ಬೆಂಗಳೂರು:ಕೆಲವು ದಶಕಗಳ ಹಿಂದೆ ಜಾರಿಯಲ್ಲಿದ್ದ ರಸ್ತೆ ನಿರ್ವಹಣೆ ಮಾಡುವ ಮೈಲಿಗೂಲಿ ವ್ಯವಸ್ಥೆ ಮರು ಜಾರಿ ಮಾಡಲು ಸರ್ಕಾರ ಮುಂದಾಗಿದೆ.20 ಕಿಮೀಗೆ ಒಬ್ಬರಂತೆ 2 ಸಾವಿರ ಮಂದಿಯನ್ನು ಮೈಲಿಗೂಲಿಗಳಾಗಿ ತಕ್ಷಣ ನೇಮಕ ಮಾಡಲಾಗುತ್ತದೆ. ಬಂದಾಗ ಆಗುವ ಸಮಸ್ಯೆ, ಗುಂಡಿ ಬಿದ್ದರೆ ಅವರೇ ಸ್ಥಳದಲ್ಲಿದ್ದು ಗಮನಿಸುತ್ತಾರೆ. ಪ್ರಸ್ತುತ ಟೆಂಡರ್ ಕರೆಯಬೇಕು, ಪ್ರಕ್ರಿಯೆ ದೀರ್ಘವಾಗಿರುತ್ತದೆ. ಈ ಮೈಲಿಗೂಲಿಗಳನ್ನು ಖಾಯಂ ನೇಮಕ ಮಾಡಲು ಆಗಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈಲಿಗೂಲಿ ಪದ್ಧತಿ ಖಾಯಂ ಇತ್ತು. ಈಗ ಹೊರಗುತ್ತಿಗೆ ಆಧಾರಿತವಾಗಿ ಮಾಡುತ್ತಿದ್ದೇವೆ. ಹಾಗೆಯೇ, ಮುಂದೆ ನಮ್ಮ ರಸ್ತೆಗಳನ್ನು ಐದು ವರ್ಷ ನಿರ್ವಹಣೆ ಗುತ್ತಿಗೆದಾರರೇ ಮಾಡಬೇಕಾಗುತ್ತದೆ. ಜತೆಗೆ ಐಬಿಗಳ ನಿರ್ವಹಣೆಗೆ 2-3 ಜನರ ಸೇವೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುತ್ತೇವೆ ಎಂದು ಹೇಳಿದರು.
ಮಲೆನಾಡಲ್ಲಿ ಶಾಲಾ ಮಕ್ಕಳು ಕಾಲು ಸಂಕದ ಮೇಲೆ ನಡೆಯುತ್ತಿದ್ದು, ಅಪಾಯದಲ್ಲಿ ಓಡಾಡುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಮಾಡಲು 15-20 ಲಕ್ಷ ರೂ. ವೆಚ್ಚದ ತೂಗು ಸೇತುವೆ ನಿರ್ಮಿಸಲಾಗುತ್ತದೆ. ಒಟ್ಟು 325 ತೂಗು ಸೇತುವೆ ನಿರ್ಮಾಣ ಮಾಡುತ್ತಿದ್ದು, ಕಾರವಾರ, ಶಿವಮೊಗ್ಗ, ಮಂಗಳೂರು, ಉಡುಪಿ ಕಡೆಗಳಲ್ಲಿ ಮಾಡುತ್ತೇವೆ. ಇದನ್ನು ಒಟ್ಟಿಗೆ ಮಾಡಲು ಆಗಲ್ಲ 6 ತಿಂಗಳು ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ವಿವರಿಸಿದರು.
ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅವರ ಸಮಸ್ಯೆಗಳನ್ನ ಬಗೆಹರಿಸಲಾಗುತ್ತದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಿದ್ದೇವೆ. ಸರ್ಕಾರ ಮಠ, ಶಾಲೆಗಳನ್ನು ಕಟ್ಟಲು ಜಾಗ ಕೊಟ್ಟಿವೆ. ಎಲ್ಲಾ ಸರ್ಕಾರಗಳು ಇದನ್ನು ಮಾಡಿವೆ , ನಮ್ಮ ಸರ್ಕಾರವೂ ಮಾಡುತ್ತಿದೆ ಎಂದು ಹೇಳಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − twelve =
Remember me
