ಹಾಸನ:ದೆಹಲಿಯಲ್ಲಿ ನಡೆಯಲಿರುವ ಜ.26ರ ಗಣರಾಜ್ಯೋತ್ಸವ ವೀಕ್ಷಣೆಗೆ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಬೇಲೂರು ತಾಲೂಕು ಅಂಗಡಿಹಳ್ಳಿಯ ಹೂರಾಜ್ ಮತ್ತು ಚಂದೋಸೆ ದಂಪತಿ ಆಯ್ಕೆಯಾಗಿದ್ದಾರೆ. ಇವರೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.
ಕಾಡುಮೇಡು ಬಿಟ್ಟರೆ ಹೊರಪ್ರಪಂಚ ಕಾಣದ ದಂಪತಿಗೆ ಕೇಂದ್ರ ಸರ್ಕಾರದ ಆಹ್ವಾನ ಸಂತಸ ತಂದಿದೆ. ಗ್ರಾಮದಲ್ಲೂ ಸಡಗರದ ವಾತಾವರಣ ನಿರ್ವಿುಸಿದೆ. ನರೇಂದ್ರ ಮೋದಿ ಜತೆಗೆ ಸಂವಾದಕ್ಕೆ ಅವಕಾಶ ಇರುವುದರಿಂದ ಹಕ್ಕಿಪಿಕ್ಕಿ ಸಮುದಾಯದ ಸಮಸ್ಯೆ ಮನವರಿಕೆ ಮಾಡಿಕೊಡಲು ಹೂರಾಜ್ ನಿರ್ಧರಿಸಿದ್ದಾರೆ.
ನೋಡಲ್ ಅಧಿಕಾರಿ ನೇಮಕ:ಗಣರಾಜ್ಯೋತ್ಸವ ವೀಕ್ಷಣೆಗೆ ತೆರಳುತ್ತಿರುವ ಹೂರಾಜ್ ಮತ್ತು ಚಂದೋಸೆ ನೆರವಿಗೆ ಕೊಡಗು ಸಮಗ್ರ ಗಿರಿಜನ ಯೋಜನಾ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಅವರು ಜತೆಗಿರುತ್ತಾರೆ.
ಜ.21ರ ಬೆಳಗ್ಗೆ ಮೈಸೂರಿನ ಬುಡಕಟ್ಟು ಸಂಶೋಧನಾ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭದ ನಂತರ ಸಂಜೆ 5ಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಊಟ, ವಸತಿ ಸೇರಿ ಎಲ್ಲ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ.
ಪ್ರತಿ ರಾಜ್ಯದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ವಿವಿಧ ರಾಜ್ಯಗಳ ಸಂಸ್ಕೃತಿ, ಜೀವನ ಶೈಲಿ ಅರಿಯುವ ಹಾಗೂ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶವಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳ ಸಾಲಿನಲ್ಲಿ ಕುಳಿತು ಧ್ವಜಾರೋಹಣ ವೀಕ್ಷಿಸುತ್ತಾರೆ. 27ರ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಪ್ರಧಾನಿ ಹಾಗೂ ರಾಷ್ಟಪತಿ ಜತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.2ರಂದು ವಿಮಾನ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಪ್ರಧಾನಿ ಜತೆ ಮಾತನಾಡುವ ಅವಕಾಶ ದೊರೆತಿದ್ದು ತುಂಬಾ ಖುಷಿ ತಂದಿದೆ. ಅತಿಥಿ ಸತ್ಕಾರ್ಯಕ್ಕೆ ಭಾಜನಾಗುತ್ತೇನೆಂಬ ಊಹೆಯೂ ಇರಲಿಲ್ಲ. ಬುಡಕಟ್ಟು ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರಪತಿ ಗಮನಕ್ಕೆ ತರುತ್ತೇನೆ.
| ಹೂರಾಜ್ ಅಂಗಡಿಹಳ್ಳಿ ನಿವಾಸಿ
ಸತ್ತರೆ ಹೂಳಲು ಜಾಗವಿಲ್ಲ
ಹಕ್ಕಿಪಿಕ್ಕಿ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಿ ಗಮನಕ್ಕೆ ತರುತ್ತೇನೆ. 1961-62ರಲ್ಲಿ ಅಂದಿನ ಜಿಲ್ಲಾಧಿಕಾರಿ ಅಂಗಡಿಹಳ್ಳಿಯಲ್ಲಿ 18 ಕುಟುಂಬಕ್ಕೆ 12 ಎಕರೆ ಭೂಮಿ ಮಂಜೂರು ಮಾಡಿದ್ದು ಬಿಟ್ಟರೆ ಬೇರೆ ಯಾವ ಯೋಜನೆಗಳೂ ತಲುಪಿಲ್ಲ. ಈಗ 350 ಕುಟುಂಬ ವಾಸಿಸುತ್ತಿದ್ದು, ಸತ್ತರೆ ಹೂಳಲೂ ಜಾಗವಿಲ್ಲ. 100 ಎಕರೆ ಜಮೀನು ನೀಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರೂ ಭೂಮಿ ದೊರೆಯಲಿಲ್ಲ ಎಂದು ಹೂರಾಜ್ ‘ವಿಜಯವಾಣಿ’ಗೆ ತಿಳಿಸಿದರು. ವಸತಿ ನಿವೇಶನಕ್ಕಾಗಿ ಸಲ್ಲಿಸಿದ್ದ 750 ಅರ್ಜಿಗಳನ್ನೂ ಜಿಲ್ಲಾಡಳಿತ ತಿರಸ್ಕರಿಸಿದೆ. ಗಿಡಮೂಲಿಕೆಗಳಿಂದ ಔಷಧ ತಯಾರಿಸಿ ಮಾರಾಟ ಮಾಡá-ವ ನಮ್ಮ ಮೂಲ ಕಸುಬುಗೂ ಅಡ್ಡಿಯಾಗá-ತ್ತಿದೆ. ಸರ್ಕಾರ ಕೀಲು ಉತ್ಪನ್ನಗಳ ಸಂಗ್ರಹಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬುಡಕಟ್ಟು ಸಮುದಾಯಕ್ಕೆ ಸೇರಿದ ದಂಪತಿಯನ್ನು ಗಣರಾಜ್ಯೋತ್ಸವ ವೀಕ್ಷಣೆಗೆ ಆಯ್ಕೆ ಮಾಡುವಂತೆ ಸರ್ಕಾರದಿಂದ ನಿರ್ದೇಶನ ಬಂದಿತ್ತು. ಹೂರಾಜ್ ಮತ್ತು ಚಂದೋಸೆ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. 2013ರಿಂದ ಪ್ರತಿ ವರ್ಷ ಇಬ್ಬರನ್ನು ದೆಹಲಿಗೆ ಕಳುಹಿಸಿಕೊಡಲಾಗುತ್ತಿದೆ.
| ಡಾ. ಟಿ.ಟಿ.ಬಸವನಗೌಡ ನಿರ್ದೇಶಕ, ಬುಡಕಟ್ಟು ಸಂಶೋಧನಾ ಸಂಸ್ಥೆ
| ಮಲ್ಲಿಕಾರ್ಜುನ ಕೊಚ್ಚರಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
