ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರ ಪರಿಣಾಮ ಭೀಕರ ಬರ ಮತ್ತು ಅದರಿಂದ ತೀವ್ರ ಜಲಸಂಕಷ್ಟವನ್ನು ರಾಜ್ಯ ಎದುರಿಸಿತು. ಕೃಷಿ ಚಟುವಟಿಕೆಗಳು ಸ್ತಬ್ಧವಾಗಿ, ಬೆಳೆದ ಬೆಳೆಗಳು ಕೈಗೆ ಬರದಂತಾಗಿ ರೈತರು ಹಾನಿ ಅನುಭವಿಸಿದರು. ಬರ ಪರಿಸ್ಥಿತಿಯ ಕರಾಳತೆಯ ನಡುವೆಯೇ ನಾಡು ಮುಂಗಾರಿನ ಆಗಮನಕ್ಕಾಗಿ ಕಾಯುತ್ತಿತ್ತು. ಕೇರಳಕ್ಕೆ ವಾಡಿಕೆಗಿಂತ ಸ್ವಲ್ಪ ಮುಂಚೆ ಆಗಮಿಸಿದ ಮುಂಗಾರು, ಕರ್ನಾಟಕವನ್ನೂ ಪ್ರವೇಶಿಸಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದ 12 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಜೂನ್ 2ರಂದು ಬಿರುಗಾಳಿ ಸಮೇತ ಸುರಿದ ಭಾರಿ ಮಳೆ 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಭಾನುವಾರ ಸಂಜೆಯಿಂದ ರಾತ್ರಿಯವರೆಗೆ ಸುರಿದ ವರ್ಷಧಾರೆಯಿಂದ ಜನಜೀವನ ತತ್ತರಿಸಿದ್ದು, 200ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 50ಕ್ಕೂ ಪ್ರದೇಶಗಳು ಜಲಾವೃತವಾಗಿವೆ.
ಮುಂಗಾರಿನ ಆರಂಭದಲ್ಲೇ ಸುರಿದ ಮೊದಲ ಮಳೆಗೆ ಈ ಪ್ರಮಾಣದ ಹಾನಿಯಾಗಿರುವುದು, ಮಳೆ ಎದುರಿಸುವುದಕ್ಕೆ ಸರ್ಕಾರ ಸನ್ನದ್ಧವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಜೂನ್ ಮೊದಲ ವಾರದಲ್ಲೇ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿಯೇ ಸ್ಪಷ್ಟ ಸೂಚನೆ ಕೊಟ್ಟಿದ್ದರೂ. ರಾಜ್ಯ ಸರ್ಕಾರ ಸಮರ್ಪಕ ಪೂರ್ವಸಿದ್ಧತೆ ಮಾಡಿಕೊಳ್ಳದಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿ. ಬರನಿರ್ವಹಣೆಯ ವಿಷಯದಲ್ಲೂ ಇದೇ ರೀತಿಯ ಧೋರಣೆ ಅನುಸರಿಸಿದ್ದ ರಾಜ್ಯ ಸರ್ಕಾರ, ಪ್ರತಿ ವಿಷಯದಲ್ಲೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತ, ಟೀಕಿಸುತ್ತ ಕಾಲಹರಣ ಮಾಡಿತು. ಆದರೆ, ಚುನಾವಣೆ ನೀತಿಸಂಹಿತೆಯ ನಡುವೆಯೂ ಕೇಂದ್ರ ರಾಜ್ಯಕ್ಕೆ ಬರಪರಿಹಾರವನ್ನು ಬಿಡುಗಡೆ ಮಾಡಿತು ಎಂಬುದು ಗಮನಾರ್ಹ.
ಮುಖ್ಯವಾಗಿ, ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೊದಲ ಮಳೆಗೆ ಬೆಂಗಳೂರಿಗೆ ಆದ ಸ್ಥಿತಿ, ಬೆಂಗಳೂರಿಗರು ಅನುಭವಿಸಿದ ತೊಂದರೆಯನ್ನು ನೋಡಿದರೆ ಮುಂದಿನ ನಾಲ್ಕು ತಿಂಗಳು ಹೇಗೆ ಎಂಬ ಪ್ರಶ್ನೆಯೂ ಮೂಡುತ್ತದೆ. ಬೇಸಿಗೆಯಲ್ಲಿ ಬೆಂಗಳೂರು ‘ಟ್ಯಾಂಕರ್ ಸಿಟಿ’ ಎನಿಸಿಕೊಂಡಿತು. ಈಗ ಮಳೆಯನ್ನು ಎದುರಿಸಲು ಕೂಡ ಸಮರ್ಪಕ ವ್ಯವಸ್ಥೆಗಳಾಗಿಲ್ಲ ಎಂಬುದು ವಿಷಾದದ ಸಂಗತಿ.
ರಾಜ್ಯದಲ್ಲಿ ಇನ್ನಷ್ಟೇ ಕೃಷಿ ಚಟುವಟಿಕೆಗಳು ಆರಂಭಗೊಳ್ಳಬೇಕಿವೆ. ಬರದ ಕಹಿ ನೆನಪಿನಿಂದ ಹೊರಬಂದು ರೈತ ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಾದರೆ ಮಳೆ ಸಂಬಂಧಿತ ಹಾನಿಯನ್ನು ತಡೆಗಟ್ಟಲು ಸರ್ಕಾರದ ಇಚ್ಛಾಶಕ್ತಿ ತುಂಬ ಅವಶ್ಯ ಎಂಬುದನ್ನು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳ ಪಾತ್ರವೂ ತುಂಬ ಮುಖ್ಯ. ಅಧಿಕಾರಿಗಳು ಜಡತ್ವವನ್ನು ತೊರೆದು ಜನರ ಸಂಕಷ್ಟವನ್ನು ಅರಿಯುವ, ಸಂವೇದನೆಗೆ ಮಿಡಿಯುವ ರೀತಿಯಲ್ಲಿ ಕೆಲಸ ಮಾಡಬೇಕು. ಮುಂಗಾರು ಈಗಷ್ಟೇ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳ ಮಳೆಯನ್ನು ಎದುರಿಸಲು, ಹಾನಿಯ ಪ್ರಮಾಣವನ್ನು ತಗ್ಗಿಸಲು, ಜನರಿಗೆ ಸೂಕ್ತ ನೆರವು ಒದಗಿಸಲು ಶ್ರಮಿಸಬೇಕು, ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
