ಅವಿನಾಶ ಮೂಡಂಬಿಕಾನ ಬೆಂಗಳೂರು
ರಾಜ್ಯದಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿ ತಿಂಗಳು ಕಳೆದಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಸದ್ದಿಲ್ಲದೇ ನಡೆಯುತ್ತಿವೆ. ರಾಜ್ಯದಲ್ಲಿ ಮದ್ಯ ಅಕ್ರಮವಾಗಿ ಮಾರುತ್ತಿದ್ದ 18,167 ಕಡೆ ನಡೆದ ದಾಳಿಯಲ್ಲಿ 1,160 ಪ್ರಕರಣ ದಾಖಲಾಗಿದ್ದು, 466 ಮಂದಿಯನ್ನು ಬಂಧಿಸಿ, 35,526 ಲೀ.ಗೂ ಅಧಿಕ ಮದ್ಯ ಜಪ್ತಿ ಮಾಡಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ. ರಾಜ್ಯದೆಲ್ಲೆಡೆ ಮದ್ಯ ಲಭ್ಯ ಇಲ್ಲದ್ದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಅಂಗಡಿ ಮಾಲೀಕರು, ಸಗಟು ಮದ್ಯ ಮಾರಾಟಗಾರರು ಹಾಗೂ ಇತರ ಖಾಸಗಿ ವ್ಯಕ್ತಿಗಳು ಬಾರ್​ಗಳಲ್ಲಿ ಅಕ್ರಮವಾಗಿ ಮದ್ಯ ಖರೀದಿಸಿ ಸಾರ್ವಜನಿಕರಿಗೆ ಮೂರು ಪಟ್ಟು ಹೆಚ್ಚಿನ ಬೆಲೆಗೆ ಕದ್ದು-ಮುಚ್ಚಿ ಮಾರುತ್ತಿದ್ದಾರೆ. ದುಬಾರಿಯಾದರೂ ಮದ್ಯ ಖರೀದಿಸುವವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಸಗಟು ಮದ್ಯ ಮಾರಾಟಗಾರರು ದಿನಸಿ ಅಂಗಡಿ ಮಾಲೀಕರ ಸಹಕಾರದಿಂದ ರಾಜ್ಯದೆಲ್ಲೆಡೆ ಎಗ್ಗಿಲ್ಲದೆ ಮಾರುತ್ತಿದ್ದಾರೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ಸಕ್ರಿಯವಾಗಿ ನಡೆಯುತ್ತಿದ್ದು, ಕಳ್ಳಭಟ್ಟಿ ಸಾರಾಯಿ ತಯಾರಿಕೆಯೂ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ವಲಯದಲ್ಲೇ ಹೆಚ್ಚು: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ವಲಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತುಸು ಹೆಚ್ಚಾಗಿಯೇ ನಡೆಯುತ್ತಿದೆ. ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂ. ಗ್ರಾಮಾಂತರವು ಬೆಂಗಳೂರು ವಲಯಕ್ಕೆ ಬರಲಿದ್ದು, ಈ ವಲಯಗಳಲ್ಲಿ ಒಟ್ಟು 5,149 ಕಡೆ ದಾಳಿ ನಡೆದಿದ್ದು, 153 ಪ್ರಕರಣ ದಾಖಲಾಗಿ, 112 ಜನರನ್ನು ಬಂಧಿಸಲಾಗಿದೆ. ಬೆಳಗಾವಿ ವಲಯದಲ್ಲಿ ಪ್ರಕರಣಗಳು ಹಾಗೂ ಬಂಧಿತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ 2,448 ಕಡೆ ನಡೆಸಿದ ದಾಳಿಯಲ್ಲಿ 281 ಪ್ರಕರಣ ದಾಖಲಾಗಿದ್ದು, 156 ಜನರನ್ನು ಬಂಧಿಸಿದ್ದಾರೆ. 16,519 ಲೀಟರ್​ಗೂ ಅಧಿಕ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮೇಲಧಿಕಾರಿಗಳ ಕೃಪೆ:ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮದ್ಯ ಮಾರುವವರನ್ನು ಪತ್ತೆ ಹಚ್ಚುತ್ತಿದ್ದರೂ, ಮೂಲಗಳ ಪ್ರಕಾರ ಇನ್ನೂ ಬೆಳಕಿಗೆ ಬರದಿರುವ ಪ್ರಕರಣಗಳೇ ಅಧಿಕ ಇವೆ ಎನ್ನಲಾಗುತ್ತಿದೆ. ಮೇಲಧಿಕಾರಿಗಳ ಕೃಪೆ ಇಲ್ಲದೆ ಕಳ್ಳ ಮಾರ್ಗಗಳ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಮಾರಾಟ ಸಾಧ್ಯವಿಲ್ಲ. ಅಧಿಕ ಬೆಲೆಗೆ ಮಾರಿ ಬಂದ ಹಣದಲ್ಲಿ ದೊಡ್ಡ ಪಾಲು ಮೇಲಧಿಕಾರಿಗಳ ಖಜಾನೆಗೂ ಹೋಗುತ್ತದೆ ಎಂಬ ಮಾತು ಕೇಳಿ ಬಂದಿದೆ. ನಿಯಮ ಉಲ್ಲಂಘಿಸಿ ಮದ್ಯ ಮಾರುವುದು ಕಂಡು ಬಂದರೆ, ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರೂ, ಈವರೆಗೂ ಯಾವ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ.
ಸುದ್ದಿ ನಿರೂಪಕನೇ ಸುದ್ದಿಯಾಗಿದ್ದು ಏಕೆ? ಅದೆಂಥಾ ಅರ್ಜೆಂಟ್​ನಲ್ಲಿದ್ದ ಈ ಮಹಾನುಭಾವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 2 =
Remember me
