ಬೆಂಗಳೂರು:ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಈ ಮದ್ಯೆ ಕರ್ನಾಟಕ ಮಿಲ್ಕ್​ ಫೆಡರೇಷನ್​(KMF) ಆಗಷ್ಟ್​ 1ರಿಂದ ಜಾರಿಗೆ ಬರುವಂತೆ ಹಾಲಿನ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹಾಲಿನ ದರ ಹೆಚ್ಚಳದ ಶಾಕ್​ನಿಂದ ಜನತೆ ಹೊರಬರುವುದಕ್ಕು ಮುನ್ನವೇ ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಈ ಸುದ್ದಿಯಂತು ತಿಂಡಿ ಪ್ರಿಯರಿಗೆ ದೊಡ್ಡ ಆಘಾತ ಒಂದನ್ನು ನೀಡಿದೆ.
ಇದನ್ನೂ ಓದಿ:2024ರ IPL ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಒಂದು ತಿಂಗಳ ಮುಂಚೆಯೇ ಆರಂಭವಾಗಲಿದೆ ಟೂರ್ನಿ
ನಂದಿನ ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಟೀ, ತಿಂಡಿ, ಊಟದ ಬೆಲೆ ಏರಿಕೆ ಮಅಡುವ ಮೂಲಕ ಗ್ರಾಹಕರಿಗೆ ಶಾಕ್​ ನೀಡಲಾಗಿದೆ. ನಾಳೆಯಿಂದ ಜಾರಿಗೆ ಬರುವಂತೆ ಹೋಟೆಲ್​ ತಿಂಡಿಗಳ ದರ ಕುಡ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಬೆಲೆ ಏರಿಕೆ ಸಾಧ್ಯತೆ ದಟ್ಟವಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದಂತು ಗ್ಯಾರಂಟಿ ಎಂದು ಹೇಳಲಾಗಿದೆ.
ಶೇ. 10ರಷ್ಟು ದರ ಏರಿಕೆ ಮಾಡಲು ನಿರ್ಧರಿಸಿಲಾಗಿದ್ದು, ಆಯಾ ದರ್ಶಿನಿ, ಹೋಟೆಲ್ ನಿರ್ಧಾರಕ್ಕೆ ತಕ್ಕಂತೆ ರೇಟ್ ಹೈಕ್ ಮಾಡಲು ಚಿಂತನೆ ನಡೆದಿದೆ. ಕೇವಲ ಹಾಲಿನ ಬೆಲೆ ಮಾತ್ರವಲ್ಲ, ತರಕಾರಿ, ದವಸ ಧಾನ್ಯಗಳ ಬೆಲೆ ಹೆಚ್ಚಳದ ಕಾರಣ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೋಟೆಲ್​ ಮಾಲೀಕರ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
