿರುಗಿದ್ದಳು. ಬಳಿಕ ಯುವಕನೇ ಯುವತಿಯನ್ನು ಅಪ್ಪೆ ಆಟೋದಲ್ಲಿ ಶುಂಠಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ. ಬೆಂಗಳೂರಿನಲ್ಲಿ ನೆಲೆಸಿದ್ದ ವೇಳೆಯೂ ಯುವತಿಯ ರೂಮಿಗೆ ಬಂದು ಹೋಗುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಹೊಂದಿದ್ದು, ಆಕೆ ಗರ್ಭಿಣಿ ಆಗುತ್ತಿದ್ದಂತೆ ಕೈಕೊಟ್ಟಿದ್ದಾನೆ. ಈ ಬಗ್ಗೆ ಸ್ವತಃ ಯುವತಿಯೇ ಅರಕಲಗೂಡು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ. ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಮೈಮುಟ್ಟಿದ ಕಾಮುಕ… ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − thirteen =
Remember me
