ಬೆಂಗಳೂರು: ನೆರೆ-ಬರ ಕಷ್ಟದಲ್ಲಿರುವ ಸಂದರ್ಭದಲ್ಲಿ ರೈತರಿಂದ ಸುಸ್ತಿ ಸಾಲ ವಸೂಲಿ ಮಾಡಲು ನೀಡಿದ ಆದೇಶ ವಿವಾದ, ರೈತರ ಆಕ್ರೋಶಕ್ಕೆ ಕಾರಣವಾಗಬಹುದೆಂಬ ಮುನ್ನೆಚ್ಚರಿಕೆಯಿಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ತಕ್ಷಣವೇ ಸಾಲ ವಸೂಲಿ ನಿಲ್ಲಿಸುವಂತೆ ಬುಧವಾರ ಆದೇಶ ಹೊರಡಿಸಿದೆ.
ಸಹಕಾರ ಸಚಿವರು, ಸರ್ಕಾರದ ಸೂಚನೆಯಂತೆ ಸುಸ್ತಿ ಕೃಷಿ ಸಾಲಗಳ ವಸೂಲಿಯನ್ನು ತಕ್ಷಣವೇ ತಡೆ ಹಿಡಿಯಲಾಗಿದ್ದು, ಮುಂದಿನ ಆದೇಶದವರೆಗೂ ವಸೂಲಿ ಮಾಡಬಾರದು. ಜಿಲ್ಲಾ ಶಾಖೆಗಳು ಹಾಗೂ ಪಿಕಾರ್ಡ್ ಬ್ಯಾಂಕ್​ಗಳಿಗೆ ಕೂಡಲೇ ತಿಳಿಸಿ ವರದಿ ಸಲ್ಲಿಸಬೇಕೆಂದು ಕಾಸ್ಕಾರ್ಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಹಕಾರ ಸಂಘಗಳ ನಿಬಂಧಕ ಎನ್.ಎಸ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಸಾಲ ವಸೂಲಿ ನಿರ್ಧಾರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರೈತ ಸಂಘಟನೆಗಳ ಮುಖಂಡರು ಆಕ್ಷೇಪಿಸಿದ್ದರು. ಬರಗಾಲದ ಕಾರಣಕ್ಕೆ 2016ರಲ್ಲಿ ಆಗಿನ ಮುಖ್ಯಮಂತ್ರಿ ಸೂಚನೆಯಂತೆ ಕೃಷಿಕರ ಸಹಕಾರ ಸಂಘಗಳ ಎಲ್ಲ ರೀತಿಯ ಸಾಲ ವಸೂಲಿಗೆ ನಿರ್ಬಂಧ ವಿಧಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + eight =
Remember me
