ಬಾಗಲಕೋಟೆ:ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠಾರೋಹಣ ಕಾರ್ಯಕ್ರಮಕ್ಕೆ ಜಮಖಂಡಿ ತಾಲೂಕು ಆಲಗೂರ ಗ್ರಾಮದಲ್ಲಿ ಒಕ್ಕೂಟ ನಿಗದಿಪಡಿಸಿರುವ ಜಾಗದಲ್ಲಿ ಭರದ ಸಿದ್ಧತೆಗಳು ನಡೆದಿವೆ.
ಸಾಕಷ್ಟು ಚರ್ಚೆ, ಟೀಕೆ-ಟಿಪ್ಪಣಿಗಳನ್ನು ಬದಿಗೊತ್ತಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ 3ನೇ ಪೀಠದ ನೂತನ ಪೀಠಾಧಿಪತಿ ಪೀಠಾರೋಹಣ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘಟಕರು ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಪೀಠಾರೋಹಣಕ್ಕೆ ಬರುವ ಭಕ್ತರಿಗಾಗಿ ಒಂದು ಎಕರೆ ಜಮೀನಿನಲ್ಲಿ ಬೃಹತ್ ಶಾಮಿಯಾನ ಹಾಗೂ ಮುಖ್ಯ ವೇದಿಕೆ ತಯಾರಿ ಕಾರ್ಯ ನಡೆದಿದೆ.
ಪಂಚಮಸಾಲಿ 3ನೇ ಪೀಠಕ್ಕೆ ಫೆ.13ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಬೃಹನ್ಮಠದ ಮಹದೇವ ಶಿವಾಚಾರ್ಯರು ಪೀಠಾರೋಹಣ ಮಾಡಲಿದ್ದಾರೆ. ಪಟ್ಟಾಧಿಕಾರ ಸಮಾರಂಭ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಒಕ್ಕೂಟದಿಂದ ‘ರೈತ ವಿರಾಟ ಸಮಾವೇಶ’ವನ್ನೂ ಹಮ್ಮಿಕೊಂಡಿದ್ದು, ಸಮಾವೇಶಕ್ಕೆ ಸಹಸ್ರಾರು ರೈತರು ಹಾಗೂ ಭಕ್ತರು ಭಾಗವಹಿಸುವ ವಿಶ್ವಾಸದಲ್ಲಿ ಒಕ್ಕೂಟದ ಸ್ವಾಮೀಜಿಗಳು ಇದ್ದಾರೆ.
ಬಸವ ಜೋಳಿಗೆ:ಪಟ್ಟಾಧಿಕಾರ ಸಮಾರಂಭಕ್ಕೆ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆಗಾಗಿ ಒಕ್ಕೂಟದ ಸ್ವಾಮೀಜಿಗಳು ‘ಬಸವ ಜೋಳಿಗೆ’ ಅಭಿಯಾನ ಆರಂಭಿಸಿದ್ದು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಪಂಚಮಸಾಲಿ ಸೇರಿ ವಿವಿಧ ಸಮುದಾಯಗಳ ಭಕ್ತರು ಸಹ ಕಾಣಿಕೆ ಜತೆಗೆ ದವಸ, ಧಾನ್ಯ, ದಿನಸಿ ವಸ್ತುಗಳನ್ನು ಭಕ್ತಿಸೇವೆ ಸಮರ್ಪಿಸುತ್ತಿದ್ದಾರೆ.
ಪಂಚಮಸಾಲಿ, ಹಾಲುಮತ, ಗಾಣಿಗ, ಬಣಜಿಗ, ಜಂಗಮ, ಜೈನ, ಮುಸ್ಲಿಂ ಸೇರಿ ವಿವಿಧ ಸಮುದಾಯ ಹಾಗೂ ಧರ್ಮಗಳ ಭಕ್ತರು ದಾಸೋಹ ಕಾರ್ಯಕ್ಕೆ ನೆರವು ನೀಡುತ್ತಿದ್ದಾರೆ. ಪೀಠಾರೋಹಣ ಕಾರ್ಯಕ್ರಮಕ್ಕೆ ವಿವಿಧ ಸಮುದಾಯಗಳ ಜನರು ಪಾಲ್ಗೊಳ್ಳುತ್ತಿದ್ದಾರೆ. ಈ ಮಹತ್ವದ ಹಾಗೂ ಸಮಾಜಮುಖಿಯಾದ ಕಾರ್ಯಕ್ರಮಕ್ಕೆ ಎಲ್ಲರ ಭಕ್ತಿ ಇರಬೇಕು ಎನ್ನುವ ಕಾರಣಕ್ಕೆ ಈ ಬಸವ ಜೋಳಿಗೆ ಮೂಲಕ ದವಸ ಧಾನ್ಯ ಸಂಗ್ರಹಿಸುತ್ತಿದ್ದೇವೆ. ಇದಕ್ಕೆ ಎಲ್ಲ ಕಡೆಯಿಂದಲೂ ಉತ್ತಮವಾದ ಸ್ಪಂದನೆ ಹಾಗೂ ಸಹಕಾರ ಸಿಕ್ಕಿದ್ದು, ತುಂಬಾ ಸಂತೋಷ ಉಂಟು ಮಾಡಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ, ಉಪಾಧ್ಯಕ್ಷ ರೇವಣಸಿದ್ದ ಸ್ವಾಮೀಜಿ ಹಾಗೂ ಆಲಗೂರ ಧರಿದೇವರ ಮಠದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಸ್ವಾಗತ ಸಮಿತಿಗೆ ಸಂಗಮೇಶ ಅಧ್ಯಕ್ಷ:ಮೂರನೇ ಪೀಠದ ಪೀಠಾರೋಹಣ ಕಾರ್ಯಕ್ರಮದ ಸ್ವಾಗತಿ ಸಮಿತಿ ಅಧ್ಯಕ್ಷರನ್ನಾಗಿ ಸಚಿವ ಮುರುಗೇಶ ನಿರಾಣಿ ಅವರ ಸಹೋದರ, ಉದ್ಯಮಿ ಸಂಗಮೇಶ ನಿರಾಣಿ ಅವರನ್ನು ಒಕ್ಕೂಟದ ಸ್ವಾಮೀಜಿಗಳು ನೇಮಕ ಮಾಡಿದ್ದಾರೆ.
ಪಂಚಮಸಾಲಿ ಸಮಾಜ ಮಾತ್ರವಲ್ಲದೆ, ನಾಡಿನಲ್ಲಿ ಇರುವ ಎಲ್ಲ ಮಠಗಳು ಹಾಗೂ ಮಠಾಧೀಶರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಈ ವಿಚಾರವಾಗಿ ಯಾರು ತಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೋ ಅವರನ್ನು ಹಗುರವಾಗಿ ಬಿಡುವುದು ಉತ್ತಮ.
|ಸಂಗಮೇಶ ನಿರಾಣಿಉದ್ಯಮಿ
ಫೆ.13ರಂದು ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಅಂದು ಪೀಠಾರೋಹಣದ ಜತೆಗೆ ಧರ್ಮ ಸಭೆ, ರೈತ ವಿರಾಟ ಸಮಾವೇಶ ನಡೆಯಲಿದೆ.
|ಸಂಗನಬಸವ ಸ್ವಾಮೀಜಿಪ್ರಧಾನ ಕಾರ್ಯದರ್ಶಿ, ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ
ವಿವಿಧ ಮಠಾಧೀಶರು ಭಾಗಿ:ಪೀಠಾರೋಹಣ ಕಾರ್ಯಕ್ರಮಕ್ಕೆ ನಾಡಿನ 300ಕ್ಕೂ ಅಧಿಕ ಹರ ಗುರು, ಚರಮೂರ್ತಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಂತ್ರಾಲಯ ಸ್ವಾಮೀಜಿ, ರವಿಶಂಕರ ಗುರೂಜಿ, ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ, ನಿಡಸೋಶಿ ಮಠದ ಸ್ವಾಮೀಜಿ, ಕನ್ಹೇರಿ ಮಠದ ಸ್ವಾಮೀಜಿಗಳು ಬರಲಿದ್ದಾರೆ. ಹಾಗೆಯೇ ಅನೇಕ ಶ್ರೀಗಳು ಶುಭಹಾರೈಕೆ ಆಶೀರ್ವಚನ ಕಳುಹಿಸಿದ್ದಾರೆಂದು ಸ್ವಾಗತ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ ಹೇಳಿದ್ದಾರೆ.
ಆಲಗೂರದಲ್ಲಿ ಫೆ.13ರಂದು ಸ್ಥಾಪನೆ ಆಗಲಿರುವ ಪಂಚಮಸಾಲಿ 3ನೇ ಪೀಠ ಯಾವುದೇ ಪೀಠಕ್ಕೆ ಪರ್ಯಾಯವಲ್ಲ. ಪಂಚಮಸಾಲಿ ಸಮಾಜದ ಮಕ್ಕಳಲ್ಲಿ ಧಾರ್ವಿುಕ ಸಂಸ್ಕಾರ, ಲಿಂಗದೀಕ್ಷೆ, ಲಿಂಗಪೂಜೆ ನಿಷ್ಠೆ ಬೆಳೆಸುವುದಾಗಿದೆ. ಈಗ ಪೀಠಕ್ಕೆ ವಿರೋಧ ಮಾಡಿರುವ ಕೆಲವರೂ ಮುಂಬರುವ ದಿನಗಳಲ್ಲಿ ನಮ್ಮೊಂದಿಗೆ ಬರುತ್ತಾರೆ. ಎಲ್ಲರೂ ಸೇರಿಕೊಂಡು ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತೇವೆ.
|ಮಹದೇವ ಶಿವಾಚಾರ್ಯರುಪಂಚಮಸಾಲಿ 3ನೇ ಪೀಠದ ನಿಯೋಜಿತ ಪೀಠಾಧಿಪತಿ
ಬೆಂಗಳೂರು:ರಾಜ್ಯದ ಪಂಚಮಸಾಲಿ ಸಮುದಾಯದ ಸಂಘಟನೆಯ ನೊಗಕ್ಕೆ ಹೆಗಲಾಗಲು ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಫೆ.13 ರಂದು ಉದಯವಾಗಲಿದೆ ಎಂದು ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಶ್ವಾಸ ಕೇಂದ್ರದಲ್ಲಿ ಮಾತನಾಡಿ, ಸಮುದಾಯವು ರಾಜ್ಯದ ವಿವಿಧ ಭಾಗಗಳಲ್ಲಿ ಹಂಚಿ ಕೊಂಡಿದೆ. ಕೇವಲ ಒಂದು ಪೀಠದ ವ್ಯಾಪ್ತಿ ಸಾಕಾಗುವುದಿಲ್ಲ. ನಮ್ಮ ಮೂಲ ಪೀಠದ ಜತೆ ಹೆಜ್ಜೆ ಹಾಕುವಂತಹ ನೂತನ ಶಕ್ತಿ ಬೇಕಾಗಿತ್ತು. ಈ ನಿಟ್ಟಿನಲ್ಲಿ ಇನ್ನೊಂದು ಪೀಠ ಸ್ಥಾಪನೆಯಾಗಿದೆ. ಉತ್ತರ ಕರ್ನಾಟಕ ಭಾಗದ ಸಂಘಟನೆಗೆ ಜಮಖಂಡಿ ಪೀಠ ಸ್ಥಾಪನೆಯಾಗುತ್ತಿದೆ. ನಾಡಿನ ಉದ್ದಗಲಕ್ಕೂ ಇನ್ನು ಕೆಲ ಪೀಠಗಳು ಉದಯವಾಗಲಿ. ಎಲ್ಲ ಪೀಠಗಳಿಗೂ ನಮ್ಮ ಬೆಂಬಲ ಇರಲಿದೆ ಎಂದರು.
ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

ಕ್ರಿಪ್ಟೊಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಆರ್​​ಬಿಐ ಗವರ್ನರ್​; ಹೂಡಿಕೆದಾರರಿಗೂ ಹುಷಾರು ಎಂಬ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
