ಬೆಂಗಳೂರು:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ಜೀವ ರಕ್ಷಕ ಔಷಧ ಸಮಸ್ಯೆ ಸೆ.15ರೊಳಗೆ ಬಗೆಹರಿಯಲಿದೆ ಎಂದು ರಾಜ್ಯ ವೈದ್ಯಕೀಯ ಸರಬರಾಜು ನಿಗಮ( ಕೆಎಸ್‌ಎಂಎಸ್‌ಸಿಎಲ್) ಹೇಳಿದೆ.
ಆ.17ರಂದು ವಿಜಯವಾಣಿ ಮುಖಪುಟದಲ್ಲಿ ‘ಆಸ್ಪತ್ರೆಗಳಲ್ಲಿ ಔಷಧ ಅಭಾವ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಸದಾಶಿವ ವಟಾರೆ, ಪ್ರಸಕ್ತ ಸಾಲಿನಲ್ಲಿ ಒಟ್ಟು 733 ಔಷಧಗಳಿಗೆ ಬೇಡಿಕೆ ಬಂದಿದೆ. 733 ಔಷಧಗಳ ಪೈಕಿ 500 ಔಷಧಗಳ ಖರೀದಿ ಪ್ರಕ್ರಿಯೆ ಸಂಬಂಧ ಟೆಂಡರ್ ನಡೆದಿದೆ. ಇದರಲ್ಲಿ 20 ಔಷಧಗಳನ್ನು ಪೂರೈಕೆ ಮಾಡಲು ಕಾರ್ಯಾದೇಶ ಪತ್ರ ನೀಡಲಾಗಿದೆ. ಉಳಿದ ಔಷಧಗಳ ಟೆಂಡರ್ ಪ್ರಕ್ರಿಯೆ ಸಂಬಂಧಪಟ್ಟಂತೆ ತಾಂತ್ರಿಕ ಮೌಲ್ಯಮಾಪನ ನಡೆಯುತ್ತಿದ್ದು, ಮಾಸಾಂತ್ಯ ವೇಳೆಗೆ ಕಾರ್ಯಾದೇಶ ಪತ್ರ ನೀಡುವುದಾಗಿ ಹೇಳಿದರು.
ಅಲ್ಲದೆ, 233 ಔಷಧಗಳಿಗೆ ಯಾವುದೇ ಕಂಪನಿಗಳು ಭಾಗಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರು ಪ್ಯಾಕೇಜ್‌ಗಳಾಗಿ ವಿಗಂಡಿಸಿ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ಮುಗಿಸಿ ಸೆ.15ರೊಳಗೆ ಕಾರ್ಯಾದೇಶ ಪತ್ರ ನೀಡಲಾಗುವುದು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದು ಒಂದೂವರೆ ತಿಂಗಳು ಕಳೆಯುತ್ತಿದೆ. ನಿಗಮದಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಕಿ ಉಳಿದಿರುವ ಔಷಧ, ವೈದ್ಯಕೀಯ ಬಿಲ್‌ಗಳ ಪಾವತಿಗೆ ಹಾಗೂ ಕಡತ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಚಿದಾನಂದ ಸದಾಶಿವ ವಟಾರೆ ಹೇಳಿದರು.
ಇದನ್ನೂ ಓದಿ:ದಸರೆಯೊಳಗೆ ಸ್ವಾಗತ ಕಮಾನಿಗೆ ಕಾಯಕಲ್ಪ
ಔಷಧಗಳನ್ನು ಪೂರೈಕೆ ಮಾಡಿದ್ದ ವಿವಿಧ ಕಂಪನಿಗಳಿಗೆ ಇದುವರೆಗೆ 113 ಕೋಟಿ ರೂ. ಪಾವತಿಸಲಾಗಿದೆ. 2013ರಿಂದ ಅರ್ನಸ್ಟ್ ಮನಿ ಡಿಪಾಸಿಟ್ ( ಇಎಂಡಿ) ಹಾಗೂ ಭದ್ರತಾ ಠೇವಣಿ ಬಾಕಿ ಉಳಿದಿರುವುದು ನಿಜ. ಹೀಗಾಗಿ, ಔಷಧಗಳ ಸಂಬಂಧಪಟ್ಟಂತೆ ಒಟ್ಟು 2,361 ಇಎಂಡಿ ಕೇಸ್‌ಗಳ ಪೈಕಿ 1,753 ಕೇಸ್‌ಗಳನ್ನು ವಿಲೇವಾರಿ ಮಾಡಲಾಗಿದ್ದು, 608 ಬಾಕಿ ಉಳಿದಿದೆ. ಅದೇರೀತಿ, ವೈದ್ಯಕೀಯ ಉಪಕರಣ ಪೂರೈಕೆ ಸಂಬಂಧ 1,868 ಇಎಂಡಿ ಕೇಸ್‌ಗಳ ಪೈಕಿ 1,761 ಕೇಸ್‌ಗಳನ್ನು ವಿಲೇ ಮಾಡಲಾಗಿದ್ದು, 107 ಕೇಸ್‌ಗಳ ಬಾಕಿ ಉಳಿದಿವೆ. ಜತೆಗೆ, ಬಾಕಿ ಉಳಿದಿರುವ 77 ಕೋಟಿ ರೂ. ಭದ್ರತಾ ಠೇವಣಿಯನ್ನು ಹಂತ ಹಂತವಾಗಿ ಕ್ಲಿಯರ್ ಮಾಡುವುದಾಗಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − three =
Remember me
