| ಕೆ.ಎನ್.ರಾಘವೇಂದ್ರ ಮಂಡ್ಯ
ರಾಜ್ಯ ಸರ್ಕಾರ ಕೋವಿಡ್​ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ. ಪರಿಹಾರ ಘೊಷಿಸಿರುವ ಪರಿಣಾಮ ಅನ್ಯ ಕಾರಣಕ್ಕೆ ಮೃತಪಟ್ಟವರ ಕುಟುಂಬದವರೂ ಪರಿಹಾರದ ಆಸೆಗೆ ಕೋವಿಡ್ ಪ್ರಮಾಣಪತ್ರ ಪಡೆಯಲು ದುಂಬಾಲು ಬೀಳುತ್ತಿದ್ದಾರೆ. ಇದರಿಂದಾಗಿ ಪರಿಹಾರದ ಹಣ ದುರುಪಯೋಗವಾಗುವ ಸಾಧ್ಯತೆಯೂ ಕಂಡುಬರುತ್ತಿದೆ. ಮೊದಲು, ಕೋವಿಡ್ ಟೆಸ್ಟ್ ಮಾಡಿಸಲು ಜನರನ್ನು ಒತ್ತಾಯಿಸುವ ಸ್ಥಿತಿ ಇತ್ತು. ಆದರೆ, ಈಗ ಪರಿಹಾರದ ಆಸೆಯಿಂದ ಕೋವಿಡೇತರ ಕಾರಣದಿಂದ ಮೃತಪಟ್ಟವರಿಗೂ ಟೆಸ್ಟ್ ಮಾಡಿಕೊಡಬೇಕೆಂದು ಕುಟುಂಬದವರು ವೈದ್ಯರ ಬೆನ್ನು ಹತ್ತುತ್ತಿದ್ದಾರೆ. ಇನ್ನೂ ಕೆಲವೆಡೆ ಕಳೆದ ವರ್ಷ ಮೃತಪಟ್ಟವರಿಗೂ ಕೋವಿಡ್ ಸಾವು ಎಂದು ವರದಿ ಕೊಡಿಸಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಕೆಲವರು ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆ; ಹೀಗಾಗಿ ಕೋವಿಡ್ ಪ್ರಮಾಣಪತ್ರ ನೀಡುವಂತೆ ವೈದ್ಯರ ಮೇಲೆ ಭಾವನಾತ್ಮಕವಾಗಿ ಒತ್ತಡ ಹೇರುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆಂಬುದನ್ನು ಕಾದುನೋಡಬೇಕು.
ಕಾಂಗ್ರೆಸ್ ಒತ್ತಡ:ಕರೊನಾ ಸಂದರ್ಭದಲ್ಲಿ ಮೃತಪಟ್ಟವರ ಸಂಖ್ಯೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿತ್ತು. ಸರ್ಕಾರ ನೀಡುತ್ತಿರುವ ಲೆಕ್ಕ ಸುಳ್ಳು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೂ ಸರ್ಕಾರ ಪರಿಹಾರ ಕೊಡಬೇಕು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪ್ರಯತ್ನ ಪಡಬೇಕು, ಕೋವಿಡ್​ನಿಂದಲೇ ಮೃತರಾಗಿದ್ದೆಂದು ಪ್ರಮಾಣಪತ್ರ ಕೊಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಸಂದೇಶ ನೀಡಿದ್ದರು. ಕರೊನಾದಿಂದಮುಕ್ತರಾಗಿ ಬಿಡುಗಡೆಗೊಂಡ ನಂತರ ಮೃತಪಟ್ಟವರಿಗೂ ಪರಿಹಾರ ಸಿಗಬೇಕು ಎಂಬ ಕೂಗು ಸಹ ಇತ್ತು.
ಹಣದ ಆಮಿಷ:ಕಳೆದ ವರ್ಷ ಮರಣ ಪ್ರಮಾಣಪತ್ರ ಪಡೆದವರೂ ಈಗ ನಮೂನೆ 4(ಸಾವಿಗೆ ನಿಖರ ಕಾರಣ ತಿಳಿಸುವ ಪ್ರಮಾಣ ಪತ್ರ) ಪಡೆಯಲು ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ಇನ್ನು ಅಧಿಕಾರಿಗಳ ಮಾಹಿತಿ ಪ್ರಕಾರ, ಕೋವಿಡ್ ಪ್ರಮಾಣಪತ್ರ ಕೊಟ್ಟರೆ ಇಂತಿಷ್ಟು ಹಣ ಕೊಡುವುದಾಗಿಯೂ ಆಮಿಷ ಒಡ್ಡುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗಲು ನೀಡಿದ ಯೋಜನೆ ತಪ್ಪು ಹಾದಿ ಹಿಡಿಯುವ ಸಾಧ್ಯತೆ ಇದೆ. ಮಾರ್ಗಸೂಚಿಯಂತೆ, ಆರ್​ಟಿಪಿಸಿಆರ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದು ಮೃತಪಟ್ಟವರಿಗೆ ಮಾತ್ರ ಪರಿಹಾರ ಸಿಗಲಿದೆ. ಜತೆಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಕೊಡುವ ಮಾಹಿತಿ ಆಧಾರದಲ್ಲಿ ಪರಿಹಾರ ಹಂಚಿಕೆಯಾಗಲಿದೆ.
ರಾಜ್ಯದಲ್ಲಿ 35,944 ಕೋವಿಡ್ ಮರಣ:ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಜು.13ರವರೆಗೆ 35,944 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಬಾಗಲಕೋಟೆಯಲ್ಲಿ 323, ಬಳ್ಳಾರಿ 1,679, ಬೆಳಗಾವಿ 829, ಬೆ.ಗ್ರಾಮಾಂತರ 833, ಬೆ.ನಗರ 15,753, ಬೀದರ್ 395, ಚಾಮರಾಜನಗರ 470, ಚಿಕ್ಕಬಳ್ಳಾಪುರ 400, ಚಿಕ್ಕಮಗಳೂರು 362, ಚಿತ್ರದುರ್ಗ 183, ದಕ್ಷಿಣ ಕನ್ನಡ 1,331, ದಾವಣಗೆರೆ 583, ಧಾರವಾಡ 1264, ಗದಗ 313, ಹಾಸನ 1,134, ಹಾವೇರಿ 615, ಕಲಬುರಗಿ 815, ಕೊಡಗು 278, ಕೋಲಾರ 525, ಕೊಪ್ಪಳ 514, ಮಂಡ್ಯ 594, ಮೈಸೂರು 2,250, ರಾಯಚೂರು 326, ರಾಮನಗರ 303, ಶಿವಮೊಗ್ಗ 1033, ತುಮಕೂರು 1,053, ಉಡುಪಿ 404, ಉತ್ತರ ಕನ್ನಡ 695, ವಿಜಯಪುರ 478, ಯಾದಗಿರಿ 206 ಹಾಗೂ ಇತರೆ ಮೂವರು ಮೃತಪಟ್ಟಿದ್ದಾರೆ.
ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fifteen =
Remember me
