| ರುದ್ರಣ್ಣ ಹರ್ತಿಕೋಟೆ ಬೆಂಗಳೂರುವಿವಿಧ ಖಾಸಗಿ ಉದ್ದಿಮೆಗಳಲ್ಲಿ ದುಡಿಯುವ ಕಾರ್ವಿುಕರ ಕನಿಷ್ಠ ವೇತನ ಪರಿಷ್ಕರಣೆಗೆ ತೀರ್ಮಾನ ಮಾಡಿರುವ ಸರ್ಕಾರ, ಇದಕ್ಕೆ ಪೂರಕವಾಗಿ ಕನಿಷ್ಠ ವೇತನ ಮಂಡಳಿಯನ್ನು ಇದೇ ವಾರದಲ್ಲಿ ರಚನೆ ಮಾಡಲು ಸಿದ್ಧತೆ ಮಾಡಿದೆ. ಈ ಮೂಲಕ ಕಾರ್ವಿುಕ ವರ್ಗಕ್ಕೆ ಗೌರಿ ಗಣೇಶ ಹಬ್ಬದ ಉಡುಗೊರೆ ನೀಡಲು ಮುಂದಾಗಿದೆ.
ರಾಜ್ಯದಲ್ಲಿ 70 ವಲಯದಲ್ಲಿ ಕಾರ್ವಿುಕರು ದುಡಿಯುತ್ತಿದ್ದಾರೆ. ಎಲ್ಲ ವಲಯದಲ್ಲಿ ದುಡಿಯುವ ಕಾರ್ವಿುಕರ ವೇತನ ಏಕರೂಪದಲ್ಲಿರಬೇಕು ಎಂಬ ಬಗ್ಗೆಯೂ ಕನಿಷ್ಠ ವೇತನ ಮಂಡಳಿಯಲ್ಲಿಯೇ ತೀರ್ಮಾನ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಭರವಸೆ ನೀಡಿತ್ತು.
ಕಾರ್ವಿುಕರ ಕನಿಷ್ಠ ವೇತನ ಪರಿಷ್ಕರಣೆ 2017ರ ನಂತರ ನಡೆದಿಲ್ಲ. ಹಿಂದಿನ ವರ್ಷ ಸರ್ಕಾರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಂಡಿತ್ತು. ಆದರೆ ಪರಿಷ್ಕರಣೆಗೆ ಒಪ್ಪದ ಕಾರ್ವಿುಕ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ತಡೆ ಹಿಡಿಯಲಾಗಿತ್ತು. ಏಕೆಂದರೆ ಶೇ.10 ರಷ್ಟು ಮಾತ್ರ ಪರಿಷ್ಕರಣೆ ಮಾಡಲಾಗಿತ್ತು. ಕಾರ್ವಿುಕ ಸಚಿವ ಸಂತೋಷ್ ಲಾಡ್ ಅವರು ಇತ್ತೀಚೆಗೆ ಕನಿಷ್ಠ ವೇತನವನ್ನು 31 ಸಾವಿರ ರೂ. ಮಾಡಿಯೇ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆದ್ದರಿಂದಲೇ ರಾಜ್ಯದಲ್ಲಿರುವ ಸುಮಾರು 1.30 ಕೋಟಿ ಕಾರ್ವಿುಕರು ಸರ್ಕಾರದ ಕಡೆ ಎದುರು ನೋಡುತ್ತಿದ್ದಾರೆ. ಅದರಲ್ಲಿ ಶೇ.85 ರಷ್ಟು ಅಸಂಘಟಿತ ವಲಯದಲ್ಲಿಯೇ ಇದ್ದಾರೆ.
ಮಂಡಳಿ ರಚನೆ:ವೇತನ ಪರಿಷ್ಕರಣೆಯಾಗಲು ಕಾರ್ವಿುಕರ ಕನಿಷ್ಠ ವೇತನ ಮಂಡಳಿ ರಚನೆ ಮಾಡಬೇಕಾಗುತ್ತದೆ. ಅದರಲ್ಲಿ ಅಧಿಕಾರಿಗಳು, ಕಾರ್ವಿುಕ ಸಂಘಟನೆಗಳ ಪ್ರತಿನಿಧಿಗಳು, ಉದ್ದಿಮೆಗಳ ಪ್ರತಿನಿಧಿಗಳು ಇದ್ದು ನಿರ್ಧಾರ ಮಾಡಬೇಕಾಗುತ್ತದೆ. ಈ ವಾರದಲ್ಲಿ ಸಮಿತಿ ರಚನೆಯಾಗುತ್ತಿದ್ದಂತೆ ರಾಜ್ಯವನ್ನು ಮೂರು ವಲಯವನ್ನಾಗಿ ಮಾಡಿ ತಕ್ಷಣ ಸಮೀಕ್ಷೆ ಮಾಡಲಾಗುತ್ತದೆ.
ವಲಯ ಒಂದು ಬೆಂಗಳೂರು ಇದ್ದರೆ, ವಲಯ ಎರಡರಲ್ಲಿ ಜಿಲ್ಲಾ ಕೇಂದ್ರಗಳು ಹಾಗೂ ವಲಯ ಮೂರರಲ್ಲಿ ಜಿಲ್ಲಾ ಕೇಂದ್ರ ಬಿಟ್ಟು ಬೇರೆ ಪ್ರಮುಖ ನಗರಗಳು ಬರುತ್ತವೆ. ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ಪಡೆಯಲಾಗುತ್ತದೆ. ಆನಂತರ ಮಂಡಳಿಯ ಮುಂದಿಟ್ಟು ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಒಪ್ಪಿಗೆ ಪಡೆದು ಪ್ರಕಟಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಯನ್ನು ಒಂದೆರಡು ತಿಂಗಳಿನಲ್ಲಿಯೇ ಮುಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಮೂಲಗಳು ಹೇಳುತ್ತವೆ.
ಏರಿಕೆಗೆ ಒತ್ತಡ:ರಾಜ್ಯದಲ್ಲಿ 2017ರಲ್ಲಿ ಕನಿಷ್ಠ ವೇತನ ವಿವಿಧ ವಲಯಗಳಲ್ಲಿ ಶೇ.53 ರಿಂದ ಶೇ.89 ರಷ್ಟು ಹೆಚ್ಚಳವಾಗಿತ್ತು. ಆದರೂ ಸರಾಸರಿ ಕನಿಷ್ಠ ವೇತನ 15 ಸಾವಿರ ರೂ.ಗಳಷ್ಟು ಮಾತ್ರ ಇದೆ. ಒಂದು ಕುಟುಂಬ ಸರಳ ಜೀವನ ನಡೆಸಲು ತಿಂಗಳಿಗೆ 31,566 ರೂ.ಗಳ ಅಗತ್ಯವಿದೆ ಎಂಬುದು ವೈಜ್ಞಾನಿಕವಾಗಿ ಅಧ್ಯಯನ ನಡೆಸಿರುವ ಕಾರ್ವಿುಕ ಸಂಘಟನೆಗಳ ವಾದವಾಗಿದೆ. ಆದರೆ ಉದ್ದಿಮೆಗಳ ಮಾಲೀಕರು ಒಪು್ಪವ ಸಾಧ್ಯತೆ ಇಲ್ಲ. ಸರ್ಕಾರ ಸಹ ಅಧ್ಯಯನ ಮಾಡಿದ ನಂತರವಷ್ಟೇ ಸ್ಪಷ್ಟ ತೀರ್ವನವಾಗಲಿದೆ.
ಅನುಸರಿಸುವ ಮಾನದಂಡಗಳೇನು?:ಕನಿಷ್ಠ ವೇತನ ನಿಗದಿ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ವಿುಕನ ಕುಟುಂಬಕ್ಕೆ ನಿತ್ಯ 2795 ಕ್ಯಾಲರಿಯಷ್ಟು ಆಹಾರ, ವಾರ್ಷಿಕ 57 ಮೀಟರ್ ಬಟ್ಟೆ, ಕನಿಷ್ಠ ಮನೆ ಬಾಡಿಗೆ, ಕುಟುಂಬದಲ್ಲಿ ಶುಭ ಕಾರ್ಯಗಳು, ವಿದ್ಯುತ್ ಹಾಗೂ ನೀರಿನ ಸುಂಕವನ್ನು ಲೆಕ್ಕ ಹಾಕಲಾಗುತ್ತದೆ. ಮಹಾನಗರಪಾಲಿಕೆ, ಜಿಲ್ಲಾ ಕೇಂದ್ರ ಹಾಗೂ ಇತರೆ ಪ್ರದೇಶಗಳಲ್ಲಿ ಇರುವ ಉದ್ದಿಮೆಗಳನ್ನು ಗಮನಿಸಿ ಕನಿಷ್ಠ ವೇತನ ನಿಗದಿ ಮಾಡಲಾಗುತ್ತಿತ್ತು. ಈ ಸಮಿತಿ ವರದಿ ನೀಡಿ 20 ವರ್ಷಗಳಾಗಿವೆ. ಅಂದಿನ ಮಾನದಂಡಗಳನ್ನು ಈಗ ಅನುಸರಿಸಲು ಸಾಧ್ಯವಾಗುವುದಿಲ್ಲ. ಬೆಲೆ ಸೂಚ್ಯಂಕ ಸಾಕಷ್ಟು ಏರಿಕೆಯಾಗಿದೆ. ಆದ್ದರಿಂದಲೇ ಕನಿಷ್ಠ ವೇತನವನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಏರಿಸಲಾಗಿದೆ ಎಂದು ಕಾರ್ವಿುಕ ಇಲಾಖೆಯ ಉನ್ನತ ಮೂಲಗಳು ಹೇಳಿವೆ.
ನ್ಯಾಯಾಲಯ ಹೇಳಿರುವುದೇನು?:ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕೆ ತಕ್ಕಂತೆ ನಾಲ್ಕು ಜನರ ಒಂದು ಕುಟುಂಬದ ಜೀವನ ನಿರ್ವಹಣೆಗೆ ಎಷ್ಟು ಮೊತ್ತ ಬೇಕಾಗುತ್ತದೆ ಎಂಬುದನ್ನು ವೈಜ್ಞಾನಿಕ ಸಮೀಕ್ಷೆ ಮಾಡಿ ವೇತನ ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿದೆ. ಹಿಂದೆ ಸರ್ಕಾರ ಮೂಲ ವೇತನ ಹಾಗೂ ವ್ಯತ್ಯಯ ಸಾಧ್ಯ ತುಟ್ಟಿಭತ್ಯೆ ಸೇರಿಸಿ ಶೇ.10 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು.
ಸರ್ಕಾರ ಏನು ಹೇಳುತ್ತಿದೆ?:ಕಾರ್ವಿುಕರ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರ ನ್ಯಾಯಾಲಯ ಹೇಳಿರುವ ಅಭಿಪ್ರಾಯಕ್ಕೆ ಬದ್ಧವಾಗಿದೆ. ಅಧಿಕಾರಿಗಳಿಗೂ ಅದೇ ನಿಟ್ಟಿನಲ್ಲಿ ಸೂಚನೆ ನೀಡಿದೆ ಎಂದು ಕಾರ್ವಿುಕ ಇಲಾಖೆಯ ಮೂಲಗಳು ಹೇಳುತ್ತವೆ.
19ಕ್ಕೆ ಕಾರ್ವಿುಕ ಸಂಘಟನೆಗಳ ಜತೆ ಸಭೆ:ಸರ್ಕಾರವೇನೋ ಕನಿಷ್ಠ ವೇತನ ಮಂಡಳಿ ರಚನೆಗೆ ತೀರ್ಮಾನ ತೆಗೆದುಕೊಂಡಿದೆ. ಆದರೂ ಇನ್ನೊಮ್ಮೆ ಸೆ.19ಕ್ಕೆ ಕಾರ್ವಿುಕ ಸಂಘಟನೆಗಳ ಜತೆ ಸಭೆ ನಡೆಸಲಿದೆ. ಕಾರ್ವಿುಕ ಸಂಘಟನೆಗಳು ಮಾರುಕಟ್ಟೆ, ಜನತಾ ಬಜಾರ್, ಮೆಟ್ರೋಗಳಲ್ಲಿ ಅಧ್ಯಯನ ಮಾಡಿ ದಿನ ಬಳಕೆ ವಸ್ತುಗಳ ಬೆಲೆ ಎಷ್ಟು ಹೆಚ್ಚಳವಾಗಿದೆ. ಕನಿಷ್ಠ ಜೀವನ ಮಟ್ಟ ಸುಧಾರಣೆಗೆ ಹೇಗೆ ಕ್ರಮ ಕೈಗೊಳ್ಳಬೇಕು, ವೇತನ ಪರಿಷ್ಕರಣೆಯಲ್ಲಿ ಕಾರ್ವಿುಕರ ಹೆಂಡತಿ ಮತ್ತು ಮಕ್ಕಳು ಮಾತ್ರವಲ್ಲದೇ ಪೋಷಕರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿರá-ವುದಾಗಿ ಐಎನ್​ಟಿಯುಸಿಯ ಪ್ರಧಾನ ಕಾರ್ಯದರ್ಶಿ ಶ್ಯಾಮಣ್ಣ ರೆಡ್ಡಿ ಹೇಳುತ್ತಾರೆ.
1 ವರ್ಷ ತಡ:ಪ್ರತಿ ಐದು ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಣೆಯಾಗಬೇಕಾಗಿದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ಒಂದು ವರ್ಷ ತಡವಾಯಿತು. ಈಗ ಸರ್ಕಾರದ ಅಂಗಳದಲ್ಲಿ ವೇತನ ಪರಿಷ್ಕರಣೆಯ ವಿಷಯ ಬಂದು ನಿಂತಿದೆ.
ಯಾವ ವಲಯದಲ್ಲಿ ಅಸಂಘಟಿತ ಕಾರ್ವಿುಕರು?:ಕೃಷಿ ಕೂಲಿ ಕಾರ್ವಿುಕರು, ನಿರ್ಮಾಣ , ಟೈಲರಿಂಗ್, ಗಾರ್ವೆಂಟ್ಸ್, ವಾಹನ ಚಾಲಕರು, ನಿರ್ವಾಹಕರು, ಗ್ಯಾರೇಜ್ ಕಾರ್ವಿುಕರು, ಬೀಡಿ ಉದ್ಯಮ, ಲಾಜಿಸ್ಟಿಕ್, ಅಗರಬತ್ತಿ ಉದ್ಯಮ, ಹೋಟೆಲ್, ಹಮಾಲಿಗಳು, ಸಣ್ಣ ಕೈಗಾರಿಕೆಗಳ ಕಾರ್ವಿುಕರು, ಆಯುರ್ವೆದ ಔಷದ ಉದ್ದಿಮೆ, ಸಿಮೆಂಟ್, ಲಾಂಡ್ರಿ, ಚಲನಚಿತ್ರ, ನರ್ಸಿಂಗ್ ಹೋಂಗಳು ಇತ್ಯಾದಿ.
ಸರ್ಕಾರಕ್ಕೆ ಆತಂಕ ಏಕೆ?:ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯದ ಉದ್ದಿಮೆ ಸೆಳೆಯಲು ಸಿದ್ಧವಾಗಿವೆ. ಈಗ ಎಚ್ಚರಿಕೆಯ ಹೆಜ್ಜೆಯನ್ನು ಸರ್ಕಾರ ಇಡಬೇಕಾಗಿದೆ. ಕಾರ್ವಿುಕರು ಕೇಳಿದಷ್ಟು ಹೆಚ್ಚಳ ಮಾಡಿದರೆ ಉದ್ದಿಮೆಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತವೆ. ಮಾಡದಿದ್ದರೆ ಕಾರ್ವಿುಕರು ಕಾನೂನು ಹೋರಾಟ ಮಾಡುತ್ತಾರೆ.
ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + fifteen =
Remember me
