ಬೆಂಗಳೂರು:ಮೂರೂವರೆ ತಿಂಗಳ ಹಿಂದೆ ಕಾಡುಗೋಡಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದ ಅರ್ಚಕರನ್ನು ಕೊಂದು ಹೂತಿಟ್ಟಿದ್ದ ಶವವನ್ನು ತಹಸೀಲ್ದರ್​ ಸಮ್ಮುಖದಲ್ಲಿ ಗುರುವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಅರ್ಚಕ ನೀಲಕಂಠ ದೀಕ್ಷಿತ್​ ಅಲಿಯಾಸ್​ ದೊರೆ (57) ಮೃತರು. ಶವದ ಮೇಲಿನ 4 ಉಂಗುರ, ಜನಿವಾರ ಗುರುತಿನ ಆಧಾರದ ಮೇಲೆ ನೀಲಕಂಠ ದೀಕ್ಷಿತ್​ ಎಂಬುದು ಕುಟುಂಬ ಸದಸ್ಯರು ದೃಢಪಡಿಸಿದರು. ಆನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸೆ.5ರಂದು ಕಾಣೆಯಾಗಿದ್ದ ಅರ್ಚಕರನ್ನು ಅಂದು ರಾತ್ರಿಯೇ ಕಿಡಿಗೇಡಿಗಳು ಕೊಂದು ಅಂಗಡಿಯಲ್ಲೇ 2 ದಿನ ಶವ ಇಟ್ಟುಕೊಂಡಿದ್ದರಂತೆ!
ಸೆ.5ರಂದು ಕಾಣೆಯಾಗಿದ್ದರು. ಪೊಲೀಸರ ತನಿಖೆ ವೇಳೆ ಅರ್ಚಕರಿಂದ 10 ಲಕ್ಷ ರೂ. ಸಾಲ ಪಡೆದಿದ್ದ ಹಾರ್ಡ್​ವೇರ್​ ಅಂಗಡಿ ಮಾಲೀಕ ಮಂಜುನಾಥ್​, ತನ್ನ ಸಹಚರರ ಜತೆ ಸೇರಿ ನೀಲಕಂಠ ದೀತ್​ನನ್ನು ಹತ್ಯೆ ಮಾಡಿ ಶವವನ್ನು ಹೂತಿಟ್ಟಿರುವ ಕೃತ್ಯ ಬೆಳಕಿಗೆ ಬಂದಿತ್ತು. ಆರೋಪಿಗಳ ಹೇಳಿಕೆ ಆಧರಿಸಿ ಶವ ಹೂತಿಟ್ಟ ಜಾಗ ಪತ್ತೆಹಚ್ಚಿದ ಪೊಲೀಸರು ಬೆಂಗಳೂರು ಪೂರ್ವ ತಾಲೂಕಿನ ತಹಸೀಲ್ದರ್​ ಎಸ್​. ಅಜಿತ್​ ಕುಮಾರ್​ ರೈ ಸಮುಖದಲ್ಲಿ ಮೃತ ದೇವನ್ನು ಹೊರತೆಗೆದರು.ಇದನ್ನೂ ಓದಿರಿ6 ದಿನದ ಹಿಂದೆ ನಾಪತ್ತೆಯಾಗಿದ್ದ ತಾಯಿ-ಮಕ್ಕಳು ಊರ ಕೆರೆಯಲ್ಲಿ ಶವವಾಗಿ ಪತ್ತೆ!
ನೀಲಕಂಠ ದೀಕ್ಷಿತ್​ ಕಣ್ಮೆರೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಮೊದಲು ಅರ್ಚಕರ ಬಳಿ ಸಾಲ ಪಡೆದಿದ್ದವರನ್ನು ವಿಚಾರಣೆ ಮಾಡಿದ್ದರು. ಕಾಡುಗೋಡಿ ಯಲ್ಲಾರೆಡ್ಡಿ ಸರ್ಕಲ್​ನಲ್ಲಿನ ಹಾರ್ಡ್​ವೇರ್​ ಅಂಗಡಿ ಮಾಲೀಕ ಮಂಜುನಾಥ್​, 2 ವರ್ಷಗಳ ಹಿಂದೆ ಅರ್ಚಕರ ಬಳಿ ಬಡ್ಡಿಗೆ 10 ಲಕ್ಷ ರೂ. ಸಾಲ ಪಡೆದಿದ್ದ. ಸೆ.5ರ ರಾತ್ರಿ ಸಾಲದ ಹಣ ಕೇಳಲು ಅಂಗಡಿ ಬಳಿಗೆ ಹೋದ ಅರ್ಚಕರನ್ನು ಒಳಗೆ ಕರೆದು ಅವರ ಕ್ರಿಕೆಟ್​ ವಿಕೆಟ್​ನಿಂದ ತಲೆಗೆ ಹೊಡೆದು ಚಾಕುವಿನಿಂದ ಚುಚ್ಚಿ ಮಂಜುನಾಥ್​ ಹತ್ಯೆ ಮಾಡಿದ್ದ. ಅಂಗಡಿಯಲ್ಲಿದ್ದ ಸಿಬ್ಬಂದಿ ಗೋಪಿ ಮತ್ತು ಮಂಜುನಾಥ್​ ಎಂಬುವರು ಪ್ರಶ್ನಿಸಿದಾಗ ಅವರಿಗೆ ಹಣದ ಆಮಿಷವೊಡ್ಡಿ ಬಾಯಿ ಮುಚ್ಚಿಸಿದ್ದ.
ಶವವನ್ನು ಅಂಗಡಿಯಲ್ಲಿಯೇ ಎರಡು ದಿನ ಇಟ್ಟುಕೊಂಡು ರ್ಟಪೆಟ್​ ಆಯಿಲ್​ನಿಂದ ರಕ್ತದ ಕಲೆ ತೊಳೆದಿದ್ದರು. ಆನಂತರ ಶವವನ್ನು ಕಾರಿನಲ್ಲಿ ತಿರುಮಲಶೆಟ್ಟಿ ಕ್ರಾಸ್​ನ ಕಲ್ಯಾಣ ಮಂಟಪದ ಹಿಂಭಾಗದ ಸರ್ಕಾರಿ ಜಾಗದಲ್ಲಿ ಕಸ ವಿಂಗಡಣೆ ಘಟಕ ನಿರ್ಮಾಣಕ್ಕೆ ಪಾಯ ತೆಗೆದಿದ್ದ ಸಮೀಪವೇ ಮಣ್ಣು ತೆಗೆದು ಶವ ಹೂತಿಟ್ಟು ಬಂದಿದ್ದರು.ಇದನ್ನೂ ಓದಿರಿಗಂಡ-ಮಕ್ಕಳನ್ನು ಬಿಟ್ಟು ಬರಲು ಒಪ್ಪದ ಮಹಿಳೆ ಬದುಕು ದುರಂತ ಅಂತ್ಯ
ಈ ನಡುವೆ ತನಿಖೆ ಚುರುಕುಗೊಳಿಸಿದ ಪೊಲೀಸರು ಅರ್ಚಕರ ಬಳಿ ಸಾಲ ಪಡೆದಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದರು. ಎಲ್ಲರೂ ಮಾಜಿ ಕಾರ್ಪೋರೇಟರ್​ ಅಂಜನೇಯ ರೆಡ್ಡಿ ಮೂಲಕ ನಿಗದಿತ ಅವಧಿಯಲ್ಲಿ ಬಡ್ಡಿ ಕೊಡುತ್ತಿದ್ದಾಗಿ ಹೇಳಿದ್ದರು. ಆದರೆ, ಆರೋಪಿ ಮಂಜುನಾಥ್​ ಮಾತ್ರ ಅಸಲು ಬಡ್ಡಿ ಕೊಟ್ಟಿದ್ದಾಗಿ ಹೇಳಿದ್ದ. ಅನುಮಾನಗೊಂಡ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಈತನ ಅಂಗಡಿಯಲ್ಲಿ ಕೆಲಸಕ್ಕಿದ್ದ ಗೋಪಿ ಮತ್ತು ಮಂಜುನಾಥ್​ ಎಂಬುವವರಿಗೆ ಆರೋಪಿ ಮಂಜುನಾಥ್​ ದ್ವಿಚಕ್ರ ವಾಹನ ಕೊಡಿಸಿದ್ದ. ಅಲ್ಲದೆ ಅವರಿಬ್ಬರಿಗೆ ಆಗಾಗ್ಗೆ ದುಡ್ಡು ಕೊಡುತ್ತಿದ್ದ. ಗೋಪಿ ಮತ್ತು ಮಂಜುನಾಥ್​ ದುಂದು ವೆಚ್ಚ ಮಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ಪೊಲೀಸರು ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು, ಅರ್ಚಕರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಯಿತು.
ನವ ವಿವಾಹಿತೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ! 15 ದಿನದ ಬಳಿಕ ಬಯಲಾಯ್ತು ರಹಸ್ಯ

ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

ಬಿಜೆಪಿ ಶಾಸಕನಿಂದ ದಂಡ ವಸೂಲಿ ಮಾಡಿದ ಪೊಲೀಸರಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 11 =
Remember me
