| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಕೃಷಿಕರಲ್ಲಿ ಭರವಸೆ ಮೂಡಿಸಿದ್ದ ಅತ್ಯಂತ ಯಶಸ್ವಿ ಯೋಜನೆಯಾದ ಕೃಷಿಭಾಗ್ಯವನ್ನು ಮರು ಜಾರಿ ಮಾಡಲು ಕೃಷಿ ಇಲಾಖೆಯಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಳೆಯಾಶ್ರಿತ ಕೃಷಿಕರ ಅನುಕೂಲಕ್ಕಾಗಿ ಕೃಷಿ ಭಾಗ್ಯ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಯ ಯಶಸ್ಸು ಶೇ.80ಕ್ಕೂ ಹೆಚ್ಚಿರುವ ವರದಿ ಬಂದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಮುಂದುವರೆಸಲು ವಿಶೇಷ ಆಸಕ್ತಿ ತೋರಿಸಿದ್ದಾರೆ.
ಬಜೆಟ್ ಸಿದ್ಧತೆಯ ಸಭೆಗಳ ಸಮಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೃಷಿಭಾಗ್ಯ ಯೋಜನೆ ಮುಂದುವರಿಸುವ ಪ್ರಸ್ತಾವನೆ ಸಲ್ಲಿಸಿದರು. ಅದಕ್ಕೆ ಸಿಎಂ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಕೃಷಿ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಏನಿದು ಕೃಷಿಭಾಗ್ಯ?:ರಾಜ್ಯದಲ್ಲಿ ಶೇ.68 ಮಳೆಯಾಶ್ರಿತ ಕೃಷಿ ಇದೆ. ಆಹಾರ ಧಾನ್ಯಗಳ ಶೇ.55 ಹಾಗೂ ಎಣ್ಣೆಕಾಳು ಬೆಳೆಗಳ ಶೇ.75 ಉತ್ಪಾದನೆಯಾಗುವುದೇ ಮಳೆಯಾಶ್ರಿತ ಭೂಮಿಯಲ್ಲಿ. ಆದರೆ ಬರ ಅಥವಾ ಪ್ರವಾಹ ರೈತರಿಗೆ ನಷ್ಟವನ್ನು ಉಂಟು ಮಾಡುತ್ತಿರುವುದೇ ಹೆಚ್ಚು. ಆದ್ದರಿಂದ ರೈತರಿಗಾಗುವ ಆರ್ಥಿಕ ನಷ್ಟ ತಪ್ಪಿಸಲು ಹಾಗೂ ಅವರ ಜೀವನ ಮಟ್ಟ ಸುಧಾರಿಸಲು 2014-15 ರಲ್ಲಿ ರೂಪಿಸಿದ ಯೋಜನೆ ಕೃಷಿ ಭಾಗ್ಯ. ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ವಿುಸಿ ಮಳೆ ನೀರು ವ್ಯರ್ಥವಾಗದಂತೆ ಅದರ ಮೂಲಕ ನೀರನ್ನು ಸಂಗ್ರಹ ಮಾಡಿ ರಕ್ಷಣಾತ್ಮಕವಾದ ನೀರಾವರಿ ಒದಗಿಸುವುದು ಒಟ್ಟಾರೆ ಈ ಯೋಜನೆಯ ಉದ್ದೇಶವಾಗಿದೆ. ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಾಗಿತ್ತು ಎಂಬುದು ಕಂಡು ಬಂದಿದೆ. ಕೃಷಿ ಭಾಗ್ಯ ಯೋಜನೆ ಆರಂಭವಾದ 2014-15ರಿಂದ 2019-20 ರ ತನಕ ಜಾರಿಯಲ್ಲಿತ್ತು. ಅಷ್ಟು ವರ್ಷಗಳ ಅವಧಿಯಲ್ಲಿ 2897.92 ಕೋಟಿ ರೂ.ಗಳ ಅನುದಾನ ಒದಗಿಸಲಾಗಿತ್ತು. 3.16 ಲಕ್ಷ ಕೃಷಿ ಹೊಂಡಗಳು ನಿರ್ವಣವಾಗಿದ್ದವು, 2460 ಪಾಲಿಹೌಸ್​ಗಳನ್ನು ರೈತರು ನಿರ್ವಿುಸಿಕೊಂಡಿದ್ದರು.
ಯೋಜನೆ ಲಾಭವೇನು?:ಈ ಯೋಜನೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಹೊಂಡದಲ್ಲಿ ತುಂಬಿಸಿಕೊಂಡ ನೀರನ್ನು ರೈತರು ತಮಗೆ ಬೇಕಾದಾಗ ಬಳಸಿಕೊಳ್ಳಬಹುದು. ಪಾಲಿಥೀನ್ ಹೊದಿಕೆ ಬಳಸುವುದರಿಂದ ನೀರು ಇಂಗುವುದಿಲ್ಲ. ಇದರಿಂದ ಕೃಷಿ ಚಟುವಟಿಕೆ ಹೆಚ್ಚಾಗಲಿದೆ ಎಂಬುದು ಒಟ್ಟಾರೆ ಉದ್ದೇಶ.
ಶೇ.80 ಯಶಸ್ಸು:ಕೃಷಿ ಇಲಾಖೆೆ ಯೋಜನೆಯ ಕುರಿತು ಅಧ್ಯಯನ ನಡೆಸಿದೆ. ಯೋಜನೆ ಜಾರಿಯಾದ ಆರಂಭದ ವರ್ಷಗಳಲ್ಲಿ ಇದರ ಯಶಸ್ಸು ಸರಾಸರಿ ಶೇ.70 ಇತ್ತು. ಯೋಜನೆ ನಿಂತ ನಂತರವೂ ಇದರ ಯಶಸ್ಸು ಶೇ.80ಕ್ಕೆ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದಲೇ ಸರ್ಕಾರ ಯೋಜನೆ ಮುಂದುವರಿಸುವ ಬಗ್ಗೆ ಆಸಕ್ತಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್​ನಲ್ಲಿ ಅನುದಾನ:ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವ ಕಸರತ್ತು ನಡೆಸಿರುವ ಮಧ್ಯದಲ್ಲಿಯೇ ಕೃಷಿ ಭಾಗ್ಯ ಯೋಜನೆಯನ್ನು ಮುಂದುವರಿಸಲು ಈ ವರ್ಷದಲ್ಲಿ ಸುಮಾರು 200 ಕೋಟಿ ರೂ. ಅನುದಾನ ಲಭ್ಯವಾಗುವ ಅಂದಾಜು ಇದೆ ಎಂದು ಹೇಳಲಾಗುತ್ತಿದೆ.
ಬೇರೆ ಯೋಜನೆಯಲ್ಲಿಯೂ ಜಾರಿ:ಕೃಷಿಭಾಗ್ಯದ ಜತೆಗೆ ಜಲಾನಯನ ಅಭಿವೃದ್ಧಿ ಇಲಾಖೆಯ ಒಗ್ಗೂಡುವಿಕೆ ಕಾರ್ಯಕ್ರಮದಲ್ಲಿಯೂ 2016-17 ರಿಂದ 2018-19 ರ ತನಕ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.
ಬಿಜೆಪಿ ಅವಧಿಯಲ್ಲಿ ನಿಂತಿತು:ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದು, ಸಮ್ಮಿಶ್ರ ಸರ್ಕಾರ ಬಂದಾಗಲು ಯೋಜನೆ ಜಾರಿಯಲ್ಲಿತ್ತು. ಆದರೆ ಆ ನಂತರ ಯೋಜನೆ ಸ್ಥಗಿತವಾಯಿತು.
ಕೃಷಿ ಭಾಗ್ಯ ಹಿಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆ. ಇದು ಯಶಸ್ವಿಯಾಗಿದ್ದರಿಂದ ಮುಂದುವರಿಸುವಂತೆ ರೈತರಿಂದ ಬೇಡಿಕೆ ಇದೆ. ಅದನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಬಜೆಟ್​ನಲ್ಲಿ ಅನುದಾನ ಬಿಡುಗಡೆಯಾಗುವ ವಿಶ್ವಾಸ ಇದೆ.
| ಎನ್. ಚಲುವರಾಯಸ್ವಾಮಿ ಕೃಷಿ ಸಚಿವ
ಪ್ಯಾಕೇಜ್ ರೂಪದಲ್ಲಿ ಜಾರಿ:ಕೃಷಿ ಭಾಗ್ಯ ಪ್ಯಾಕೇಜ್ ರೂಪದಲ್ಲಿ ಜಾರಿಯಾಗಿತ್ತು. ಹೊಂಡ ನಿರ್ವಣ, ಪಾಲಿಥೀನ್ ಹೊದಿಕೆ, ಡಿಸೇಲ್ ಪಂಪ್​ಸೆಟ್, ಲಘು ನೀರಾವರಿ ಘಟಕ, ಕ್ಷೇತ್ರ ಬದು, ಬೆಳೆ ಪದ್ಧತಿ ಮತ್ತು ಪಶು ಸಂಗೋಪನಾ ಚಟುವಟಿಕೆಗಳು ಇದರಲ್ಲಿ ಸೇರಿದ್ದವು. ಮೊದಲಿಗೆ ಕೃಷಿ ಹೊಂಡಗಳು ಮಾತ್ರ ಇದ್ದವು. ಆ ನಂತರ ಪಾಲಿ ಹೌಸ್​ಗಳನ್ನು ಸಹ ಕೃಷಿಭಾಗ್ಯ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು.
ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
