| ಆರ್​. ತುಳಸಿಕುಮಾರ್​ ಬೆಂಗಳೂರು
ರೈತರು ಸೇರಿದಂತೆ ಸಹಕಾರಿ ಕ್ಷೇತ್ರದ ಸದಸ್ಯರಿಗೆ ನಗದುರಹಿತವಾಗಿ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮರು ಜಾರಿಯಾಗಿರುವ “ಯಶಸ್ವಿನಿ ಯೋಜನೆ’ಗೆ ಆರಂಭದಲ್ಲೇ ವ್ನಿ ಎದುರಾಗಿದೆ. 2017&18ರಲ್ಲಿ ಯೋಜನೆ ಸ್ಥಗಿತಗೊಳ್ಳುವುದಕ್ಕೂ ಮುನ್ನ ಜಾರಿಯಲ್ಲಿದ್ದ ಚಿಕಿತ್ಸಾ ದರಕ್ಕಿಂತ ಈಗ ಶೇ.10ರಿಂದ ಶೇ.20 ರಷ್ಟು ಚಿಕಿತ್ಸಾ ದರ ಕಡಿತಗೊಳಿಸಲಾಗಿದೆ. ದರ ನಿಗದಿಯಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ ಎಂದು ಖಾಸಗಿ ಆಸ್ಪತ್ರೆಗಳಿಂದ ಆೇಪ ವ್ಯಕ್ತವಾಗಿದ್ದು, ಹೀಗಾಗಿ ಗುಣಮಟ್ಟದ ಸೇವೆ ಲಭಿಸುವ ಬಗ್ಗೆ ರೋಗಿಗಳಿಗೆ ಆತಂಕ ಶುರುವಾಗಿದೆ.
ಯಶಸ್ವಿನಿ ಯೋಜನೆಯಡಿ ಸೇವೆ ನೀಡಲು ಸಿದ್ಧರಿದ್ದರೂ, ದರ ನಿಗದಿ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಸ್ವತ: ಭಾರತೀಯ ವೈದ್ಯಕಿಯ ಸಂದ (ಐಎಂಎ) ಕರ್ನಾಟಕ ಶಾಖೆ ಅತೃಪ್ತಿ ಹೊರಹಾಕಿದೆ. ಯೋಜನೆಯನ್ನು ಮರು ಜಾರಿಗೊಳಿಸುವ ಹೊಸ್ತಿಲಲ್ಲಿ ಸೇವಾ ಪೂರೈಕೆದಾರರ ಸಲಹೆ&ಸೂಚನೆಯನ್ನು ಪರಿಗಣಿಸಿಲ್ಲ. ಗುಣಮಟ್ಟದ ಸೇವೆ ಒದಗಿಸಲು ವೈಜ್ಞಾನಿಕವಾಗಿ ದರ ನಿಗದಿಗೊಳಿಸ ಬೇಕೆಂಬ ಐಎಂಎ ಕೋರಿಕೆಗೆ ಮನ್ನಣೆ ನೀಡಿಲ್ಲ. ಇದರಿಂದಾಗಿ ನ.2ರಿಂದ ಯೋಜನೆ ಸೌಲಭ್ಯ ಪಡೆಯಲು ಸದಸ್ಯತ್ವ ನೋಂದಣಿಗೆ ಚಾಲನೆ ಸಿಕ್ಕಿದ್ದರೂ ಚಿಕಿತ್ಸೆ ನೀಡಬೇಕಿರುವ ಖಾಸಗಿ ಆಸ್ಪತ್ರೆ ಹಾಗೂ ಯಶಸ್ವಿನಿ ಟ್ರಸ್ಟ್​ ಮಧ್ಯೆ ಒಡಂಬಡಿಕೆ ಸಾಧ್ಯವಾಗಿಲ್ಲ. ಯಶಸ್ವಿನಿ ಯೋಜನೆಯಲ್ಲಿ ಈ ಬಾರಿ 1,650 ವಿಧದ ಚಿಕಿತ್ಸೆಗಳು ಲಭ್ಯವಿವೆ.
ಆಸ್ಪತ್ರೆಗಳು ಹೇಳೋದೇನು?* ಚಿಕಿತ್ಸಾ ದರ ಈಗಿನ ಪರಿಸ್ಥಿತಿಗೆ ತಕ್ಕಂತೆ ನಿಗದಿಪಡಿಸಬೇಕು* ಯೋಜನೆಯಡಿ ಚಿಕಿತ್ಸೆ ನೀಡಲು ಸಿದ್ಧ. ಆದರೆ, ಇಷ್ಟು ಕಡಿಮೆ ಮೊತ್ತಕ್ಕೆ ಸಾಧ್ಯವಿಲ್ಲ.* 2017&18ಕ್ಕಿಂತ ಮುಂಚಿನ ದರಕ್ಕಿಂತಲೂ ಕಡಿಮೆ ಮೊತ್ತ ನಿಗದಿಪಡಿಸಿರುವುದು ಎಷ್ಟು ಸರಿ?* ಚಿಕಿತ್ಸೆ ನಿರಾಕರಿಸಿದರೆ ಯೋಜನೆ ವಿರೋಧಿ ಎಂಬ ಹಣೆಪಟ್ಟಿ, ಚಿಕಿತ್ಸೆ ಕೊಟ್ಟರೆ ಆರ್ಥಿಕ ಸಂಕಷ್ಟ
ಸರ್ಕಾರಕ್ಕೆ ಐಎಂಎ ಪತ್ರದರ ನಿಗದಿ ಬಗ್ಗೆ ಐಎಂಎ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆಯನ್ನು ವಿವರಿಸಿದೆ. ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಿಂದ ಯಾವುದೇ ನಿರ್ಧಾರವಾಗಿಲ್ಲ. ಹಳೇ ಮಾರ್ಗಸೂಚಿ ಆಧರಿಸಿ ದರ ಪಟ್ಟಿ ಸಿದ್ಧಪಡಿಸಿದ್ದಾರೆ. ಟ್ರಸ್ಟ್​ನಲ್ಲೂ ಉತ್ತರ ಕರ್ನಾಟಕ ಹಾಗೂ ಗ್ರಾಮೀಣರನ್ನು ಪ್ರತಿನಿಧಿಸುವ ಮಂದಿಗೆ ಅವಕಾಶ ಸಿಗದಿರುವುದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.
ಏನಾಗುತ್ತೆ?1. ಸರ್ಕಾರ ವೈಜ್ಞಾನಿಕ ದರ ನಿಗದಿಪಡಿಸದಿದ್ದರೆ ಗುಣಮಟ್ಟದ ಆರೋಗ್ಯ ಸೇವೆ ಸಿಗದು2. ಕೆಲವೊಂದು ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಕೊಡಲು ಆಸ್ಪತ್ರೆಗಳು ನಿರಾಕರಿಸುವ ಸಾಧ್ಯತೆ3. ಕಡಿಮೆ ಪ್ಯಾಕೇಜ್​ನಿಂದಾಗಿ ಆಸ್ಪತ್ರೆಗಳು ಉದ್ದೇಶಪೂರ್ವಕವಾಗಿ ಚಿಕಿತ್ಸೆ ವಿಳಂಬ ಮಾಡುವ ಸಾಧ್ಯತೆ4. ಚಿಕಿತ್ಸಾ ವೆಚ್ಚದ ರೂಪದಲ್ಲಿ ರೋಗಿಗಳಿಂದ ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಸಾಧ್ಯತೆ5. ಸರಿಯಾದ ಚಿಕಿತ್ಸೆ ಸಿಗದಿದ್ದರೆ, ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಟ್ಟರೆ ಆಸ್ಪತ್ರೆಗಳ ಜತೆ ಜನರ ಜಗಳ ಸಾಧ್ಯತೆ
ಯಾವಾಗಿಂದ ಸೌಲಭ್ಯ?1. ಯಶಸ್ವಿನಿ ಯೋಜನೆಯಲ್ಲಿ ಹೆಸರು ನೋಂದಣಿಯಾದ 15 ದಿನ ಬಳಿಕ ಸದಸ್ಯರಿಗೆ ಪ್ರತ್ಯೇಕ ಸಂಖ್ಯೆ ವಿತರಣೆ2. ಕಾರ್ಡ್​ ವಿತರಣೆಗೆ ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ3. ಕಾರ್ಡ್​ ಇಲ್ಲದಿದ್ದರೂ ವೈಯಕ್ತಿಕ ಸಂಖ್ಯೆ ಆಧರಿಸಿ ಸೌಲಭ್ಯ ಒದಗಿಸಲು ಯಶಸ್ವಿನಿ ಟ್ರಸ್ಟ್​ ನಿರ್ಧಾರ4. ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದವಾಗದ ಕಾರಣ ಜನವರಿಯಿಂದ ಸೇವೆ ನಿರೀೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
