ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಾತಿ ಮಾಡಲಾಗಿದೆ. ಕರ್ನಾಟಕ ಬಯಲಾಟ ಅಕಾಡೆಮಿಗೆ ಅಜೀತ್ ನಾಗಪ್ಪ ಬಸಾಪುರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರಾಗಿ ತಿಪ್ಪೇಸ್ವಾಮಿ ಮತ್ತು ದತ್ತಾತ್ರೇಯ ಅರಳಿಕಟ್ಟೆ ನೇಮಕವಾಗಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸದಸ್ಯರಾಗಿ ರಾಮ್ೌತಮ್ ಗುರುಸಿದ್ದಪ್ಪ ಮಲ್ಲಾಪುರ, ಕಮಲ್ ಅಹಮ್ಮದ್ ಮತ್ತು ಶಿಲ್ಪಾ ಕಡಕಬಾವಿ ನೇಮಕಗೊಂಡಿದ್ದಾರೆ.
ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಶ್ರೀಧರ್ ಹೆಗಡೆ, ಪ್ರದೀಪ್ ಚಂದ್ರ ಕುತ್ಪಾಡಿ, ಆರತಿದೇವ, ಜೀವನ್​ಕುಮಾರ್, ವಿಜಯ್ಕುಮಾರ್, ಗಣಪತಿ ಹಿತ್ಲಕೈ, ಎಂ.ಎನ್. ಕಿರಣ್​ಕುಮಾರ್ ಮತ್ತು ಪ್ರಸನ್ನಕುಮಾರ್ ನೇಮಕಗೊಂಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಗೆ ಡಾ. ಅಪ್ಪಾಜಿ, ಬಸವರಾಜ ಶಿವಪ್ಪ, ಶಿವೇಶ್ವರಿ ಗೌಡ, ಸಣ್ಣ ವೀರಪ್ಪ ಹಾಲಪ್ಪ ಸದಸ್ಯರಾಗಿ ನೇಮಕವಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಸದಸ್ಯರಾಗಿ ಗಣೇಶ್ ಉಡುಪ, ನಾಗರಾಜ ಹೆಗಡೆ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅಬ್ದುಲ್ ರಹಿಮಾನ್, ಹೈದರಾಲಿ, ಎಂ.ಕೆ.ಮಠ ಮತ್ತು ಮಹಮ್ಮದ್ ಮುಸ್ತಫಾ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಡಾ. ಕೇಶವ ಬಂಗೇರ ಸದಸ್ಯರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಕೌಸಲ್ಯಾ ಸತೀಶ, ನಾಗೇಶ ಕಾಲೂರ, ಪ್ರಮೀಳಾ ನಾಚಯ್ಯ, ಚಾಮರ ದಿನೇಶ್ ಬೆಳ್ಳಪ್ಪ ಸದಸ್ಯರಾಗಿ ನೇಮಕಗೊಂಡಿದ್ದಾರೆ. ರಂಗ ಸಮಾಜ ಅಕಾಡೆಮಿಗೆ ಶಶಿಧರ ನರೇಂದ್ರ, ಡಾ. ಶೀನ ನಡೋಳಿ, ರಾಜಣ್ಣ ಜೇವರ್ಗಿ, ದಾಕ್ಷಾಯಿಣಿ ಭಟ್ ಮತ್ತು ಟಿ.ಆರ್.ಗುರುಪ್ರಸಾದ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಡ್ಯಾನಿ ಪೇರೆರ ಮತ್ತು ರಾಜೀವ್ ಲೋಚನ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ.
ಬಿಗ್​ಬಾಸ್​​​ ಒಟಿಟಿಗೆ ಚಾಲನೆ; ಆರ್ಯವರ್ಧನ್​, ರೂಪೇಶ್ ಶೆಟ್ಟಿ​, ಸೋನು ಗೌಡ ಪ್ರವೇಶ..

ವಿಚಿತ್ರ ಕಾಯಿಲೆಯಿಂದ ಸತ್ತಿದ್ದಾರೆ 61 ಮಂದಿ; ತನಿಖೆ ನಡೆಸಿ ಎಂದು ಕೋರಿಕೊಂಡ ಗ್ರಾಮಸ್ಥರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
