ಬೆಂಗಳೂರು:  ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ- 2020, ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ-2020 ಸೇರಿ ಆರು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ವಣವನ್ನು ನಿಯಂತ್ರಿಸಲು ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2020 ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದರು.
ಅನುಮತಿ ಇಲ್ಲದೆ ಅಥವಾ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ವಿುಸಿದ ಕಟ್ಟಡಗಳ ಮೇಲಿನ ಸ್ವತ್ತು ತೆರಿಗೆ ಮತ್ತು ಸ್ವತ್ತು ತೆರಿಗೆಗೆ ಸಮಾನವಾದ ದಂಡವನ್ನು ಸಂಗ್ರಹಿಸುವ ಮೂಲಕ ಬೃಹತ್ ಅನಧಿಕೃತ ಕಟ್ಟಡಗಳ ನಿರ್ಮಾಣ ನಿಯಂತ್ರಿಸಲು ಈ ವಿಧೇಯಕ ಮಂಡಿಸಲಾಗಿದೆ.
ಪಾರದರ್ಶಕತೆ ವಿಧೇಯಕ: ಸರಕು-ಸೇವೆಗಳ ಸಂಗ್ರಹಣಾ ಮೌಲ್ಯ ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 (2000ರ ಅಧಿನಿಯಮ 29)ತಿದ್ದುಪಡಿ ಮಾಡುವ ವಿಧೇಯಕ ಮಂಡನೆ ಆಗಿದೆ.
ಶೇ.25 ಸೀಟು: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಸೀಟು ಒದಗಿಸುವುದಕ್ಕಾಗಿ ರಾಷ್ಟ್ರೀಯ ಕಾನೂನು ವಿದ್ಯಾಲಯ ಅಧಿನಿಯಮ-1986ನ್ನು (1986ರ ಕರ್ನಾಟಕ ಅಧಿನಿಯಮ 22) ಆರಂಭಿಕವಾಗಿ ತಿದ್ದುಪಡಿ ಮಾಡಲು ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ- 2020 ಮಂಡಿಸಲಾಗಿದೆ. ಈ ವಿಧೇಯಕವನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು. ಭೋಪಾಲದಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ ಮಧ್ಯಪ್ರದೇಶ ರಾಜ್ಯದ ನಿವಾಸಿ ಅಭ್ಯರ್ಥಿಗಳಿಗೆ ಶೇ.25 ಸೀಟು, ಪಂಜಾಬ್​ನಲ್ಲಿರುವ ರಾಜೀವ್​ಗಾಂಧಿ ರಾಷ್ಟ್ರೀಯ ವಿವಿಯು ಪಂಜಾಬ್ ರಾಜ್ಯದ ನಿವಾಸಿಗಳಿಗೆ ಶೇ.10 ಸೀಟು, ಆಸ್ಸಾಂನಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ನ್ಯಾಯಾಂಗ ಅಕಾಡೆಮಿ ಅಸ್ಸಾಂನ ಖಾಯಂ ನಿವಾಸಿಗಳಿಗೆ 30 ಸೀಟು, ಲಕ್ನೋದಲ್ಲಿರುವ ಡಾ.ರಾಮಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಉತ್ತರಪ್ರದೇಶದ ನಿವಾಸಿ ಅಭ್ಯರ್ಥಿಗಳಿಗೆ 258 ಸೀಟುಗಳ ಪೈಕಿ 80 ಸೀಟುಗಳನ್ನು ಮೀಸಲಿರಿಸಿದೆ.
ಅದೇ ರೀತಿ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್​ಘಡ ಸರ್ಕಾರಗಳೂ ಸಹ ತಮ್ಮ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿವೆ. ಬೆಂಗಳೂರಿನಲ್ಲಿರುವ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯವು ರಾಜ್ಯ ವಿಧಾನಮಂಡಲದ ಸೃಜನೆಯಾಗಿದ್ದು, ಕರ್ನಾಟಕದ ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾಲಯದಲ್ಲಿ ಯಾವುದೇ ಮೀಸಲಾತಿಯನ್ನು ಒದಗಿಸಿಲ್ಲ. ಆದ್ದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಒದಗಿಸಲು ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ(ತಿದ್ದುಪಡಿ)ವಿಧೇಯಕ-2020ನ್ನು ಮಂಡನೆ ಮಾಡಲಾಗಿದೆ. ಇವುಗಳ ರಾಜ್ಯ ನಾವಿನ್ಯತಾ ಪ್ರಾಧಿಕಾರ ವಿಧೇಯಕ-2020 ಮಂಡನೆ ಮಾಡಿದ್ದು, ಈ ಎಲ್ಲ ವಿಧೇಯಕಗಳು ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಬೇಕಿದೆ.
ರಾಜಭಾಷಾ(ತಿದ್ದುಪಡಿ)ವಿಧೇಯಕ
ರಾಜಭಾಷಾ ಅಧಿನಿಯಮ-1963ರ (1963ರ ಕರ್ನಾಟಕ ಅಧಿನಿಯಮ26)5ಎ ಪ್ರಕರಣವು ಪ್ರತಿಯೊಂದು ಆದೇಶ, ನಿಯಮಗಳು, ವಿನಿಮಯಗಳು ಅಥವಾ ಉಪವಿಧಿಗಳ ಕನ್ನಡ ಭಾಷಾಂತರದ ಪ್ರಕಟಣೆಗೆ ಮುನ್ನ ರಾಜ್ಯಪಾಲರ ಅನುಮೋದನೆ ಅಗತ್ಯವಿದೆ. ಈ ಪ್ರಕ್ರಿಯೆ ಸರಳಗೊಳಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರತಿಯೊಂದು ಆದೇಶ, ನಿಯಮಗಳು, ವಿನಿಮಯಗಳು ಅಥವಾ ಉಪವಿಧಿಗಳ ಕನ್ನಡ ಭಾಷಾಂತರವನ್ನು ದೃಢೀಕರಿಸಲು ರಾಜ್ಯಪಾಲರ ಬದಲಿಗೆ ರಾಜ್ಯ ಸರಕಾರಕ್ಕೆ ಅಧಿಕಾರವನ್ನು ನೀಡುವ ದೃಷ್ಟಿಯಿಂದ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
