ವಿಲಾಸ ಮೇಲಗಿರಿಬೆಂಗಳೂರು
ಕರೊನಾ ಸೋಂಕು ವ್ಯಾಪಿಸುತ್ತಿದ್ದು, ಸಭೆ-ಸಮಾರಂಭಗಳ ನಿರ್ಬಂಧದ ನಡುವೆಯೂ ಅಧಿವೇಶನ ನಡೆಸಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಅಳೆದೂ ತೂಗಿ ಹೆಜ್ಜೆ ಇಡುತ್ತಿದೆ. ಸಂಸತ್ ಅನುಸರಿಸುತ್ತಿರುವ ಉಪಕ್ರಮಗಳನ್ನು ಅಳವಡಿಸಿಕೊಂಡು ಸೆ.21ರಿಂದ 30ರವರೆಗೆ ವಿಧಾನಸೌಧದಲ್ಲಿಯೇ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 5-6 ಸಚಿವರು ಹಾಗೂ 10-20 ಶಾಸಕರು ಕರೊನಾ ಸೋಂಕು ಬಾಧಿತರಾಗಿರುವುದರಿಂದ ಅಧಿವೇಶನವನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಬೇಕಾದ ಸವಾಲು ಸರ್ಕಾರದ ಮೇಲಿದೆ.
ಟೆಸ್ಟ್ ಕಡ್ಡಾಯ:ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಮಂಡಲದ ಸದಸ್ಯರು, ಅಧಿಕಾರಿಗಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ. ವಿಧಾನಸಭೆಯ 225, ವಿಧಾನಪರಿಷತ್ತಿನ 75 ಸದಸ್ಯರು ಹಾಗೂ ಅವರ ಆಪ್ತ ಸಹಾಯಕರು, ಸಿಎಂ, ಸ್ಪೀಕರ್, ಸಭಾಪತಿಗಳ ಸಚಿವಾಲಯದ ಅಧಿಕಾರಿಗಳು, ಸಚಿವರು ಮತ್ತು ಅವರ ಆಪ್ತ ಕಾರ್ಯದರ್ಶಿಗಳ ದೊಡ್ಡ ಸಮೂಹವನ್ನಿಟ್ಟುಕೊಂಡು ಕರೊನಾ ವಿರುದ್ಧ ಗೆಲ್ಲಲು ಸರ್ಕಾರ ಕಣ್ಗಾವಲು ತಂಡ ರಚಿಸಿ ರೂಪುರೇಷೆ ಸಿದ್ಧಪಡಿಸಿದೆ.
72 ಗಂಟೆ ಮುಂಚೆ ಪರೀಕ್ಷೆ:ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಪತ್ರಕರ್ತರು ಅಧಿವೇಶನ ಆರಂಭಕ್ಕೂ 72 ಗಂಟೆ ಮುಂಚಿತವಾಗಿಯೇ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. 20 ನಿಮಿಷದಲ್ಲೇ ಪರೀಕ್ಷಾ ವರದಿ ನೀಡಲಾಗುತ್ತದೆ. ಈ ಸಂಬಂಧ ಖುದ್ದು ಮುಖ್ಯಮಂತ್ರಿಗಳೇ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಪಂಜಾಬ್ ಭೀತಿ:ಪಂಜಾಬ್​ನಲ್ಲಿ ಅಧಿವೇಶನದ ವೇಳೆ 23 ಶಾಸಕರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಭಯದ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರ ಸಜ್ಜಾಗಿದೆ.
ಹಲವು ಉಪಕ್ರಮ ಘೊಷಣೆ:ಈಗಾಗಲೆ ಉಭಯ ಸದನಗಳ ಸದಸ್ಯರ ಸೀಟುಗಳ ಮಧ್ಯೆ ಗಾಜಿನ ಪರದೆ ಅಳವಡಿಕೆ, ಮಾಸ್ಕ್, ಫೇಸ್​ಶೀಲ್ಡ್, ಸಾಮಾಜಿಕ ಅಂತರ ಪಾಲನೆ, ಇಲಾಖೆಗೆ ಒಬ್ಬ ಅಧಿಕಾರಿಗೆ ಮಾತ್ರ ಪ್ರವೇಶ, 70 ವರ್ಷ ಮೇಲ್ಪಟ್ಟ ಸದಸ್ಯರಿಗೆ ಹಾಜರಿ ವಿನಾಯಿತಿ, ಪ್ರೇಕ್ಷಕರ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ನಿಷೇಧದಂತಹ ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ.
ವಿಶೇಷ ಮುತುವರ್ಜಿ:ಅಧಿವೇಶನವನ್ನು ಸರ್ಕಾರ ಸ್ಪೀಕರ್ ಹಾಗೂ ಸಭಾಪತಿಗಳು ಸವಾಲಾಗಿ ಸ್ವೀಕರಿಸಿದ್ದು, ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳಂತೆಯೇ ಅಧಿವೇಶನವನ್ನೂ ನಡೆಸಿ ರಾಷ್ಟ್ರಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ನಡೆಸಿದ್ದಾರೆ.
ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್​; ಅನ್​ಲಾಕ್​ 4.0 ಮಾರ್ಗಸೂಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
