ಬೆಂಗಳೂರು:ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್​ ದರ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಂಗಳವಾರದಿಂದ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಮದ್ಯಗಳು ಲಭ್ಯವಾಗಿವೆ. ಪ್ರೀಮಿಯಂ ಮದ್ಯದ ಮೇಲೆ ಗರಿಷ್ಠ 600 ರೂ.ವರೆಗೆ ದರ ಇಳಿಯಾಗಿದೆ. ಜತೆಗೆ, ಬಿಯರ್​ ಬಾಟಲ್​ ಮೇಲೆ 20 ರೂ. ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ 32ಕ್ಕಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳು ಬ್ರ್ಯಾಂಡ್​​ನಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ಮಾರಾಟ ಮಾಡುತ್ತಿವೆ. ಬ್ರ್ಯಾಂಡ್​ಗಳ ಬೆಲೆಯ ಅನುಸಾರ 18 ಸ್ಲ್ಯಾಬ್​ಗಳಾಗಿ ವಿಂಗಡಿಸಲಾಗಿದೆ. 1ರಿಂದ 5ನೇ ಸ್ಲ್ಯಾಬ್​ವರೆಗಿನ ಶೇ.75, 6ರಿಂದ 12ನೇ ಸ್ಲ್ಯಾಬ್​ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ.20 ಹಾಗೂ 13ರಿಂದ 18ವರೆಗಿನ ಸ್ಲ್ಯಾಬ್​ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ.5 ಆದಾಯ ಸರ್ಕಾರಕ್ಕೆ ಬರುತ್ತದೆ.ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರೀಮಿಯಂ ಸ್ಲ್ಯಾಬ್​ ಮದ್ಯದ ದರ ದುಬಾರಿಯಾಗಿತ್ತು. ಈ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿತ್ತು. ಗಡಿ ಭಾಗದ ಜಿಲ್ಲೆಗಳ ಜನರು, ನೆರೆಯ ರಾಜ್ಯಗಳಿಗೆ ತೆರಳಿ ಖರೀದಿಸುತ್ತಿದ್ದರು. ಇದರಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗುತ್ತಿತ್ತು. ಮಾರಾಟ ಹೆಚ್ಚಿಸಿ ಆದಾಯ ಗಳಿಸುವ ಉದ್ದೇಶದಿಂದ ಸರ್ಕಾರ, ಹೆಚ್ಚುವರಿ ಅಬಕಾರಿ ಸುಂಕ (ಇಎಡಿ) ಪರಿಷ್ಕರಿಸಿ ಪ್ರೀಮಿಯಂ ಮದ್ಯದ ದರ ಇಳಿಸಿದೆ.
ಗರಿಷ್ಠ 600 ರೂ. ಇಳಿಕೆಫುಲ್​​ ಬಾಟಲ್​ ರಮ್​, ವಿಸ್ಕಿ, ಬ್ರಾಂಡಿಗಳ ಮೇಲೆ ಗರಿಷ್ಠ 500-600 ರೂ.ವರೆಗೆ ದರ ಕಡಿಮೆಇತರ ಪ್ರೀಮಿಯಂ ಮದ್ಯದ ಬಾಟಲ್​ಗಳ ಮೇಲೆ ಕನಿಷ್ಠ 400 ರೂ.ನಿಂದ ಗರಿಷ್ಠ 600 ರೂ. ಇಳಿಕೆ18 ಸ್ಲ್ಯಾಬ್​ಗಳ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿದೆ. ಮೊದಲ 3 ಸ್ಲ್ಯಾಬ್​ಗಳಲ್ಲಿ ದರ ವ್ಯತ್ಯಸವಾಗಿಲ್ಲ4ನೇ ಸ್ಲ್ಯಾಬ್​ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆ. 5ನೇ ಸ್ಲ್ಯಾಬ್​ನಿಂದ 16ನೇ ಸ್ಲ್ಯಾಬ್​ವರೆಗೆ ದರ ಇಳಿಕೆ
ದೇಶಕ್ಕೆ ಬುದ್ಧಿ ಹೇಳೋ ಖರ್ಗೆ ಇಂತಹ ಕೆಲಸ ಮಾಡಬಾರದು
ಸತತ 4ನೇ ಬಾರಿ ಬಿಯರ್​ ಬೆಲೆ ಹೆಚ್ಚಳಕಾಂಗ್ರೆಸ್​ ಸರ್ಕಾರ ಸತತ 4ನೇ ಬಾರಿ ಬಿಯರ್​ ದರ ಹೆಚ್ಚಿಸಿದೆ. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿಯೂ ಐಎಂಎಲ್​ ಮೇಲೆ ಶೇ.20 ಮತ್ತು ಬಿಯರ್​ ಮೇಲೆ ಶೇ.10 ಸುಂಕ ಹೆಚ್ಚಿಸಿತ್ತು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್​ ಮೇಲೆ ಹೆಚ್ಚುವರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಇದೀಗ 180 ಎಂಎಲ್​ ಬಿಯರ್​ ಮೇಲೆ 20 ರೂ. ಹೆಚ್ಚಿಸಲಾಗಿದೆ. ಶೇ.5ಕ್ಕಿಂತ ಕೆಳಗೆ ಅಲ್ಕೋಹಾಲ್​ ಪ್ರಮಾಣವಿದ್ದರೆ ಒಂದು ತೆರಿಗೆ, ಶೇ.5ರಿಂದ ಶೇ.6.5ರವರೆಗೆ ಮತ್ತು ಶೇ.6.5ರಿಂದ ಶೇ.8ರವರೆಗೆ ಅಲ್ಕೋಹಾಲ್​ ಪ್ರಮಾಣದಲ್ಲಿ ಒಂದು ಬಗೆಯ ತೆರಿಗೆ ಇರಲಿದೆ.
ಬಿಯರ್​ ದರ ಪರಿಷ್ಕರಣೆ ವಿವರಬ್ರ್ಯಾಂಡ್​​ ಹಿಂದಿನ ದರ ಈಗಿನ ದರಬುಲೆಟ್​ 120               150ಎಲ್​ಪಿಎಸ್​ 130           155ಯುಬಿ 145                   160ಕೆಎ್​ಎಸ್​ 185               195ಕೆಎ್​ಯುಎಂ 235         245ಬಿಯುಡಿ  235               245ಹೈವಾಡ್ಸ್​ 135              155ನಾಕ್​ಔಟ್​ 170               180ರಾಯಲ್​ ಚಾಲೆಂಜ್​120 150
ಬಿಯರ್​ ಮೇಲೆ ವರ್ಷಕ್ಕೆ 4ನೇ ಬಾರಿ ದರ ಹೆಚ್ಚಿಸಲಾಗಿದೆ. ಪ್ರೀಮಿಯಂ ಮದ್ಯದ ದರ ಇಳಿಕೆ ಮಾಡಿದರೂ ನೆರೆರಾಜ್ಯಗಳಿಗೆ ಹೋಲಿಸಿದರೂ ಸಮನಾಗಿಲ್ಲ. ದರ ಇಳಿಕೆಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಬಿಯರ್​ ಉತ್ತೇಜನಕ್ಕೆ ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು.ಕರುಣಾಕರ ಹೆಗ್ಡೆ, ಉಪಾಧ್ಯಕ್ಷ, ರಾಜ್ಯ ಮದ್ಯ ಮಾರಾಟ ಒಕ್ಕೂಟ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + 4 =
Remember me
