ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಹೊರತರುತ್ತೇವೆ, ನೀವು ಮಾಸ್ಟರ್ ಪ್ಲಾ್ಯನ್ ಸಿದ್ಧಪಡಿಸಿಕೊಂಡು ಬನ್ನಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಎರಡನೇ ದಿನದ ಡಿಸಿ, ಸಿಇಒ ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಅನೇಕ ರಾಜ್ಯಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ನೆರೆಯ ಕೇರಳದಷ್ಟು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಸಿದರೆ ಮಾತ್ರ ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆ ಗುರುತಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲ ಸರ್ಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲ ಅಂಶಗಳನ್ನು ಸೇರಿಸಲಾಗುವುದು. ಇದಕ್ಕೆ ಪೂರಕವಾಗಿ ಅನುದಾನ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಕೆಲವೇ ಪ್ರವಾಸೋದ್ಯಮ ತಾಣಗಳಿಗೆ ಫೋಕಸ್ ದೊರೆಯುತ್ತಿದೆ. 23 ಸಾವಿರ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹಾಗೆಯೇ ಕರಾವಳಿಯಲ್ಲಿ ಒಂದೇ ಒಂದು ಪಂಚತಾರಾ ಹೊಟೇಲ್ ಇಲ್ಲ. ಸಂಜೆಯಾಗುತ್ತಿದ್ದಂತೆಯೇ ಇಡೀ ಮಂಗಳೂರು ಮುಚ್ಚಿಕೊಳ್ಳುತ್ತದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಕ್ಕೆ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ ಎಂದರು. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ದನಿಗೂಡಿಸಿ, ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ. ಇವುಗಳ ಮಹತ್ವ ಅರಿತು ಗೈಡ್​ಗಳನ್ನು ನೇಮಿಸುವುದಾಗಲಿ, ಸಮೀಕ್ಷೆ ನಡೆಸಿ, ಸಂರಕ್ಷಣೆ ಮಾಡಿ ನಿಮ್ಮ ನಿಮ್ಮ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಅವಕಾಶಗಳಿವೆ. ಬಜೆಟ್​ಪ್ಲಾನ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಡಿಸಿಗಳಿಗೆ ಸೂಚಿಸಿದರು.
ರಸ್ತೆಗಿಳಿದು ಸುರಕ್ಷತೆ ಪರೀಕ್ಷಿಸಿ:ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 34,916 ಅಪಘಾತ ಸಂಭವಿಸಿದ್ದು, 9943 ಜನರು ಸಾವಿಗೀಡಾಗಿದ್ದಾರೆ. ಅಧಿಕಾರಿಗಳ ಉದಾಸೀನದಿಂದ ಜನರ ಅಮೂಲ್ಯ ಪ್ರಾಣ ಹೋದರೆ ಸಹಿಸಲ್ಲ, ನೀವು ರಸ್ತೆಗಿಳಿದು ಸುರಕ್ಷತೆ ಪರೀಕ್ಷಿಸಿ ಎಂದು ಸಿಎಂ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ರಸ್ತೆ ಸುರಕ್ಷತಾ ಸಮಿತಿಗಳು ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ತಡೆಯಲು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಹಾಟ್​ಸ್ಟಾಟ್​ಗಳನ್ನು ಗುರುತಿಸಿ ಹೆದ್ದಾರಿಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ, ಟ್ರಾಮಾ ಸೆಂಟರ್ ನೆಟ್​ವರ್ಕ್ ಮಾಡಬೇಕು ಎಂದರು.
ಶಾಲೆ ಅಭಿವೃದ್ಧಿಗೆ ಖಾಸಗಿ ನೆರವು:ಮುಂದಿನ ಮೂರು ವರ್ಷಗಳಲ್ಲಿ 2 ಸಾವಿರ ಮಾದರಿ ಶಾಲೆಗಳನ್ನು ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ಪ್ರಮುಖ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಸಿಎಂ ತಿಳಿಸಿದರು.
13 ಸಾವಿರ ಬಾಲ ಗರ್ಭಿಣಿಯರು!:ರಾಜ್ಯದಲ್ಲಿ 2022-23ರ ಅವಧಿ ಯಲ್ಲಿ 13,477 ಬಾಲ ಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿದ್ದು, ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದರು. ಜಿಲ್ಲಾ, ತಾಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿ ಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆಗೆ ಕ್ರಮಕೈಗೊಳ್ಳಿ ಎಂದರಲ್ಲದೇ, ಬಾಲ ತಾಯಂದಿರ ಪ್ರಕರಣಗಳಲ್ಲಿ ದೂರುಗಳು ಬಂದಾಗ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದರು.
ಅರಣ್ಯ ಭೂಮಿ ಹಕ್ಕು ಖಾತ್ರಿಗೆ ನಿರ್ಣಯ:ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಖಾತ್ರಿಪಡಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮದಡಿ 24186 ಅರ್ಜಿಗಳು ಇತ್ಯರ್ಥವಾಗದೇ ಬಾಕಿಯಿವೆ. ಅದನ್ನು ಪರಿಹರಿಸಬೇಕು. ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ 44040 ಜೇನುಕುರುಬ ಹಾಗೂ 13007 ಕೊರಗರು ಇದ್ದಾರೆ. ಇವರಿಗಾಗಿ 12ಸಾವಿರ ಮನೆ ನಿರ್ವಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸ್ಥಳ ಗುರುತಿಸಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು, ಗುರುತಿನ ಚೀಟಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಸಭೆ ನಡೆಸಲೇಕೆ ತಾತ್ಸಾರ?:ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ದೌರ್ಜನ್ಯ ತಡೆ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸದಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಸಭೆಯನ್ನೇ ನಡೆಸದ 13 ಉಪ ವಿಭಾಗಗಳ ಬಗ್ಗೆ ಎಸಿಗಳಿಗೆ ಎಚ್ಚರಿಕೆ ನೀಡಿದ ಸಿಎಂ,3 ತಿಂಗಳಿಗೊಮ್ಮೆ ಸಭೆ ನಡೆಸುವುದನ್ನು ಯಾವುದೇ ತಪ್ಪಿಸಬಾರದು ಎಂದು ತಾಕೀತು ಮಾಡಿದರು. ಹಾಗೆಯೇ, ಸಿಂಧುತ್ವ ಪ್ರಮಾಣಪತ್ರ ವಿಚಾರದಲ್ಲಿ ಅಸಡ್ಡೆ ಬೇಡ. ಅರ್ಹರಾಗಿದ್ದರೆ ತಕ್ಷಣ ಕೊಡಿ, ಅರ್ಹತೆ ಇಲ್ಲದಿದ್ದರೆ ಸ್ಪಷ್ಟವಾಗಿ ತಿಳಿಸಿ, ಸತಾಯಿಸಬೇಡಿ. ವಿನಾಕಾರಣ ಸಿಂಧುತ್ವ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರೆ ಜಿಲ್ಲಾಧಿಕಾರಿಯನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂಗನವಾಡಿ ಭರ್ತಿ ಜತೆ ವೇತನ ಹೆಚ್ಚಳ:ಅಂಗನವಾಡಿ ಕಾರ್ಯಕರ್ತೆಯರ 4180 ಹುದ್ದೆಗಳು ಹಾಗೂ ಸಹಾಯಕಿ ಯರ 9411 ಹುದ್ದೆಗಳು ಖಾಲಿಯಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು. ಹಾಗೆಯೇ, ನಗರ ಪ್ರದೇಶದಲ್ಲಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಒತ್ತುವರಿ ತೆರವಿಗೆ ಆದ್ಯತೆ ನೀಡಿ :ರಾಜ್ಯದಲ್ಲಿ 217 ವಕ್ಪ್ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ. ವಕ್ಪ್ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಆದ್ಯತೆ ಮೇಲೆ ಚುರುಕá-ಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಬೆಂಗಳೂರು:ಆಡಳಿತ ಜನರ್ಸ³ಯಾಗಿರಬೇಕು, ಸ್ಪಂದನೆ ತಲರ್ಸ³ ಯಾಗಿರಬೇಕು ಎನ್ನುವುದು ಸರ್ಕಾರದ ಆಶಯ. ಅಧಿಕಾರಿಗಳ ಸುದೀರ್ಘ ಸಭೆಯಲ್ಲಿ ಇದೇ ಅಂಶವನ್ನು ಸಿಎಂ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸುಗಮ, ಪರಿಣಾಮಕಾರಿ ಆಡಳಿತ, ಸರ್ಕಾರದ ಕಾರ್ಯಕ್ರಮಗಳು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪಬೇಕು. ಡಿಸಿ, ಸಿಇಒ, ಎಸ್​ಪಿ, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ತಿಳಿಹೇಳಲಾಗಿದೆ.
ಸಭೆ ಕರೆದ ಉದ್ದೇಶ ವಿವರಿಸಿರುವ ಸಿಎಂ, ಸರ್ಕಾರದ ನಿರೀಕ್ಷೆ ಏನೆಂಬುದು ತಿಳಿಸಿರುವೆ. ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳಿಗೆ ಬೆನ್ನುತಟ್ಟಿರುವೆ. ಹಾಗೆಯೇ ನ್ಯೂನತೆಗಳಿಗೆ ತಿದ್ದಿಕೊಳ್ಳಬೇಕು ಎನ್ನುವ ಸಲಹೆ ನೀಡಿ, ಅಗತ್ಯಬಿದ್ದರೆ ಶಿಸ್ತು ಕ್ರಮವಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಎರಡು ದಿನಗಳ ಸಭೆಯಲ್ಲಿ 30 ಇಲಾಖೆಗಳ 68 ವಿಷಯಗಳನ್ನು ರ್ಚಚಿಸಲಾಗಿದೆ. ಡಿಸಿ. ಜಿ.ಪಂ. ಸಿಇಒಗಳಾಗಿ ಹೋದವರು ಮೊದಲು ಜಿಲ್ಲೆಯ ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಪರಂಪರೆ ಅರಿತರೆ ಜನಪರವಾಗಿ ಕೆಲಸ ಮಾಡುವುದು ಸುಲಭವಾಗುತ್ತದೆ ಎಂದರು.
ರಾಜ್ಯದಲ್ಲಿ ಡಿಸಿ, ಸಿಇಒಗಳಾಗಿ ಕೆಲಸ ಮಾಡಿದವರಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟವರಿದ್ದಾರೆ. ಆರ್ಥಿಕ ಸಮೀಕ್ಷಾ ವರದಿಗಳು, ಮಾನವ ಅಭಿವೃದ್ಧಿ ಸೂಚ್ಯಂಕದ ವರದಿಗಳಿವೆ. ಇವನ್ನೆಲ್ಲ ಅಧ್ಯಯನ ಮಾಡಲು ಸಲಹೆ ನೀಡಿರುವೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಸಭೆ ನಡೆಯಲಿದೆ ಎಂದು ತಿಳಿಸಿದರು.
ಆಗಸ್ಟ್​ನಲ್ಲಿ ಜನಸಂಪರ್ಕ ಸಭೆ:ಹಿಂದೆ ನಡೆದ ರಾಜ್ಯಮಟ್ಟದ ಜನಸಂಪರ್ಕ ಸಭೆಗಳಲ್ಲಿ 20 ಸಾವಿರ ಅರ್ಜಿ ಸ್ವೀಕಾರವಾಗಿದ್ದವು. ಈ ಪೈಕಿ ಕಂದಾಯ ಇಲಾಖೆ ಅರ್ಜಿಗಳು ಹೆಚ್ಚಿದ್ದವು. ಶೇ.80 ಗುಣಮಟ್ಟದ ಅರ್ಜಿಗಳು ವಿಲೇವಾರಿಯಾಗಿದ್ದು, ಕಾನೂನು ತೊಡಕಿನ ಅರ್ಜಿಗಳು ತಿರಸ್ಕೃತವಾಗಿವೆ. ಇನ್ನೂ 178 ಅರ್ಜಿ ಬಾಕಿಯಿವೆ. ಮುಂದಿನ ರಾಜ್ಯಮಟ್ಟದ ಜನಪಸಂಪರ್ಕ ಸಭೆ ಕಲಬುರಗಿಯಲ್ಲಿ ಏರ್ಪಡಿಸಲು ತೀರ್ವನಿಸಿದ್ದು, ಬಹುತೇಕ ಆಗಸ್ಟ್ ನಲ್ಲಿ ನಡೆಯಲಿದೆ ಎಂದು ಸಿಎಂ ಹೇಳಿದರು.
ಜಾತಿ ಗಣತಿ ವರದಿ ಇನ್ನೂ ಓದಿಲ್ಲ:ಸಾಮಾಜಿಕ, ಶೈಕ್ಷಣಿಕ, ಆರ್ಥಿಕ (ಜಾತಿ ಗಣತಿ) ವರದಿಯನ್ನು ನಾನಿನ್ನೂ ಓದಿಲ್ಲ, ವರದಿ ಸ್ವೀಕರಿಸಿದ್ದೇನಷ್ಟೇ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಬಿಪಿಎಲ್ ಪಡಿತರ ಚೀಟಿ ಉಳ್ಳವರಲ್ಲಿ ಅರ್ಹರು, ಅನರ್ಹರನ್ನು ಗುರುತಿಸಲು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಹೊಸದಾಗಿ ಬಿಪಿಎಲ್ ಕಾರ್ಡ್ ಬಯಸಿ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳ ಪೈಕಿ ಅರ್ಹರನ್ನು ಗುರುತಿಸಿ ವಿತರಿಸಲು ಸೂಚಿಸಿರುವೆ ಎಂದರು. ಅರ್ಹ, ಅನರ್ಹರನ್ನು ಗುರುತಿಸಲು ಮತ್ತೊಮ್ಮೆ ಸಮೀಕ್ಷೆ ಏಕೆ? ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಬಳಸಿಕೊಳ್ಳಬಹುದಲ್ಲ? ಎಂದು ಪತ್ರಕರ್ತರು ಕೇಳಿದಾಗ ವರದಿ ಸ್ವೀಕರಿಸಿದ್ದೇನೆ, ನಾನು ಓದಿಲ್ಲ. ನೀವು (ಪತ್ರಕರ್ತರು) ಓದಿದ್ದೀರಾ ಎಂದು ಮರುಪ್ರಶ್ನಿಸಿದರು.
ಕುವೆಂಪು ಏನು ಹೇಳಿದ್ದಾರೆ ಗೊತ್ತಾ?:ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್​ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿ, ಸಿಇಒಗಳ ಸಭೆಯಲ್ಲಿ ಪ್ರಸ್ತಾಪಿಸಿದರು. ಅಲ್ಪಸಂಖ್ಯಾತ ಇಲಾಖೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಇಂಡೀಕರಣ ಪದ ಬಳಸಿದರು. ಈ ವೇಳೆ ಸಿಎಂ, ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ, ಇಂಡೀಕರಣ ಎಂದರೆ ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಹೀಗಾಗಿ ಮ್ಯುಟೇಶನ್ ಪದವನ್ನೇ ಬಳಸಿ ಎಂದು ಕುವೆಂಪು ಮಾತನ್ನು ನೆನಪಿಸಿದರು
.ಜಿಲ್ಲೆಗಳಲ್ಲಿರುವ ನರ್ಸಿಂಗ್ ಡಿಪ್ಲೊಮಾ ಕಾಲೇಜುಗಳ ಕಾರ್ಯನಿರ್ವಹಣೆ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಖುದ್ದು ತಪಾಸಣೆ ಮಾಡಿ ವರದಿ ಸಲ್ಲಿಸಿ.
.ಜಾನುವಾರುಗಳ ಗಣತಿ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು.
.ಗಂಗಾಕಲ್ಯಾಣ ಯೋಜನೆಯಡಿ ಇನ್ನೂ 5203 ಬೋರ್​ವೆಲ್​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ಕೂಡಲೇ ಕ್ರಮಕೈಗೊಳ್ಳಬೇಕು.
.ಬಿತ್ತನೆ ಬೀಜದ ಸಂಗ್ರಹವಿದೆ, ಕಳಪೆ ಬೀಜ ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
.ಜಿಲ್ಲಾ ಮಟ್ಟದಲ್ಲಿ ಕಾಲೇಜುಗಳು ಹೆಚ್ಚಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗದ ಹೊಸ ಹಾಸ್ಟೆಲ್​ಗಳ ನಿರ್ವಣಕ್ಕೆ ಆದ್ಯತೆ ನೀಡಬೇಕು.
.ಯುವ ನಿಧಿ ಭತ್ಯೆ ಎರಡು ವರ್ಷ ಮಾತ್ರ ನೀಡುವ ಕಾರಣ, ಅರ್ಹರಿಗೆ ತರಬೇತಿ ನೀಡಿ ಕೈಗಾರಿಕೋದ್ಯಮಗಳಲ್ಲಿ ಉದ್ಯೋಗ ಕೊಡಿಸಲು ಕ್ರಮಕೈಗೊಳ್ಳಿ
ಸನ್ನಡತೆ ಆಧಾರದ ಮೇಲೆ 77 ಕೈದಿಗಳ ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 5 =
Remember me
