ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಇಂಧನ ದರ ಹೆಚ್ಚಿಸಿರುವ ಬೆನ್ನಲ್ಲೇ ಜನಸಾಮಾನ್ಯರಿಗೆ ಇದೀಗ ಎಲ್ಲ ವಲಯದ ವಸ್ತುಗಳ ದರ ಏರಿಕೆಯ ಬಿಸಿ ಮತ್ತೊಮ್ಮೆ ತಟ್ಟಲಿದೆ.ದಿನಬಳಕೆ,ಉತ್ಪನ್ನಗಳ ಸರಬರಾಜು, ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗುತ್ತದೆ. ಕೈಗಾರಿಕೆಗಳು, ಉದ್ಯಮಗಳು ಸಾಗಾಣಿಕೆ ವೆಚ್ಚವನ್ನು ಪ್ರಮುಖವಾಗಿ ಅವಲಂಬಿಸಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದರಿಂದಾಗಿ ನೇರವಾಗಿ ಹೊಡೆತ ಬೀಳುವ ಬಡ, ಮಧ್ಯಮ ವರ್ಗದವರಿಗೆ ಜೀವನ ನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಇಂಧನ ದರ ಹೆಚ್ಚಳದಿಂದಾಗಿ ವಿಶೇಷವಾಗಿ ಮನೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್​, ಮರಳು,ಎಂ.ಸ್ಯಾಂಡ್​, ಬೋಲ್ಡರ್ಸ್​, ದಿಂಡುಗಲ್ಲು ಸಿಮೆಂಟ್​, ಸ್ಟೀಲ್​, ಸಿಮೆಂಟ್​ ಹಾಗೂ ಇಟ್ಟಿಗೆ ಬೆಲೆ ಇನ್ನಷ್ಟು ದುಬಾರಿಯಾಗಲಿದೆ. ಇದರಿಂದಾಗಿ ಹೊಸದಾಗಿ ಮನೆ ಕಟ್ಟುವವರಿಗೆ, ಸದ್ಯ ಮನೆ ನಿರ್ಮಾಣ ಮಾಡುತ್ತಿರುವವರಿಗೆ ತುಂಬ ತೊಂದರೆಯಾಗಲಿದೆ. ವರ್ಷದಿಂದ ವರ್ಷಕ್ಕೆ ಅಡುಗೆ ಎಣ್ಣೆ, ತೊಗರಿ ಬೇಳೆ, ತರಕಾರಿ, ಅಕ್ಕಿ, ಗೋಧಿ, ಹಿಟ್ಟು, ಖಾದ್ಯ ತೈಲಗಳು, ಸಕ್ಕರೆ, ಚಹ, ಕಾಫಿ ಸೇರಿ ದಿನಬಳಕೆ ವಸ್ತುಗಳ ಬೆಲೆ ನಾಗಾಲೋಟದಲ್ಲಿ ಏರುತ್ತಿವೆ. ಇದೀಗ ಇಂಧನ ಹೆಚ್ಚದಿಂದಾಗಿ ಮೇಲಿನ ವಸ್ತುಗಳ ಬೆಲೆ ಇನ್ನಷ್ಟು ದುಬಾರಿಯಾಗುತ್ತದೆ. ಬಡವರಿಗೆ, ಮಧ್ಯಮ ವರ್ಗದ ಜನರಿಗೆ, ಅವಿಭಕ್ತ ಕುಟುಂಬಗಳ ಅಡುಗೆ ಮನೆಗಳು ಇದರ ಬಿಸಿ ತಟ್ಟುತ್ತದೆ. ಮನೆ ಮನೆಗಳ ಒಡಕಿಗೆ ಕಾರಣವಾಗುವುದಲ್ಲದೆ, ಅಡುಗೆ ಮನೆಗಳು ಎರಡಾಗುತ್ತಿವೆ. ಗಂಡ ಕೊಟ್ಟ ಹಣದಲ್ಲಿ ಮನೆಯ ಖರ್ಚು,ವೆಚ್ಚ ತೂಗಿಸುವ ಗೃಹಣಿ ತಿಂಗಳ ಕೊನೆಯಲ್ಲಿ ಕೈಯಲ್ಲಿ ಕಾಸು ಉಳಿಯದೇ ಪರಿತಪಿಸುತ್ತಾಳೆ.ಈ ವಿಚಾರಕ್ಕೆ ಕೆಲವೊಮ್ಮೆ ಗಂಡ&ಹೆಂಡತಿ ನಡುವೆ ಜಗಳ ನಡೆಯುವ ಸಾಧ್ಯತೆಯೂ ಇರುತ್ತದೆ.
ಬಸ್​ ಪ್ರಯಾಣ ತುಟ್ಟಿಇಂಧನ ಹೆಚ್ಚಳದಿಂದಾಗಿ ಖಾಸಗಿ ಬಸ್​ ಮಾಲೀಕರು, ಟ್ಯಾಗಳು, ಆಟೋದವರು ದರ ಹೆಚ್ಚಿಸುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ಆ್ಯಪ್​ ಆಧಾರಿತ ಸೇವೆ ನೀಡುತ್ತಿರುವ ಕಂಪನಿಗಳು ಪ್ರಯಾಣಿಕರಿಂದ ಹಣ ಸುಲಿಗೆಗೆ ಇಳಿಯಲಿವೆ. ದೂರದ ಊರಿಗೆ ತೆರಳಲು ಖಾಸಗಿ ಬಸ್​ನ್ನೇ ಆವಲಂಬಿಸಿರುವ ಜನರು, ಇನ್ನಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಜತೆಗೆ, ರಾಜ್ಯದ ಎಲ್ಲ ಕಡೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುತ್ತದೆ. ಟ್ಯಾಕ್ಸಿ ಬಳಕೆಗೆ ವಿಧಿಸುತ್ತಿದ್ದ ಪ್ರತಿ ಕಿ.ಮೀ ದರ ಹೆಚ್ಚಳವಾಗುತ್ತದೆ. ಜಿಎಸ್​ಟಿ, ಟೋಲ್​ ಶುಲ್ಕವನ್ನು ಪ್ರಯಾಣಿಕರಿಂದಲೂ ವಸೂಲಿ ಮಾಡುತ್ತಾರೆ. ಆ್ಯಪ್​ ಆಧಾರಿತ ಟ್ಯಾಕ್ಸಿ,ಆಟೋ ಸೇವೆ ಬಳಸುವ ಬಳಕೆದಾರರು ಇನ್ನಷ್ಟು ಹಣವನ್ನು ನೀಡುಬೇಕಾಗುತ್ತದೆ.
ಮನೆ, ಅಪಾರ್ಟ್​ಮೆಂಟ್​ ದುಬಾರಿಸಿಮೆಂಟ್​, ಉಕ್ಕು, ಮರಳು,ಎಂ.ಸ್ಯಾಂಡ್​, ಜಲ್ಲಿಕಲ್ಲು, ಸೈಜ್​ಗಲ್ಲು ಬೆಲೆ ಹೆಚ್ಚಳದಿಂದಾಗಿ ಮನೆ, ಅಪಾರ್ಟ್​ಮೆಂಟ್​ಗಳು ಇನ್ನಷ್ಟು ದುಬಾರಿಯಾಗಲಿದೆ.2ಬಿಎಚ್​ಕೆ, 3 ಬಿಎಚ್​ಕೆ ಅಪಾರ್ಟ್​ಮೆಂಟ್​ ಬೆಲೆಗಳು ಗಗನಮುಖಿಯಾಗಲಿವೆ. ವಿಲ್ಲಾಗಳ ಬೆಲೆಯೂ ತುಟ್ಟಿಯಾಗಲಿದೆ.ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂದು ಕನಸು ಕಾಣುತ್ತಿರುವವರಿಗೆ ನಿರಾಸೆಯಾಗುತ್ತದೆ.
ಹೋಟೆಲ್​ಗಳ ಊಟ-ತಿಂಡಿ ದುಬಾರಿಅಡುಗೆ ಎಣ್ಣೆ, ವಾಣಿಜ್ಯ ಬಳಕೆಯ ಸಿಲಿಂಡರ್​,ಕಾರ್ಮಿಕ ವೇತನ ಸೇರಿ ಇನ್ನಿತರ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಈಗಾಗಲೇ ಹೋಟೆಲ್​ ಉದ್ಯಮಗಳು, ಊಟ-ತಿಂಡಿಗಳ ಮೇಲೆ ದರ ಏರಿಸಿವೆ. ಇಂಧನ ಹೆಚ್ಚಳದಿಂದಾಗಿ ಮತ್ತೊಮ್ಮೆ ಊಟ&ತಿಂಡಿಗಳ ಮೇಲೆ ದರ ಹೆಚ್ಚಿಸಿದರೆ ಒಂದು ಹೊತ್ತು ಊಟ ಬಿಟ್ಟು ಖಾಲಿ ಹೊಟ್ಟೆಯಲ್ಲಿ ಜೀವನ ನಡೆಸಬೇಕಾಗುತ್ತದೆ. ಬೆಲೆಗಳ ಏರಿಕೆಯೂ ಜನಸಾಮಾನ್ಯರ ತಿಂಗಳ ಖರ್ಚು, ವೆಚ್ಚದಲ್ಲಿ ಭಾರಿ ಏರುಪೇರಿಗೆ ಕಾರಣವಾಗುತ್ತದೆ. ಹಣದುಬ್ಬರದ ಬಿಸಿ ಜನಸಮಾನ್ಯರಿಗಷ್ಟೇ ಅಲ್ಲ, ಸಮಾಜದ ಎಲ್ಲ ವರ್ಗದ ಜನರಿಗೂ ಬೇರೆ ಬೇರೆ ಬಗೆಯಲ್ಲಿ ತಟ್ಟುತ್ತದೆ. ಹಣ್ಣು, ಹಂಪಲು, ತರಕಾರಿಗಳ ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ಉದ್ಬವಿಸುತ್ತದೆ.
ಶೇ15ರಷ್ಟು ದರ ಹೆಚ್ಚಳ:ಇಂಧನ ಬೆಲೆ ಹೆಚ್ಚಳದಿಂದಾಗಿ ಜಲ್ಲಿಕಲ್ಲು, ಎಂ.ಸ್ಯಾಂಡ್​, ಸೈಜ್​ಕಲ್ಲು, ಮರಳು, ಬೋಲ್ಡರ್ಸ್​, ದಿಂಡುಗಲ್ಲು ಸೇರಿ ಇನ್ನಿತರ ನಿರ್ಮಾಣ ಬಳಕೆಯ ವಸ್ತುಗಳ ಮೇಲೆ ಶೇ.15ರಷ್ಟು ದರ ಹೆಚ್ಚಳವಾಗುತ್ತದೆ. ಕಳೆದೊಂದು ವರ್ಷದಿಂದ ನಿರ್ಮಾಣ ರಂಗ ನಷ್ಟದಲ್ಲಿವೆ. ಶೇ.20ರಷ್ಟು ದರ ಹೆಚ್ಚಿಸಿದ್ದರೂ ನಷ್ಟದಲ್ಲಿರುವ ಉದ್ದಿಮೆಗಳು ಲಾಭದಾಯಕ ಹಳಿಗೆ ಮರಳುವ ಪರಿಸ್ಥಿತಿಯಲ್ಲಿಲ್ಲ. ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳಿಂದಾಗಿ ಸರಕು ಸಾಗಾಣೆ ದರ ಹೆಚ್ಚಳವಾಗುತ್ತದೆ. ಹಾಗಾಗಿ, ನಿರ್ಮಾಣ ಬಳಕೆಯ ವಸ್ತುಗಳ ದರ ಏರಿಕೆಯಾಗಲಿದೆ ಎಂದು ಫೆಡರೇಷನ್​ ಆಫ್​​ ಕರ್ನಾಟಕ ಕ್ವಾರಿ ಆ್ಯಂಡ್​ ಸ್ಟೋನ್​ ಕ್ರಷರ್​ ಓನರ್ಸ್​ ಅಸೋಸಿಯೇಷನ್​ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಹೇಳುತ್ತಾರೆ.
ಏನೇನು ದರ ಹೆಚ್ಚಾಯ್ತು?* ಆಸ್ತಿಗಳ ಮಾರ್ಗಸೂಚಿ ದರ ಶೇ.25 ರಿಂದ ಶೇ.30ರಷ್ಟು ಏರಿಕೆ* ವಾಣಿಜ್ಯ ವಾಹನಗಳ ನೋಂದಣಿ ಮೇಲೆ ಶೇ.3ರಷ್ಟು ಹೆಚ್ಚುವರಿ ತೆರಿಗೆ* ದೇಶೀಯ ಮದ್ಯದ ಮೇಲೂ ಹೆಚ್ಚುವರಿ ತೆರಿಗೆ* ಉದ್ಯಮ&ವಹಿವಾಟು ಬಳಕೆ ವಿದ್ಯುತ್​ ದರ ಏರಿಕೆ* ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್​, ಮರಳು, ಎಂ.ಸ್ಯಾಂಡ್​, ಬೋಲ್ಡರ್ಸ್​, ದಿಂಡುಗಲ್ಲು, ಕರಿಕಲ್ಲು, ಬಿಳಿಕಲ್ಲು, ಮಲ್ಟಿಕಲರ್​ ಗ್ರಾನೈಟ್​ ದರ ಹೆಚ್ಚಳ* ಉಚಿತ ವಿದ್ಯುತ್​ನ ವೆಚ್ಚ ಭರಿಸಲು ಹೆಚ್ಚುವರಿಯಾಗಿ ಕ್ರಾಸ್​ ಸಬ್ಸಿಡಿ ಹೊರೆ* ಎಲ್ಲ ದುಬಾರಿಯಿಂದ ಹೂಡಿಕೆಗೆ ಉದ್ಯಮಿಗಳು,ಹೂಡಿಕೆದಾರರು ಹಿಂದೇಟು* ಹಾಲಿನ ದರ ಹೆಚ್ಚಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fourteen =
Remember me
