ಬೆಂಗಳೂರು:ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ವಿಫಲಗೊಂಡಿರುವ ರಾಜ್ಯ ಕಾಂಗ್ರೆಸ್​ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಹೆಚ್ಚುವರಿ ಅಕ್ಕಿ ಸಿಗುವವರೆಗೂ ಹಣ ನೀಡುವುದಾಗಿ ರಾಜ್ಯ ಆಹಾರ ಸಚಿವ ಕೆ. ಎಚ್​. ಮುನಿಯಪ್ಪ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಕೆ.ಎಚ್​. ಮುನಿಯಪ್ಪ, ಸಿಎಂ ಆದೇಶದಂತೆ ಹೆಚ್ಚುವರಿ ಅಕ್ಕಿಗಾಗಿ ಸಾಕಷ್ಟು ಪ್ರಯತ್ನ ಮಾಡಿದೆವು. ಕೇಂದ್ರ ಸಚಿವರನ್ನು ಭೇಟಿ ಮಾಡಿದೆವು. ಕೇಂದ್ರದ ಬಳಿ ಸಾಕಷ್ಟು ಸ್ಟಾಕ್ ಇದೆ. ನಮಗೆ ಅಕ್ಕಿ‌ಕೊಡಿ, ನಾವು ಹಣ ಕೊಡ್ತೇವೆ ಎಂದು ಕೇಳಿದೆವು. ಆದರೆ, ಅವರು ಕೊಡಲು ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಜು.6ರಿಂದ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ
ಸದ್ಯ ನಾವು ಒಂದು ‌ನಿರ್ಣಯಕ್ಕೆ ಬಂದಿದ್ದೇವೆ. ಒಂದು ಕೆಜಿಗೆ 34 ರೂಪಾಯಿಯಂತೆ ಕಾರ್ಡ್ ಹೋಲ್ಡರ್​ಗೆ ಕೊಡಲು ತೀರ್ಮಾನ ಮಾಡಿದ್ದೇವೆ. ಒಬ್ಬರಿಗೆ ಐದು, ಇಬ್ಬರಿಗೆ ಹತ್ತು ಕೆಜಿ ಹಾಗೂ ಐದು ಜನರಿಗೆ 25 ಕೆಜಿ ಅಕ್ಕಿ ಪ್ರಕಾರ ಹಣ ಹಾಕುತ್ತೇವೆ. ಜುಲೈ 1 ರಿಂದಲೇ ಇದು ಜಾರಿಗೆ ಬರುತ್ತದೆ. ಐದು ಕೆಜಿ ಅಕ್ಕಿ ದೊರಕುವುದು ಕಠಿಣವಾಗಿದೆ. ಇತರೆ ಸಿಎಂ ಸಂಪರ್ಕ ಮಾಡಿದ್ದೇವೆ ಮತ್ತು ಕೆಲವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕಾರ್ಡ್ ಹೋಲ್ಡರ್ ಖಾತೆಗೆ ಹಣ ಹೋಗಲಿದೆ. ಪ್ರತಿ ಕಾರ್ಡ್‌ ಮಾಹಿತಿ ಇರಲಿದೆ. ಯಜಮಾನನ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಎಫ್​ಸಿಐ ಕೊಡಲು ಆಗಲ್ಲ ಎಂದ ಮೇಲೆ ಬೇರೆ ಸಾಕಷ್ಟು ಪ್ರಯತ್ನ ಮಾಡಲಾಯಿತು. ಕೇಂದ್ರದಲ್ಲಿ ಸಾಕಷ್ಟು ಸ್ಟಾಕ್ ಇದ್ದರೂ ಕೊಡಲಿಲ್ಲ. ಹದಿನೈದು ಲಕ್ಷ ಟನ್ ಓಪನ್ ಟೆಂಡರ್​ ಕರೆದು 31 ರೂ.ಗೆ ಕೊಟ್ಟಿದ್ದಾರೆ. ಇಲ್ಲಿ ರಾಜಕಾರಣ ಮಾಡಿದರು. ನಾವು ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಹೀಗಾಗಿ ಖಾತೆಗೆ ಹಣ ಹಾಕುತ್ತೇವೆ ಎಂದು ಮುನಿಯಪ್ಪ ಹೇಳಿದರು.
ಅನ್ನಭಾಗ್ಯ ಯೋಜನೆ: ಹೆಚ್ಚುವರಿ ಅಕ್ಕಿಗಾಗಿ ಕೇಂದ್ರದ ಮೊರೆ ಹೋಗಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ನಿರಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
