ಬೆಂಗಳೂರು:ಕೆಎಸ್ಸಾರ್ಟಿಸಿಯಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿ ನೌಕರರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಎಲ್ಲ ಘಟಕ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಆದೇಶಿಸಿದ್ದಾರೆ. ಕರೊನಾ ಸೋಂಕಿನ ಭೀತಿಯ ನಡುವೆ ಕೆಲಸ ಮಾಡುತ್ತಿರುವ ಗರ್ಭಿಣಿ ನೌಕರರಿಗೆ ಕೆಲವೊಂದು ವಿನಾಯಿತಿ ನೀಡಲು ಕೆಎಸ್ಸಾರ್ಟಿಸಿ ಮುಂದಾಗಿದೆ.
ಅದರಂತೆ ಗರ್ಭಿಣಿ ನೌಕರರಿಗೆ ಗರ್ಭಧಾರಣೆ ಮಾಡಿದ 3 ತಿಂಗಳ ನಂತರ ಲಘು ಕರ್ತವ್ಯಕ್ಕೆ ನಿಯೋಜಿಸುವಂತೆ ಸೂಚಿಸಲಾಗಿದೆ. ಅದರ ಜತೆಗೆ 7 ತಿಂಗಳು ತುಂಬಿದವರಿಗೆ ಮುಂದಿನ 6 ತಿಂಗಳು ಕಡ್ಡಾಯವಾಗಿ ಹೆರಿಗೆ ರಜೆಯನ್ನು ನೀಡಬೇಕು. ಹೆರಿಗೆ ರಜೆ ಮುಕ್ತಾಯವಾದ ನಂತರವೂ ನೌಕರರ ಖಾತೆಯಲ್ಲಿ ರಜೆಯಿದ್ದರೆ ಮುಂದಿನ 3 ತಿಂಗಳವರೆಗೆ ರಜೆಯನ್ನು ವಿಸ್ತರಿಸಬೇಕು. ಒಂದು ವೇಳೆ ಖಾತೆಯಲ್ಲಿ ರಜೆಯಿಲ್ಲದಿದ್ದರೆ, ಲೆಕ್ಕಕ್ಕಿಲ್ಲದ ರಜೆ ರೂಪದಲ್ಲಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೌಕರರು ಹೆರಿಗೆ ನಂತರ ಮಗುವಿಗೆ 1 ವರ್ಷ ತುಂಬುವವರೆಗೆ ರಜೆ ತೆಗೆದುಕೊಳ್ಳಲು ಬಯಸಿದರೆ, ಅದನ್ನು ಕೂಡಲೆ ಪರಿಗಣಿಸಬೇಕು. ಅವರ ಖಾತೆಯಲ್ಲಿ ರಜೆಯಿಲ್ಲದಿದ್ದರೆ ವೇತನ ರಹಿತ ರಜೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eight =
Remember me
