ಬೆಂಗಳೂರು:ಸಂಭಾವ್ಯ ಪ್ರವಾಹ, ಅತಿವೃಷ್ಟಿ ಹಾಗೂ ಭೂಕುಸಿತದಂತಹ ಪ್ರಾಕೃತಿಕ ವಿಪತ್ತು ಎದುರಿಸಲು ಸರ್ಕಾರ ಎಲ್ಲ ರೀತಿಯಿಂದ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 20 ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ತೀವ್ರಗೊಂಡಿದ್ದು, ಜಲಾಶಯಗಳ ನೀರಿನ ಸಂಗ್ರಹ ಏರಿಕೆಯಾಗುತ್ತಿದೆ. ವಿಪತ್ತು, ಹಾನಿ ನಿರ್ವಹಣೆಗೆ ಜಿಲ್ಲಾ ಆಡಳಿತಗಳನ್ನು ಸಜ್ಜುಗೊಳಿಸಲಾಗಿದೆ. ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಗತ್ಯ ಸೂಚನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಪರಸ್ಪರ ಸಂವಹನ ಮತ್ತು ವಿಚಾರ ವಿನಿಮಯ, ಜನ&ಜಾನುವಾರು ರಕ್ಷಣೆಗೆ ಸಹಾಯವಾಣಿ ಇನ್ನಿತರ ಸಾಧನಗಳನ್ನು ಸುಸ್ಥಿತಿಯಲ್ಲಿಡಲು ತಿಳಿಸಲಾಗಿದೆ.
ಅಗತ್ಯಬಿದ್ದರೆ ಸ್ಥಳಾಂತರ:ಅಗತ್ಯಬಿದ್ದರೆ ಅಪಾಯಕರವೆಂದು ಗುರುತಿಸಿದ ಹಳ್ಳಿಗರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುವ ಕೆಲಸ ಜಿಲ್ಲಾ ಆಡಳಿತ ಮಾಡಲಿದ್ದು, ಸದ್ಯಕ್ಕೆ ಅಂತಹ ಸನ್ನಿವೇಶ ತಲೆದೋರಿಲ್ಲ ಎಂದು ಸಿಎಂ ಬಿಎಸ್​ವೈ ತಿಳಿಸಿದರು. ತುರ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ ಹೆಲಿಕಾಪ್ಟರ್​ ವ್ಯವಸ್ಥೆ ಜತೆಗೆ ಎನ್​ಡಿಆರ್​ಎ್​ ತಂಡಗಳನ್ನು ನಿಯೋಜಿಸಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಹೆಚ್ಚಿದ ಒಳಹರಿವು:ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನದಿ ಪಾತ್ರದ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ. ಕೆಆರ್​ಎಸ್​, ಹೇಮಾವತಿ ಮತ್ತು ಕಬಿನಿ ಜಲಾಶಯಗಳಿಗೆ ಸರಾಸರಿ ತಲಾ 16 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಹಾರಂಗಿ ಜಲಾಶಯಕ್ಕೆ ಮಾತ್ರ ಒಳ ಹರಿವು ಕಡಿಮೆ ಇದೆ. ಕಳೆದ ವರ್ಷ ಈ ವೇಳೆಗೆ ನಾಲ್ಕು ಜಲಾಶಯ ಸೇರಿ 40 ಟಿಎಂಸಿ ನೀರು ಇದ್ದರೆ, ಈ ಬಾರಿ 47 ಟಿಎಂಸಿ ಸಂಗ್ರಹವಾಗಿದೆ. ಕೆಆರ್​ಎಸ್​ ಜಲಾಶಯದಲ್ಲಿ ಈ ಬಾರಿ 15.440 ಟಿಎಂಸಿ ನೀರಿದೆ. ಕಳೆದ ವರ್ಷ ಈ ಹೊತ್ತಿನಲ್ಲಿ 18 ಟಿಎಂಸಿ ನೀರು ಸಂಗ್ರಹವಿತ್ತು. ಮೆಟ್ಟೂರು ಜಲಾಶಯದಲ್ಲಿ 58 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ 65 ಟಿಎಂಸಿ ನೀರು ಸಂಗ್ರಹವಿತ್ತು.
ಹಿಂದಿನ ಮಾನದಂಡ ಅನ್ವಯಪ್ರಸಕ್ತ ವರ್ಷದಲ್ಲೂ ಅತಿವೃಷ್ಟಿ, ಪ್ರವಾಹ ಪರಿಹಾರಕ್ಕೆ ಹಿಂದಿನ ವರ್ಷದ ಮಾನದಂಡಗಳನ್ನೇ ಅನ್ವಯಿಸಲಾಗುವುದು. ಪೂರ್ತಿ ಬಿದ್ದ ಮನೆಗಳಿಗೆ 5 ಲಕ್ಷ ರೂ., ಭಾಗಶ@ ಹಾನಿಯಾದ ಮನೆಗಳಿಗೆ <1 ಲಕ್ಷ ಹಾಗೂ ನೀರು ಹೊಕ್ಕ ಮನೆಗಳಿಗೆ <10,000 ನಿಗದಿಯಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ತಿಳಿಸಿದರು. ಅಲ್ಲದೆ ತೌಕ್ತೆ ಚಂಡಮಾರುತದಿಂದ 300 ಮನೆಗಳು ಹಾನಿಗೀಡಾಗಿದ್ದು, ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದ್ದು, ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು. ಮಂಡ್ಯ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಶೇ.23 ಕಡಿಮೆ ಮಳೆಯಾಗಲಿದ್ದರೆ, 23 ತಾಲೂಕುಗಳಲ್ಲಿ ಮಳೆ ಕಡಿಮೆಯಾಗಲಿದೆ. ಉಳಿದ ಜಿಲ್ಲೆಗಳ ಉತ್ತಮ ಮಳೆ ಯಾಗಲಿದ್ದು, 2&3 ತಿಂಗಳಲ್ಲಿ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಲಿವೆ ಎಂದು ಅಶೋಕ್​ ತಿಳಿಸಿದರು.
ಕೈಗೊಂಡ ಕ್ರಮಗಳು? 1710 ಪ್ರವಾಹಪೀಡಿತ ಪ್ರದೇಶವೆಂದು ಗುರುತು, ತಾತ್ಕಾಲಿಕ ಸ್ಥಳಾಂತರಕ್ಕೆ ಶಾಲೆ, ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳು ಸಜ್ಜು? ವಿಪತ್ತು ನಿರ್ವಹಣೆಗಾಗಿ ಎಲ್ಲ ಜಿಲ್ಲಾ ಆಡಳಿತಗಳ ಬಳಿ ಒಟ್ಟು 996 ಕೋಟಿ ರೂ. ಲಭ್ಯ? ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಪ್ರವಾಹ ಮುನ್ಸೂಚನೆ ಕೋಶ ಸ್ಥಾಪನೆ? 200 ಸಿಬ್ಬಂದಿಯನ್ನು ಒಳಗೊಂಡ ಎಸ್​ಡಿಆರ್​ಎ್​ ಬಲವರ್ಧನೆ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಸ್ಥಾಪನೆಗೆ ಕ್ರಮ
ಮಳೆಯಾರ್ಭಟ, ತಟವಾಸಿಗಳ ಪರದಾಟ
ವಿಜಯವಾಣಿ ಸುದ್ದಿಜಾಲ ಬೆಂಗಳೂರುನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಟಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ ನದಿಗಳಲ್ಲಿ ನೀರಿನಮಟ್ಟ ಕ್ಷಣಕ್ಷಣವೂ ಏರುತ್ತಲೇ ಇದೆ. ತಟ ವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,15,780 ಲಕ್ಷ ಕ್ಯೂಸೆಕ್​ ನೀರು ಹರಿದುಬರುತ್ತಿದೆ. ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಅಲ್ಲದೆ 250ಕ್ಕೂ ಅಧಿಕ ಹೆಕ್ಟೇರ್​ ಕಬ್ಬಿನ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ.
ಯುವಕನ ರಕ್ಷಣೆ:ಮಾರ್ಕಂಡೇಯ ನದಿಯ ಪ್ರವಾಹಕ್ಕೆ ಸಿಲುಕಿ ಶುಕ್ರವಾರ ಕೊಚ್ಚಿಹೋಗಿದ್ದ ಕಾಕತಿ ಗ್ರಾಮದ ಸಿದ್ರಾಯಿ ದೊಡ್ಡರಾಮ ಸುತಗಟ್ಟಿ (65) ಎಂಬ ರೈತನ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿದಿತ್ತು. ಶನಿವಾರ ಬೆಳಗ್ಗೆ ಚಿಕ್ಕೋಡಿ ತಾಲೂಕಿನ ವೇದಗಂಗಾ ನದಿಯ ಪ್ರವಾಹದಿಂದಾಗಿ ಸಮೀಪದ ಅಕ್ಕೋಳ&ಸಿದ್ನಾಳ ಸೇತುವೆ ಬಳಿ ಕೊಚ್ಚಿ ಹೋಗಿದ್ದ ಯುವಕನೋರ್ವ ನನ್ನು ಸಿದ್ನಾಳ ಗ್ರಾಮಸ್ಥರು ಹಾಗೂ ಎನ್​ಡಿಆರ್​ಎಫ್​ ತಂಡದವರು ರಕ್ಷಿಸಿದ್ದಾರೆ. ಹುಕ್ಕೇರಿ ತಾಲೂಕಿನ ಮತ್ತಿವಡೆ ಗ್ರಾಮದ ದಿಗ್ವಿಜಯ ಕುಲಕರ್ಣಿ (30) ರಕ್ಷಿಸಲ್ಪಟ್ಟ ಯುವಕ.ಶವ ಪತ್ತೆ: ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಶುಕ್ರವಾರ ನೀರು ಪಾಲಾಗಿದ್ದ ಕುಸುಮಾನ್​ ಅತ್ತಾರ್​(52) ಎಂಬುವರ ಶವ ಪತ್ತೆಯಾಗಿದೆ.ಮಹಾರಾಷ್ಟ್ರದಿಂದ ಮಾಹಿತಿ: ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟರೆ ಯಾವುದೇ ಕಾರಣಕ್ಕೂ ಹೆಚ್ಚಿನ ಹಾನಿಯಾಗದಂತೆ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುವ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡುತ್ತೇವೆಂದು ಅಲ್ಲಿನ ನೀರಾವರಿ ಸಚಿವರು ತಿಳಿಸಿದ್ದಾರೆ. ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಜನರು ಮತ್ತು ಜಾನುವಾರುಗಳ ರಣೆ ಮತ್ತು ತಾತ್ಕಾಲಿಕ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಇಳಿಕೆಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆ ಣಿಸಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್​.ಸಾಗರ ಅಣೆಕಟ್ಟೆಯ ನೀರಿನ ಮಟ್ಟ ಶನಿವಾರ ಸಂಜೆ ವೇಳೆಗೆ 90.40 ಅಡಿ ತಲುಪಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಅಣೆಕಟ್ಟೆಗೆ 18,556 ಕ್ಯೂಸೆಕ್​ ನೀರು ಹರಿದು ಬರುತ್ತಿದೆ.
ಏಳು ಜಿಲ್ಲೆಗಳಲ್ಲಿ ಆರೆಂಜ್​ ಅರ್ಲಟ್​ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ಎರಡು ದಿನ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜೂ.20ರಂದು ವ್ಯಾಪಕ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್​ ಅರ್ಲಟ್​ ಘೋಷಿಸಲಾಗಿದೆ.
ಕದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆಕಾರವಾರ: ಕಾಳಿ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಶನಿವಾರ ಮಧ್ಯಾಹ್ನ ಕದ್ರಾ ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿದೆ. ಕದ್ರಾ ಅಣೆಕಟ್ಟೆಯಲ್ಲಿ ಗರಿಷ್ಠ 34.50 ಮೀಟರ್​ ನೀರು ಸಂಗ್ರಹಿಸಬಹುದಾಗಿದೆ. ಸದ್ಯ 31.52 ಮೀ. ನೀರು ತುಂಬಿದೆ. ವಿದ್ಯುತ್​ ಉತ್ಪಾದನೆ ಮಾಡಿ 21,416 ಕ್ಯೂಸೆಕ್​ ಹಾಗೂ ಗೇಟ್​ನಿಂದ 5000 ಕ್ಯೂಸೆಕ್​ ನೀರನ್ನು ಹೊರಬಿಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
